ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಜಾಲದ ನಂಟಿರುವ ಆರೋಪ ಮಾಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ಗೆ ಇದೀಗ ಟೆನ್ಷನ್ ಶುರುವಾಗಿದೆ.
ನಿನ್ನೆ ತಮ್ಮ ವಕೀಲರನ್ನ ಸಂಪರ್ಕಿಸಿದ್ದ ಇಂದ್ರಜಿತ್ ಲಂಕೇಶ್ ಮಾಧ್ಯಮಗಳಿಗೆ ತಾವು ನೀಡಿದ ಹೇಳಿಕೆಯ ಬಗ್ಗೆ ತಮ್ಮ ವಕೀಲರೊಂದಿಗೆ ಪರಿಶೀಲನೆ ನಡೆಸಿದರು. ಈ ಆಧಾರದ ಮೇಲೆ ಇಂದು ಸಿಸಿಬಿ ತಂಡದ ಪ್ರಶ್ನೆಗಳಿಗೆ ಉತ್ತರ ನೀಡಲಿರುವ ಇಂದ್ರಜಿತ್ ತಮ್ಮ ವಕೀಲರ ಬಳಿ ವಿಚಾರಣೆ ಹೇಗಿರುತ್ತೆ ಎಂದು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವಕೀಲರ ಬಳಿ ಸಿಸಿಬಿ ವಿಚಾರಣೆ ಹೇಗಿರುತ್ತೆ..? ಏನ್ ಆನ್ಸರ್ ಮಾಡ್ಬೇಕು..? ಎಂಬ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಲಂಕೇಶ್ ಪೊಲೀಸರ ವಿಚಾರಣೆ ಹೇಗೆಲ್ಲಾ ಇರುತ್ತೆ ಎಂಬ ಮಾಹಿತಿ ಪಡೆದ್ದಾರಂತೆ.
ಹಾಗಾಗಿ, ವಕೀಲರ ಸಲಹೆ ಮೇರೆಗೆ ಸಿಸಿಬಿಗೆ ಉತ್ತರಿಸಲಿರುವ ಇಂದ್ರಜಿತ್ ಲಂಕೇಶ್ಗೆ ಸದ್ಯಕ್ಕೆ ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಅವರ ವಕೀಲರ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇಂದ್ರಜಿತ್ ಸದ್ಯ ತಮ್ಮ ನಿವಾಸದಲ್ಲಿ ಇಲ್ಲ ಅಂತಾ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಇಂದ್ರಜಿತ್ ಮಾಧ್ಯಮದ ಕಣ್ತಪ್ಪಿಸಿ ಸಿಸಿಬಿ ಕಚೇರಿಗೆ ಹೋಗೋ ಸಾಧಯ ದ್ಯತೆ ಕೂಡ ಹೆಚ್ಚಾಗಿದೆ.
Published On - 10:37 am, Mon, 31 August 20