AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ನೆ, ಮೊನ್ನೆ ಬಂದವರಿಗೆ ನಾನು ಹೆದರಲ್ಲ.. ನಾನು ರಕ್ಷಣೆ ಕೇಳುವುದಿಲ್ಲ’

ಬೆಂಗಳೂರು: ನಿರ್ದೇಶಕ ಇಂದ್ರಜಿತ್‌ ಲಂಕೇಶ್​ರಿಗೆ CCB ಅಧಿಕಾರಿಗಳು ನಡೆಸಿದ ವಿಚಾರಣೆ ಮುಕ್ತಾಯಗೊಂಡಿದೆ. ಸಿಸಿಬಿ ಪೊಲೀಸರು ಇಂದ್ರಜಿತ್‌ರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ಬಳಿಕ ಮಾತನಾಡಿದ ಇಂದ್ರಜಿತ್​ ನಾನು ಸಂಪೂರ್ಣವಾಗಿ ನನ್ನ ಹೇಳಿಕೆಗೆ ಬದ್ಧ. ನಾನು ಏನೇನು ಹೇಳಿದ್ದೆ ಅದೇ ಮಾಹಿತಿ ನೀಡಿದ್ದೇನೆ. ಜೊತೆಗೆ, ನನ್ನ ಬಳಿ ಇದ್ದ ದಾಖಲೆಗಳನ್ನ ಸಿಸಿಬಿ ಮುಂದೆ ನೀಡಿದ್ದೇನೆ. ನಾನು ಬಂದಿರುವುದು ಸಾಮಾಜಿಕ ಕಳಕಳಿಯಿಂದ. ನಿನ್ನೆ ಮೊನ್ನೆ ಬಂದ ಕೆಲ ನಟರು ಮಾದಕ ವಸ್ತುವಿಗೆ ಬ್ರ್ಯಾಂಡ್ ಅಂಬಾಸಿಡರ್ ಥರ ಇದ್ರು. ಆ‌ದ […]

‘ನಿನ್ನೆ, ಮೊನ್ನೆ ಬಂದವರಿಗೆ ನಾನು ಹೆದರಲ್ಲ.. ನಾನು ರಕ್ಷಣೆ ಕೇಳುವುದಿಲ್ಲ’
ಇಂದ್ರಜಿತ್ ಲಂಕೇಶ್
KUSHAL V
|

Updated on:Aug 31, 2020 | 4:46 PM

Share

ಬೆಂಗಳೂರು: ನಿರ್ದೇಶಕ ಇಂದ್ರಜಿತ್‌ ಲಂಕೇಶ್​ರಿಗೆ CCB ಅಧಿಕಾರಿಗಳು ನಡೆಸಿದ ವಿಚಾರಣೆ ಮುಕ್ತಾಯಗೊಂಡಿದೆ. ಸಿಸಿಬಿ ಪೊಲೀಸರು ಇಂದ್ರಜಿತ್‌ರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಚಾರಣೆ ಬಳಿಕ ಮಾತನಾಡಿದ ಇಂದ್ರಜಿತ್​ ನಾನು ಸಂಪೂರ್ಣವಾಗಿ ನನ್ನ ಹೇಳಿಕೆಗೆ ಬದ್ಧ. ನಾನು ಏನೇನು ಹೇಳಿದ್ದೆ ಅದೇ ಮಾಹಿತಿ ನೀಡಿದ್ದೇನೆ. ಜೊತೆಗೆ, ನನ್ನ ಬಳಿ ಇದ್ದ ದಾಖಲೆಗಳನ್ನ ಸಿಸಿಬಿ ಮುಂದೆ ನೀಡಿದ್ದೇನೆ. ನಾನು ಬಂದಿರುವುದು ಸಾಮಾಜಿಕ ಕಳಕಳಿಯಿಂದ. ನಿನ್ನೆ ಮೊನ್ನೆ ಬಂದ ಕೆಲ ನಟರು ಮಾದಕ ವಸ್ತುವಿಗೆ ಬ್ರ್ಯಾಂಡ್ ಅಂಬಾಸಿಡರ್ ಥರ ಇದ್ರು. ಆ‌ದ ಕಾರಣದಿಂದ ಸಿಸಿಬಿ ಮುಂದೆ ಮಾಹಿತಿ ನೀಡಿದ್ದೇನೆ ಎಂದು ಲಂಕೇಶ್​ ಹೇಳಿದ್ದಾರೆ.

