ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್​​ಕುಮಾರ್​​ ಇಳಿಸಲು ನಡೆದಿತ್ತು ಪ್ಲ್ಯಾನ್

ಡಾ. ರಾಜ್​​ಕುಮಾರ್ ಅವರು ರಾಜಕೀಯದಿಂದ ದೂರ ಉಳಿದಿದ್ದರು. ಇಂದಿರಾಗಾಂಧಿ ವಿರುದ್ಧ ಸ್ಪರ್ಧಿಸುವ ಪ್ರಸ್ತಾಪ ಬಂದಾಗಲೂ ಅವರು ಅದನ್ನು ನಿರಾಕರಿಸಿದರು. ಚಿತ್ರರಂಗಕ್ಕೆ ಮಾತ್ರ ಮೀಸಲಾಗಿದ್ದ ಅಣ್ಣಾವ್ರು, ರಾಜಕೀಯದಲ್ಲಿ ಯಾವುದೇ ಆಸಕ್ತಿ ತೋರಿಸಲಿಲ್ಲ. ಅವರ ಈ ನಿರ್ಧಾರ ಅವರ ಮೌಲ್ಯಗಳು ಮತ್ತು ಚಿತ್ರರಂಗದ ಮೇಲಿನ ಬದ್ಧತೆಗೆ ಸಾಕ್ಷಿ.

ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ರಾಜ್​​ಕುಮಾರ್​​ ಇಳಿಸಲು ನಡೆದಿತ್ತು ಪ್ಲ್ಯಾನ್
ರಾಜ್​​ಕುಮಾರ್-ಇಂದಿರಾಗಾಂಧಿ
Edited By:

Updated on: Mar 31, 2026 | 7:53 AM

ರಾಜ್​​​ಕುಮಾರ್ ಅವರು ಕನ್ನಡ ಚಿತ್ರರಂಗದ ಖ್ಯಾತ ಹೀರೋಗಳಲ್ಲಿ ಒಬ್ಬರಾಗಿದ್ದರು. ಅವರು ನಡೆದುಕೊಳ್ಳುತ್ತಿದ್ದ ರೀತಿ ಅನೇಕರಿಗೆ ಮಾದರಿ. ಅವರು ಎಂದಿಗೂ ರಾಜಕೀಯಕ್ಕೆ ಹೊರಳಿದವರಲ್ಲ. ಚಿತ್ರರಂಗದಲ್ಲಿಯೂ ಅವರು ರಾಜಕೀಯ ಮಾಡಿದವರಲ್ಲ ಎಂದರೂ ತಪ್ಪಾಗಲಾರದು. ಈ ಮೊದಲು ಅವರನ್ನು ರಾಜಕೀಯಕ್ಕೆ ಇಳಿಸುವ ಪ್ರಯತ್ನ ನಡೆಯಿತು. ಆದರೆ, ಅವರು ಅದಕ್ಕೆ ನೋ ಎಂದರು. ಅವರನ್ನು ಇಂದಿರಾಗಾಂಧಿ ವಿರುದ್ಧ ಇಳಿಸುವ ಪ್ರಯತ್ನವೂ ನಡೆದಿತ್ತು ಎಂದರೆ ನೀವು ನಂಬಲೇಬೇಕು. ಆ ಬಗ್ಗೆ ಇಲ್ಲಿದೆ ವಿವರ.

ಸಂದರ್ಶನ ಒಂದರಲ್ಲಿ ಎಂಪಿ ಶಂಕರ್ ಅವರು ಈ ಬಗ್ಗೆ ಮಾತನಾಡಿದ್ದರು. ‘ದೇವರಾಯನ ದುರ್ಗದಲ್ಲಿ ಶೂಟ್ ನಡೆಯುತ್ತಿತ್ತು. ಒಬ್ಬರು ವ್ಯಕ್ತಿ ಬಂದು ರಾಜ್​​ಕುಮಾರ್​ಗೆ ಏನೋ ಹೇಳಿದರು. ಆಗ ಅಣ್ಣಾವ್ರು ಊಟ ಮಾಡುತ್ತಿದ್ದರು’ ಎಂದು ಎಂಪಿ ಶಂಕರ್ ವಿವರಿಸಿದ್ದರು. ಆ ವ್ಯಕ್ತಿ ಹೇಳಿದ ಮಾತು ಕೇಳಿ ಅವರು ಶಾಕ್ ಆದರಂತೆ.

‘ಆಗಲೇ ಅಲ್ಲಿಂದ ಹೊರಟುಬಿಟ್ಟರು. ರಸ್ತೆಯಲ್ಲಿ ಬರುವಾಗ ದಾರಿ ಮಧ್ಯೆ ಊಟಕ್ಕೆ ನಿಲ್ಲಿಸಿದರು. ಸುತ್ತಲೂ ಕಾಡಿತ್ತು. ಇಲ್ಲಿ ಊಟ ಮಾಡಬಹುದು ಎಂದು ಅವರಿಗೆ ಅನಿಸಿತು. ಏನಾಯಿತು? ಏನು ಬಂದು ಹೇಳಿದರು ಎಂದು ನಾವು ಕೇಳಿದೆವು. ಅದಕ್ಕೆ ಅವರು, ನನಗೆ ರಾಜಕೀಯ ಗೊತ್ತಿಲ್ಲ. ನನಗೆ ಸಿನಿಮಾ ಮಾತ್ರ ಗೊತ್ತಿದೆ. ಸಿನಿಮಾದಲ್ಲೂ ರಾಜಕೀಯ ಮಾಡಿದವನು ನಾನಲ್ಲ. ನನಗೆ ಇಂದಿರಾಗಾಂಧಿ ವಿರುದ್ಧ ನಿಲ್ಲೋಕೆ ಹೇಳುತ್ತಿದ್ದಾರೆ ಎಂದು ರಾಜ್​​ಕುಮಾರ್ ಹೇಳಿದ್ದಾಗಿ’ ಎಂಪಿ ಶಂಕರ್ ವಿವರಿಸಿದ್ದರು.

ಇದನ್ನೂ ಓದಿ: ‘ಸ್ವಸ್ತಿಕ್’ ಕನ್ನಡದ ‘ಧುರಂಧರ್’; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ

ರಾಜ್​​​ಕುಮಾರ್ ಅವರು ನಮ್ಮನ್ನು ಬಿಟ್ಟು ಹೋಗಿ ಎರಡು ದಶಕ ಕಳೆಯುತ್ತಾ ಬಂದಿದೆ. ಆದಾಗ್ಯೂ ಅವರು ಹಾಕಿಕೊಟ್ಟ ಮಾರ್ಗದರ್ಶನ ಇನ್ನೂ ನಮ್ಮ ಜೊತೆ ಇದೆ. ಇದು ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆಗೆ ಉದಾಹರಣೆ. ರಾಜ್​​ಕುಮಾರ್ ಕುಟುಂಬ ಈಗಲೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us