ಬಲವಂತದ ಮದುವೆ, ನಟಿಯ ವಿರುದ್ಧ ನಿರ್ದೇಶಕ ದೂರು

|

Updated on: Jan 26, 2025 | 12:45 PM

Harshavardhan-Shahshikala: ನಿರ್ದೇಶಕ ಹರ್ವರ್ಧನ್ ಎಂಬುವರು ಜನಪ್ರಿಯ ನಟಿ ಶಶಿಕಲಾ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ಶಶಿಕಲಾ ಬೆದರಿಕೆ ಹಾಕಿ ತನ್ನನ್ನು ಬಲವಂತದಿಂದ ಮದುವೆ ಆಗಿದ್ದಾರೆ ಎಂದು ಹರ್ಷವರ್ಧನ್ ಆರೋಪ ಮಾಡಿದ್ದಾರೆ. ನಿರ್ದೇಶಕ ಹರ್ಷವರ್ಧನ್ ವಿರುದ್ಧ ಈ ಹಿಂದೆ ನಟಿ ಶಶಿಕಲಾ ಸಹ ದೂರು ನೀಡಿದ್ದರು.

ಬಲವಂತದ ಮದುವೆ, ನಟಿಯ ವಿರುದ್ಧ ನಿರ್ದೇಶಕ ದೂರು
Shashikala Harsha
Follow us on

ಕನ್ನಡದ ಹಲವಾರು ಸಿನಿಮಾ, ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ನಟಿ ಶಶಿಕಲಾ ವಿರುದ್ಧ ನಿರ್ದೇಶಕನೊಬ್ಬ ದೂರು ನೀಡಿದ್ದಾನೆ. ಶಶಿಕಲಾ ತಮಗೆ ಬೆದರಿಕೆ ಹಾಕಿ ವಿವಾಹ ಆಗುವಂತೆ ಮಾಡಿದ್ದಾರೆ ಎಂದು ನಿರ್ದೇಶಕ ಆರೋಪಿಸಿದ್ದಾನೆ. ಆದರೆ ನಟಿ ಶಶಿಕಲಾ ಸಹ ಈ ಹಿಂದೆ ನಿರ್ದೇಶಕನ ವಿರುದ್ಧ ದೂರು ನೀಡಿ, ಆತ ಜೈಲು ಪಾಲು ಸಹ ಆಗಿದ್ದ. ಆದರೆ ಈ ಬಾರಿ ನಿರ್ದೆಶಕನೇ ನಟಿಯ ವಿರುದ್ಧ ದೂರು ನೀಡಿದ್ದಾನೆ.

ಏನಿದು ಪ್ರಕರಣ?

ಶಶಿಕಲಾ, ‘ಪ್ರಜಾರಾಜ್ಯ’ ಹೆಸರಿನ ಸಿನಿಮಾದಲ್ಲಿ ನಟಿಸುವಾಗ ನಿರ್ದೇಶಕ ಡಿಜೆ ಹರ್ಷವರ್ಧನ ಅಲಿಯಾಸ್ ವಿಜಯಭಾರ್ಗವ ಎಂಬುವನ ಪರಿಚವಾಗಿದೆ. ಆ ಬಳಿಕ ಇಬ್ಬರೂ ಸಹಬಾಳ್ವೆ ನಡೆಸಲು ಆರಂಭಿಸಿದ್ದಾರೆ. ಆದರೆ ನಟಿ ಹೇಳಿರುವಂತೆ ಆ ನಂತರ ಹರ್ಷವರ್ಧನಗೆ ಬೇರೆ ಮಹಿಳೆಯರ ಸಂಪರ್ಕ ಸಿಕ್ಕಿ ತನಗೆ ಕೈಕೊಟ್ಟು ಓಡಿ ಹೋಗಿದ್ದ ಆಗ ಪೊಲೀಸರಿಗೆ ದೂರು ನೀಡಿದ್ದರು ನಟಿ ಶಶಿಕಲಾ. ಆಗ ಅಂಗಲಾಚಿ ದೂರು ವಾಪಸ್ ತೆಗೆದುಕೊಳ್ಳುವಂತೆ ಮಾಡಿದ್ದ ಹರ್ಷವರ್ಧನ್, ಇನ್ನು ಮುಂದೆ ಸರಿಯಾಗಿ ಇರುತ್ತೀನಿ ಎಂದು ಪ್ರಮಾಣ ಮಾಡಿ ಶಶಿಕಲಾ ಜೊತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಈಗ ಮತ್ತೆ ಶಶಿಕಲಾಗೆ ಕೈಕೊಟ್ಟು ಹೋಗಿದ್ದಾರಂತೆ.

