‘ಸಂದೀಪ್​ ಪಾಟೀಲ್ ಮೇಲೆ ವಿಶ್ವಾಸವಿದೆ, ತನಿಖೆ ಮಾಡೋಕೆ ಬಿಡಿ.. ಚಿತ್ರರಂಗಕ್ಕೇ ಒಳ್ಳೆದಾಗುತ್ತೆ’

| Updated By: ಸಾಧು ಶ್ರೀನಾಥ್​

Updated on: Sep 03, 2020 | 1:31 PM

ಬೆಂಗಳೂರು: CCB ವಿಚಾರಣೆ ಮುಗಿಸಿ ಹೊರಬಂದ ಇಂದ್ರಜಿತ್ ಲಂಕೇಶ್ ಸಿಸಿಬಿ ವಿಚಾರಣೆ ಬಗ್ಗೆ ನಾನು ಏನನ್ನೂ ಹೇಳಲಾಗುವುದಿಲ್ಲ. ಸಂದೀಪ್​ ಪಾಟೀಲ್ ತಂಡದ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ. ಕೆಲವು ಸ್ಪಷ್ಟನೆ ಕೋರಿದ್ದ ಹಿನ್ನೆಲೆ ಬಂದು ಸ್ಪಷ್ಟನೆ ನೀಡಿದ್ದೇನೆ. ಈ ಪ್ರಕರಣದಲ್ಲಿ ನಾನು ಒಬ್ಬ ಮೆಸೇಂಜರ್​ ಅಷ್ಟೇ ಎಂದು ಇಂದ್ರಜಿತ್ ಪ್ರತಿಕ್ರಿಯಿಸಿದ್ದಾರೆ. ನಾನು ಕೆಲವೊಂದು ಸ್ಪಷ್ಟನೆ ನೀಡಬೇಕಿತ್ತು, ಅದನ್ನ ನೀಡಿದ್ದೇನೆ. CCB ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದೇನೆ ಅಂತಾ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. CCB ಅಧಿಕಾರಿಗಳು ಅವರ ಕೆಲಸ ಅವರು […]

‘ಸಂದೀಪ್​ ಪಾಟೀಲ್ ಮೇಲೆ ವಿಶ್ವಾಸವಿದೆ, ತನಿಖೆ ಮಾಡೋಕೆ ಬಿಡಿ.. ಚಿತ್ರರಂಗಕ್ಕೇ ಒಳ್ಳೆದಾಗುತ್ತೆ’
Follow us on

ಬೆಂಗಳೂರು: CCB ವಿಚಾರಣೆ ಮುಗಿಸಿ ಹೊರಬಂದ ಇಂದ್ರಜಿತ್ ಲಂಕೇಶ್ ಸಿಸಿಬಿ ವಿಚಾರಣೆ ಬಗ್ಗೆ ನಾನು ಏನನ್ನೂ ಹೇಳಲಾಗುವುದಿಲ್ಲ. ಸಂದೀಪ್​ ಪಾಟೀಲ್ ತಂಡದ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ. ಕೆಲವು ಸ್ಪಷ್ಟನೆ ಕೋರಿದ್ದ ಹಿನ್ನೆಲೆ ಬಂದು ಸ್ಪಷ್ಟನೆ ನೀಡಿದ್ದೇನೆ. ಈ ಪ್ರಕರಣದಲ್ಲಿ ನಾನು ಒಬ್ಬ ಮೆಸೇಂಜರ್​ ಅಷ್ಟೇ ಎಂದು ಇಂದ್ರಜಿತ್ ಪ್ರತಿಕ್ರಿಯಿಸಿದ್ದಾರೆ.

ನಾನು ಕೆಲವೊಂದು ಸ್ಪಷ್ಟನೆ ನೀಡಬೇಕಿತ್ತು, ಅದನ್ನ ನೀಡಿದ್ದೇನೆ. CCB ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದೇನೆ ಅಂತಾ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. CCB ಅಧಿಕಾರಿಗಳು ಅವರ ಕೆಲಸ ಅವರು ಮಾಡುತ್ತಿದ್ದಾರೆ. ಅವರನ್ನು ತನಿಖೆ ಮಾಡುವುದಕ್ಕೆ ಬಿಡಿ ಇದರಿಂದ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ ಅಂತಾ ಇಂದ್ರಜಿತ್ ಲಂಕೇಶ್ ಇಂದ್ರಜಿತ್ ಹೇಳಿದ್ದಾರೆ.

ನನಗೆ ಮತ್ತಷ್ಟು ಮಾಹಿತಿ ದೊರೆತರೆ ಅದನ್ನ CCB ಗೆ ನೀಡುತ್ತೇನೆ. ಕನ್ನಡ ಚಿತ್ರರಂಗಕ್ಕೆ ನಾನು ಏನು ಮಾಡಿದ್ದೇನೆಂದು ಜನರಿಗೆ ಗೊತ್ತು. ನಾನು CCB ಗೆ ಏನು ನೀಡಿದ್ದೇನೆಂದು ಹೇಳುವುದಕ್ಕೆ ಆಗಲ್ಲ. ಸಿಸಿಬಿಯವರು ಮಾಹಿತಿ ನೀಡುವುದಾದರೆ ಕೇಳಿ ತಿಳಿದುಕೊಳ್ಳಿ. ಮೊನ್ನೆ ನೀಡಿದ್ದ ಮಾಹಿತಿಗೆ ಇಂದು ಸ್ಪಷ್ಟನೆ ನೀಡಿದ್ದೇನೆ ಅಷ್ಟೇ ಎಂದು ತಿಳಿಸಿದರು.

CCB ವಿಚಾರಣೆಗೆ ಸಹಕಾರ ನೀಡಿರುವುದಕ್ಕೆ ಖುಷಿ ಇದೆ. ನಾನು ಮಾಹಿತಿ ನೀಡಿದ್ದೇನೆ, ದಾಖಲೆ ನೀಡಿದ್ದೇನೆ. ಸಿಸಿಬಿ ಅಧಿಕಾರಿಗಳು ನೀಡುವ ಹೇಳಿಕೆ ಒಪ್ಪಿಕೊಳ್ಳುತ್ತೇನೆ. ಕನ್ನಡ ಚಿತ್ರರಂಗವನ್ನು ಸ್ವಚ್ಛಗೊಳಿಸುವುದು ನನಗೆ ಮುಖ್ಯ. ನಾನು ನಟ, ನಟಿಯರ ಬಗ್ಗೆ ಮಾಹಿತಿ ನೀಡಿದ್ದೇನಾ, ಇಲ್ವಾ.ಇದರ ಬಗ್ಗೆ ನಾನು ಮಾಹಿತಿಯನ್ನು ನೀಡುವುದಕ್ಕೆ ಆಗಲ್ಲ ಎಂದು CCB ವಿಚಾರಣೆ ಬಳಿಕ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದಾರೆ.

Published On - 12:59 pm, Thu, 3 September 20