ಶೂಟಿಂಗ್ ವೇಳೆ No Kiss, No Hug ನವ ಷರತ್ತುಗಳು ಜಾರಿ..

ಕೊರೊನೋತ್ತರ ಕಾಲದಲ್ಲಿ ದೈನಂದಿನ ಚಟುವಟಿಕೆಗಳತ್ತ ಜಗತ್ತು ನಿಧಾನವಾಗಿ ಹೊರಳುತ್ತಿದೆ. ಈ ಮಧ್ಯೆ ಅನೇಕ ಉದ್ಯಮಗಳು ಮುಂಜಾಗರೂಕತೆ ವಹಿಸಿ, ಕೆಲಸ ಕಾರ್ಯಗಳಲ್ಲಿ ಮಗ್ನವಾಗುತ್ತಿವೆ. ಆದ್ರೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಗ್ನ ಸತ್ಯಗಳೇ ಬೇರೆ. ಹಾಗಾಗಿ ಪ್ರೊಡ್ಯುಸರ್ಸ್ ಗಿಲ್ಡ್ ಇಂಡಿಯಾ ದಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ. ಟಿವಿ ಧಾರಾವಾಹಿ ಮತ್ತು ಸಿನೆಮಾ ಶೂಟಿಂಗ್​ ವೇಳೆ ಹೊಸದಾದ ಗೈಡ್ ಲೈನ್ಸ್ ಅಳವಡಿಸಿಕೊಳ್ಳಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚನೆ ನೀಡಿದೆ. ಅದರಂತೆ ಶೂಟಿಂಗ್ ವೇಳೆ ನೊ ಕಿಸ್, ನೊ ಹಗ್ ಕಡ್ಡಾಯವಾಗಿ ಪಾಲನೆಯಾಗಬೇಕು […]

ಶೂಟಿಂಗ್ ವೇಳೆ  No Kiss, No Hug ನವ ಷರತ್ತುಗಳು ಜಾರಿ..
ಸಾಧು ಶ್ರೀನಾಥ್​

Updated on: May 28, 2020 | 5:33 PM

ಕೊರೊನೋತ್ತರ ಕಾಲದಲ್ಲಿ ದೈನಂದಿನ ಚಟುವಟಿಕೆಗಳತ್ತ ಜಗತ್ತು ನಿಧಾನವಾಗಿ ಹೊರಳುತ್ತಿದೆ. ಈ ಮಧ್ಯೆ ಅನೇಕ ಉದ್ಯಮಗಳು ಮುಂಜಾಗರೂಕತೆ ವಹಿಸಿ, ಕೆಲಸ ಕಾರ್ಯಗಳಲ್ಲಿ ಮಗ್ನವಾಗುತ್ತಿವೆ. ಆದ್ರೆ ಕಿರುತೆರೆ ಮತ್ತು ಬೆಳ್ಳಿತೆರೆಯ ನಗ್ನ ಸತ್ಯಗಳೇ ಬೇರೆ. ಹಾಗಾಗಿ ಪ್ರೊಡ್ಯುಸರ್ಸ್ ಗಿಲ್ಡ್ ಇಂಡಿಯಾ ದಿಂದ ಹೊಸ ರೂಲ್ಸ್ ಜಾರಿಗೆ ಬಂದಿದೆ.

ಟಿವಿ ಧಾರಾವಾಹಿ ಮತ್ತು ಸಿನೆಮಾ ಶೂಟಿಂಗ್​ ವೇಳೆ ಹೊಸದಾದ ಗೈಡ್ ಲೈನ್ಸ್ ಅಳವಡಿಸಿಕೊಳ್ಳಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚನೆ ನೀಡಿದೆ. ಅದರಂತೆ ಶೂಟಿಂಗ್ ವೇಳೆ ನೊ ಕಿಸ್, ನೊ ಹಗ್ ಕಡ್ಡಾಯವಾಗಿ ಪಾಲನೆಯಾಗಬೇಕು ಎಂದು ಸ್ಪಷ್ಟಪಡಿಸಿದೆ.

ಇನ್ನು ಸೆಟ್, ಸ್ಟೂಡಿಯೋದಲ್ಲಿ ಸಿಗರೇಟ್ ಹಂಚಿಕೊಳ್ಳುವ ಹಾಗಿಲ್ಲ. ಎರಡು ಮೀಟರ್ ಅಂತರದಲ್ಲಿ ಶೂಟಿಂಗ್ ಮಾಡಬೇಕು. ಕಾರ್ಮಿಕರು ಮತ್ತು ನಟರು 60 ವರ್ಷ ಮೀರಿದವರು ಶೂಟಿಂಗ್ ನಲ್ಲಿ ಭಾಗವಹಿಸಬಾರದು. 60 ವರ್ಷ ಮೀರಿದವರು ಮೂರು ತಿಂಗಳು ಶೂಟಿಂಗ್ ಸೆಟ್​ನತ್ತ ತಲೆಹಾಕದಿರಲು ಪ್ರೊಡ್ಯುಸರ್ಸ್ ಗಿಲ್ಡ್ ಸೂಚಿಸಿದೆ.

ಧಾರಾವಾಹಿ, ಸಿನಿಮಾ ಶೂಟಿಂಗ್ ಗೆ ಮಾರ್ಗಸೂಚಿ ಬಿಡುಗಡೆ IFTPC Issues Guidelines For Shooting Film & TV Shows

Published On - 11:21 am, Thu, 28 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us