ಶಾಲೆ ತೆರೆಯುವ ಬಗ್ಗೆ ತಮ್ಮ ‘ಮುಕ್ತ’ ಅಭಿಪ್ರಾಯ ಹಂಚಿಕೊಂಡ TN ಸೀತಾರಾಂ

ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಶಾಲಾ ಕಾಲೇಜುಗಳನ್ನು ತೆರೆಯಬೇಕಾ ಅಥವಾ ಬೇಡವಾ ಅನ್ನೋ ಚರ್ಚೆ ಜೋರಾಗಿ ನಡೆದಿದೆ. ಈ ನಡುವೆ ಖ್ಯಾತ ನಿರ್ದೇಶಕ TN ಸೀತಾರಾಂ ಕೂಡ ಈ ಚರ್ಚೆಗೆ ತಮ್ಮ ದನಿ ಸೇರಿಸಿದ್ದಾರೆ. ‘ಒಂದು ವರ್ಷ ಮಕ್ಕಳಿಗೆ ಸುಮ್ಮನೆ promotion ಕೊಟ್ಟರೆ ನಷ್ಟವೇನಿಲ್ಲ’ ಇಂಥ ಕೊರೊನಾ ಅಬ್ಬರ ನಡುವೆ ಪುಟ್ಟ ಮಕ್ಕಳ ಶಾಲೆಗಳನ್ನು ಬೇರೆ ತೆರೆಯುತ್ತಾರಂತೆ. ಯಾವ ವಾದ ಏನೇ ಇರಲಿ. ಒಂದೇ ಒಂದು ಪುಟ್ಟ ಮಗುವಿಗೆ ಏನಾದರೂ ಕೊರೊನಾ ಸಂಬಂಧಿತ ಅಪಾಯವಾದರೆ ಇಡೀ ರಾಜ್ಯದ […]

ಶಾಲೆ ತೆರೆಯುವ ಬಗ್ಗೆ ತಮ್ಮ ‘ಮುಕ್ತ’ ಅಭಿಪ್ರಾಯ ಹಂಚಿಕೊಂಡ TN ಸೀತಾರಾಂ
ಸಾಧು ಶ್ರೀನಾಥ್​

Updated on: Oct 10, 2020 | 1:29 PM

ಬೆಂಗಳೂರು: ಕೊರೊನಾ ಅಬ್ಬರದ ನಡುವೆ ಶಾಲಾ ಕಾಲೇಜುಗಳನ್ನು ತೆರೆಯಬೇಕಾ ಅಥವಾ ಬೇಡವಾ ಅನ್ನೋ ಚರ್ಚೆ ಜೋರಾಗಿ ನಡೆದಿದೆ. ಈ ನಡುವೆ ಖ್ಯಾತ ನಿರ್ದೇಶಕ TN ಸೀತಾರಾಂ ಕೂಡ ಈ ಚರ್ಚೆಗೆ ತಮ್ಮ ದನಿ ಸೇರಿಸಿದ್ದಾರೆ.

‘ಒಂದು ವರ್ಷ ಮಕ್ಕಳಿಗೆ ಸುಮ್ಮನೆ promotion ಕೊಟ್ಟರೆ ನಷ್ಟವೇನಿಲ್ಲ’
ಇಂಥ ಕೊರೊನಾ ಅಬ್ಬರ ನಡುವೆ ಪುಟ್ಟ ಮಕ್ಕಳ ಶಾಲೆಗಳನ್ನು ಬೇರೆ ತೆರೆಯುತ್ತಾರಂತೆ. ಯಾವ ವಾದ ಏನೇ ಇರಲಿ. ಒಂದೇ ಒಂದು ಪುಟ್ಟ ಮಗುವಿಗೆ ಏನಾದರೂ ಕೊರೊನಾ ಸಂಬಂಧಿತ ಅಪಾಯವಾದರೆ ಇಡೀ ರಾಜ್ಯದ ತಂದೆ ತಾಯಿಗಳು ಆತಂಕ ಮತ್ತು ಹಿಂಸೆ ಪಡಲು ಶುರು ಮಾಡುತ್ತಾರೆ ಎಂದು ಖ್ಯಾತ ನಿರ್ದೇಶಕ TN ಸೀತಾರಾಂ ಹೇಳಿದ್ದಾರೆ.

ಸೋಂಕು ಹೆಚ್ಚು ಆದರಂತೂ ರಾಜ್ಯದ ಅಂತಃ ಕಳೆ ಮಂಕಾಗಿ ಎಲ್ಲರೂ ಪಾಪ ಪ್ರಜ್ಞೆ ಅನುಭವಿಸ ಬೇಕಾಗುತ್ತದೆ. ಬೇಕಾ ಇದೆಲ್ಲಾ… ಒಂದು ವರ್ಷ ಮಕ್ಕಳಿಗೆ ಸುಮ್ಮನೆ promotion ಕೊಟ್ಟರೆ ನಷ್ಟವೇನಿಲ್ಲ. ಮುಂದೆ ಅದನ್ನು ಸರಿ ಮಾಡಿಕೊಳ್ಳಬಲ್ಲ ಬುದ್ಧ, ಚಾಣಾಕ್ಷತೆ ಮಕ್ಕಳಿಗಿರುತ್ತದೆ. ಸಧ್ಯಕ್ಕೆ ಶಾಲೆ ಶುರುಮಾಡುವುದು ಬೇಡ ಎಂದು CSP ಖ್ಯಾತಿಯ ಸೀತಾರಾಂ ತಮ್ಮ ವಾದ ಮಂಡಿಸಿದ್ದಾರೆ.

Published On - 1:08 pm, Thu, 8 October 20

Loading...
Unable to load recommendations.
Follow Us