AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ದಿನದ ಗಳಿಕೆಯಲ್ಲಿ ‘ಭೀಮ’ನ ಅಬ್ಬರ; ಸ್ಯಾಂಡಲ್​ವುಡ್​ಗೆ ಹೊಸ ಕಳೆ

Bheema Movie Collection: ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಆಗಸ್ಟ್ 09ರಂದು ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಮಾದಕ ವಸ್ತುವಿನ ಪ್ರಸಾರ ಹಾಗೂ ಅದರ ಪರಿಣಾಮ ಯುವಕರ ಮೇಲೆ ಹೇಗೆ ಆಗುತ್ತಿದೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ.

ಮೊದಲ ದಿನದ ಗಳಿಕೆಯಲ್ಲಿ ‘ಭೀಮ’ನ ಅಬ್ಬರ; ಸ್ಯಾಂಡಲ್​ವುಡ್​ಗೆ ಹೊಸ ಕಳೆ
ದುನಿಯಾ ವಿಜಯ್
ರಾಜೇಶ್ ದುಗ್ಗುಮನೆ
|

Updated on: Aug 10, 2024 | 8:28 AM

Share

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ್ದ ‘ಭೀಮ’ ಸಿನಿಮಾ ಮೊದಲ ದಿನ ಯಶಸ್ವಿ ಪ್ರದರ್ಶನ ಕಂಡಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಪ್ರಯತ್ನ ಈ ಸಿನಿಮಾದಿಂದ ಆಗಿದೆ. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಮಾಡಿದೆ. ವೀಕೆಂಡ್​ನಲ್ಲಿ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಇನ್ನು, ಮುಂದಿನ ವಾರ ಆಗಸ್ಟ್ 15 ಕೂಡ ಇದೆ. ಸರ್ಕಾರಿ ರಜೆಯ ಕಾರಣಕ್ಕೆ ಜನರು ಥಿಯೇಟರ್​ಗೆ ಕಾಲಿಡುತ್ತಾರೆ.

ದುನಿಯಾ ವಿಜಯ್ ಅವರ ನಟನೆಯ ‘ಭೀಮ’ ಮೊದಲ ದಿನ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ. ಎಲ್ಲಾ ಸಿನಿಮಾಗಳ ಕಲೆಕ್ಷನ್ ಬಗ್ಗೆ ಈ ವೆಬ್​ಸೈಟ್ ಮಾಹಿತಿ ನೀಡುತ್ತಾ ಬಂದಿದೆ. ತಂಡದ ಕಡೆಯಿಂದ ಕಲೆಕ್ಷನ್ ಬಗ್ಗೆ ಮಾಹಿತಿ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ದುನಿಯಾ ವಿಜಯ್ ಅವರು ‘ಸಲಗ’ ಸಿನಿಮಾ ಮಾಡಿ ಯಶಸ್ಸು ಕಂಡರು. ಇದಾದ ಬಳಿಕ ಅವರು ನಿರ್ದೇಶನ ಮಾಡಿದ ಚಿತ್ರ ಎಂದರೆ ಅದು ‘ಭೀಮ’. ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆಲವು ಮಾಫಿಯಾಗಳ ಬಗ್ಗೆ ತೋರಿಸಲಾಗಿದೆ. ಯುವ ಜನಾಂಗ ಗಾಂಜಾ ಚಟಕ್ಕೆ ಬಿದ್ದು ಯಾವ ರೀತಿಯಲ್ಲಿ ಹಾಳಾಗುತ್ತಿದೆ ಎಂದು ತೋರಿಸುವ ಪ್ರಯತ್ನವೂ ನಡೆದಿದೆ. ಈ ಸಿನಿಮಾನ ಒಂದು ವರ್ಗ ಇಷ್ಟಪಟ್ಟಿದೆ. ಸಿನಿಮಾದಲ್ಲಿ ಬಳಕೆ ಆದ ಭಾಷೆ ಹಾಗೂ ಅತಿಯಾದ ರೌಡಿಸಂ ಕಾರಣಕ್ಕೆ ಸಿನಿಮಾ ಕೆಲವರಿಗೆ ಇಷ್ಟ ಆಗಿಲ್ಲ.

ಇದನ್ನೂ ಓದಿ: ‘ಭೀಮ’ ಸಿನಿಮಾನಲ್ಲಿ ‘ಸಲಗ 2’ ಸುಳಿವು ಕೊಟ್ಟ ದುನಿಯಾ ವಿಜಯ್

ಮೊದಲ ದಿನ ಚಿತ್ರ 3.5 ಕೋಟಿ ರೂಪಾಯಿ ಎಂದರೆ ಅದು ದೊಡ್ಡ ಮೊತ್ತವೇ. ಈ ಚಿತ್ರಕ್ಕೆ ಯಾವುದೇ ಫ್ಯಾನ್​ ಶೋ ಇರಲಿಲ್ಲ. ಆದಾಗ್ಯೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಇತ್ತೀಚೆಗೆ ರಿಲೀಸ್ ಆದ ಹಿಂದಿ ಸಿನಿಮಾಗಳು ಮೊದಲ ದಿನ ಇಷ್ಟು ಗಳಿಕೆ ಮಾಡಲು ವಿಫಲವಾಗಿವೆ. ‘ಭೀಮ’ ಕಾರಣದಿಂದ ಚಿತ್ರಮಂದಿರಗಳಿಗೆ ಹೊಸ ಹುರುಪು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.