ಮಾಧ್ಯಮಗಳಿಗೆ ಹೆಸರು ಬಹಿರಂಗಪಡಿಸುವುದು ದೊಡ್ಡದಲ್ಲ. ಹಾಗೆ ಮಾಡಿದರೆ ಪೊಲೀಸ್ ತನಿಖೆಗೆ ತೊಂದರೆಯಾಗಲಿದೆ. ನನ್ನ ಬಳಿ‌ ಇದ್ದ ದಾಖಲೆಗಳು ಸಾರ್ವಜನಿಕವಾಗಿ ಬಹಿರಂಗವಾಗಬಾರದು. ದಾಖಲೆ ಸಹಿತ, ಈ ದಂಧೆಯಲ್ಲಿ‌ ಭಾಗಿಯಾದವರು, ಸರಬರಾಜುದಾರರ ಮಾಹಿತಿ ನೀಡಿದ್ದೇನೆ. ಉಳಿದ ಮಾಹಿತಿಯನ್ನ ನೀವು ಪೊಲೀಸರಿಂದಲೇ ಪಡೆಯಬೇಕು. 10-15 ಜನರ ಮಾಹಿತಿ, ಹೆಸರು, ಜಾಗಗಳ ಮಾಹಿತಿ ನೀಡಿದ್ದೇನೆ. ಪೊಲೀಸರು ತನಿಖೆಯಲ್ಲಿ ಯಶಸ್ವಿಯಾಗುವ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದ್ರಜಿತ್ ಲಂಕೇಶ್ ದಾಖಲೆಗಳಿಲ್ಲದೇ ಮಾತನಾಡುತ್ತಾರೆ ಎಂಬ ಸ್ಯಾಂಡಲ್‌ವುಡ್‌ ನಟರ ಹೇಳಿಕೆಗೆ ತಿರುಗೇಟು ನೀಡಿದ ನಿರ್ದೇಶಕ ಆ ರೀತಿ ಹೇಳಲು ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ಕುಟುಂಬ ಸಮೇತ ಕುಳಿತು ನೋಡುತ್ತಿರುತ್ತಾರೆ. ಹಾಗಾಗಿ, ದಾಖಲೆಗಳ ಸಮೇತ CCB ಮುಂದೆ ಹಾಜರುಪಡಿಸಿದ್ದೇನೆ. ಆದರೆ, ಮಾಧ್ಯಮಗಳ ಮುಂದೆ ಹೆಸರುಗಳನ್ನ ಬಹಿರಂಗಪಡಿಸಲು ಸಾಧ್ಯವಿಲ್ಲ. ಜೊತೆಗೆ, ಕೆಲ ಮಾಹಿತಿಗಳನ್ನ ನೋಡಿ ಪೊಲೀಸರಿಗೆ ಶಾಕ್ ಆಗಿದೆ ಎಂದು ತಿಳಿಸಿದರು.

‘ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು’ ಐದೂವರೆ ಗಂಟೆಗಳಲ್ಲಿ ಎಷ್ಟರ ಮಟ್ಟಿಗೆ ಚರ್ಚೆಯಾಗಿದೆ ಎಂಬುದು ನಿಮಗೂ ಅರಿವಿದೆ. ಪೊಲೀಸರು ತುಂಬ ಸಹಕಾರ ನೀಡಿದ್ದಾರೆ. ಇದೊಂದು ಉತ್ತಮ ಸೌಹಾರ್ದಯುತ ಭೇಟಿ. ನನ್ನ ಬಳಿ‌ ಇದ್ದ ದಾಖಲೆಗಳನ್ನ ನೀಡಿದ್ದೇನೆ. ನನಗೆ ಬೆಂಬಲ ನೀಡಿದ ರಾಜಕಾರಣಿಗಳು, ಪೊಲೀಸರು, ಸಾಮಾನ್ಯ ಜನರು ಮತ್ತು ಇಂಡಸ್ಟ್ರಿಯವರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.

ನಾನು ಗಾಳಿಯಲ್ಲಿ ಗುಂಡು ಹಾರಿಸುವಂತಹ ವ್ಯಕ್ತಿಯಲ್ಲ. ನನ್ನ ವಿರುದ್ಧ ಹಲವರು ವಾಗ್ದಾಳಿ ನಡೆಸಿದ್ದಾರೆ. ಅಂತಹವರ ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, CCB ಗೆ ಕೊಟ್ಟ ಸಾಕ್ಷ್ಯಾಧಾರಗಳ ಬಗ್ಗೆ ನಾನು ಹೇಳುವುದಿಲ್ಲ ಅಂತಾ ಹೇಳಿದರು. ಜೊತೆಗೆ, ನಾನು ಭದ್ರತೆ ಕೇಳಿಲ್ಲ, ಬೆಂಬಲ ನೀಡುವಂತೆ ಕೇಳಿದ್ದೇನೆ. ಸಿಸಿಬಿ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಅಧಿಕಾರಿಗಳೂ ಹಲವು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇದರ ಜೊತೆ ನಾನು ಕೊಟ್ಟ ಮಾಹಿತಿಯನ್ನು ಕೇಳಿ ಖುಷಿ ಪಟ್ಟಿದ್ದಾರೆ ಎಂದು ಲಂಕೇಶ್ ತಿಳಿಸಿದರು.

‘ನಿನ್ನೆ, ಮೊನ್ನೆ ಬಂದವರಿಗೆ ನಾನು ಹೆದರಲ್ಲ’ ಸುಪಾರಿ ಕೊಟ್ಟ ವ್ಯಕ್ತಿಗಳ ಹೇಳಿಕೆಗಳ ಬಗ್ಗೆ ಮಾತಾಡಲ್ಲ. ಆದರೆ, ನಾನು ಸಿಸಿಬಿ ಅಧಿಕಾರಿಗಳ ಬಳಿ ರಕ್ಷಣೆಯನ್ನು ಕೇಳಿಲ್ಲ. ನಿನ್ನೆ, ಮೊನ್ನೆ ಬಂದವರಿಗೆ ನಾನು ಹೆದರಲ್ಲ, ನಾನು ರಕ್ಷಣೆನೂ ಕೇಳುವುದಿಲ್ಲ. ನನಗೆ ಹಲವರು ಬೆಂಬಲ ನೀಡಿದ್ದಾರೆ ಎಂದು ಇಂದ್ರಜಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೃತಪಟ್ಟ ನಟನ ಪೋಸ್ಟ್‌ಮಾರ್ಟಂ ವಿಚಾರ: ಹೇಳಿಕೆ ಹಿಂಪಡೆಯುತ್ತೇನೆ ಎಂದ ಇಂದ್ರಜಿತ್

Published On - 4:27 pm, Mon, 31 August 20