ನಿರ್ದೇಶಕ ಹೇಳುವುದೇನು?

ಆದರೆ ನಿರ್ದೇಶಕ ಹರ್ಷವರ್ಧನ್ ಹೇಳುವುದೇ ಬೇರೆ. ಶಶಿಕಲಾ ಮೇಲೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹರ್ಷವರ್ಧನ್, ನಟಿ ಶಶಿಕಲಾ ನನಗೆ ಬೆದರಿಕೆ ಹಾಕಿ ಬಲವಂತದಿಂದ ಮದುವೆ ಆಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಿರ್ದೇಶಕ ಹರ್ಷವರ್ಧನ್ ನೀಡಿರುವ ದೂರಿನ ಅನ್ವಯ, ನಿಮ್ಮ ಸಿನಿಮಾ ನಿರ್ಮಾಣ ಮಾಡುತ್ತೇನೆ ನನ್ನ ಜೊತೆ ಸಂಬಂಧದಲ್ಲಿ ಇರುವ ಎಂದು ನಟಿ ಶಶಿಕಲಾ, ಹರ್ಷವರ್ಧನ್​ಗೆ ಹೇಳಿದ್ದರಂತೆ. ಅದರಂತೆ ಹರ್ಷವರ್ಧನ್, ಮದುವೆ ಆಗುವುದಿಲ್ಲ ಆದರೆ ರಿಲೇಷನ್​ನಲ್ಲಿ ಇರುತ್ತೇನೆ ಎಂದು ಒಪ್ಪಿಕೊಂಡರಂತೆ. ಆ ನಂತರ ಬೆದರಿಕೆ ಹಾಕಿ ಮದುವೆ ಸಹ ಆದರಂತೆ. ಆದರೆ ಮನೆಗೆ ಆಗಾಗ್ಗೆ ನಿರ್ದೇಶಕರು, ನಿರ್ಮಾಪಕರು ಬರುತ್ತಿದ್ದರಂತೆ. ಆಗೆಲ್ಲ ನಿರ್ದೇಶಕ ಹರ್ಷ ಅನ್ನು ಹೊರಗೆ ಕಳಿಸಲಾಗುತ್ತಿಂತೆ. ಇದೆಲ್ಲ ಸರಿ ಬರದೆ ಹರ್ಷವರ್ಧನ್, ಶಶಿಕಲಾ ಅನ್ನು ತ್ಯಜಿಸಿದ್ದರಂತೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ

ಆದರೆ ಅದಾದ ಬಳಿಕ, ತಾಯಿಯೂ ತನ್ನ ಜೊತೆ ಇರುತ್ತಾಳೆ ಎಂಬ ಕಾರಣಕ್ಕೆ ಮತ್ತೆ ನಟಿ ಶಶಿಕಲಾ ಜೊತೆಗೆ ವಾಸ ಮಾಡಲು ಒಪ್ಪಿಕೊಂಡರಂತೆ ಹರ್ಷವರ್ಧನ್. ಆದರೆ 2024 ರಲ್ಲಿ ಹರ್ಷವರ್ಧನ್ ಹಾಗೂ ತಾಯಿಯನ್ನು ಮನೆಯಿಂದ ಆಚೆ ಹಾಕಿದರಂತೆ ಶಶಿಕಲಾ. ಅವರಿಂದ ದೂರ ಬಂದರೂ ಕರೆ ಮಾಡಿ, ಇನ್ನಿತರೆ ರೀತಿಗಳಲ್ಲಿ ತನಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದು ಹರ್ಷವರ್ಧನ್ ದೂರು ನೀಡಿದ್ದಾರೆ. ನಟಿಯ ಜೊತೆಗೆ ಅರುಣ್ ಕುಮಾರ್ ಎಂಬಾತನ ಮೇಲೂ ದೂರು ನೀಡಲಾಗಿದ್ದು, ಅರುಣ್ ಕುಮಾರ್, ಯೂಟ್ಯೂಬ್ ಚಾನೆಲ್ ಮೂಲಕ ತನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