ಮೂರು ದಿನಕ್ಕೆ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಎಕ್ಕ’ ಸಿನಿಮಾ; ಭಾನುವಾರ ಬಂಗಾರದ ಬೆಳೆ

Ekka movie box office collection Day 3: ಯುವ ರಾಜ್‌ಕುಮಾರ್ ಅಭಿನಯದ 'ಎಕ್ಕ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ಈ ಚಿತ್ರದ ಯಶಸ್ಸು ಯುವ ರಾಜ್‌ಕುಮಾರ್‌ಗೆ ಉತ್ತಮ ಬುನಾದಿಯನ್ನು ಹಾಕಿಕೊಟ್ಟಿದೆ ಎನ್ನಬಹುದು. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದ ಬಾಯ್ಮಾತಿನ ಪ್ರಚಾರವೂ ಯಶಸ್ಸಿಗೆ ಕಾರಣ. ಭಾನುವಾರ ಅನೇಕ ಕಡೆಗಳಲ್ಲಿ ಶೋ ಹೌಸ್​ಫುಲ್ ಪ್ರದರ್ಶನ ಕಂಡಿದೆ.

ಮೂರು ದಿನಕ್ಕೆ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಎಕ್ಕ’ ಸಿನಿಮಾ; ಭಾನುವಾರ ಬಂಗಾರದ ಬೆಳೆ
ಎಕ್ಕ ಸಿನಿಮಾ

Updated on: Jul 21, 2025 | 6:57 AM

ಯುವ ಹೀರೋ ಯುವ ರಾಜ್​​ಕುಮಾರ್​ಗೆ (Yuva Rajkumar) ಒಂದೊಳ್ಳೆಯ ಯಶಸ್ಸು ಸಿಕ್ಕಿದೆ. ಒಂದು ಹೀರೋಗೆ ಆರಂಭದಲ್ಲಿ ಎಷ್ಟು ದೊಡ್ಡ ಬುನಾದಿ ಬೇಕೋ ಅದನ್ನು ಹಾಕಿಕೊಡುವಲ್ಲಿ ‘ಎಕ್ಕ’ ಸಿನಿಮಾ ಯಶಸ್ವಿ ಆಗಿದೆ. ನಿರ್ದೇಶಕ ರೋಹಿತ್ ಪದಕಿ ಅವರು ಅದ್ಭುತವಾಗಿ ಸಿನಿಮಾನ ಕಟ್ಟಿಕೊಡುವ ಮೂಲಕ ಕನ್ನಡಕ್ಕೆ ಒಂದೊಳ್ಳೆಯ ಸಿನಿಮಾ ಕೊಟ್ಟಿದ್ದಾರೆ. ಈ ಎಲ್ಲಾ ಕಾರಣದಿಂದ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

‘ಯುವ’ ಸಿನಿಮಾ ಮೂಲಕ ಯುವ ರಾಜ್​ಕುಮಾರ್ ಅವರು ದೊಡ್ಡ ಗೆಲುವು ಕಂಡರು. ಈ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿತ್ತು. ಆದರೆ, ‘ಎಕ್ಕ’ ಸಿನಿಮಾ ಮಾತ್ರ ಎಲ್ಲರಿಂದ ಭೇಷ್ ಎನಿಸಿಕೊಂಡಿದೆ. ಬಾಕ್ಸ್ ಆಫೀಸ್​ನಲ್ಲಿ ಎಲ್ಲಾ ದಾಖಲೆಗಳನ್ನು ಅವರು ಉಡೀಸ್ ಮಾಡಿದ್ದಾರೆ. ಒಂದು ಯಂಗ್ ಹೀರೋ ಸಿನಿಮಾ ಇಷ್ಟು ದಾಖಲೆಯ ಕಲೆಕ್ಷನ್ ಮಾಡಿದ್ದು ವಿಶೇಷವೇ ಸರಿ.

ಈ ಚಿತ್ರದ ನೆಟ್ ಕಲೆಕ್ಷನ್ ಮೂರು ದಿನಕ್ಕೆ 5.66 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ಗ್ರಾಸ್ ಕಲೆಕ್ಷನ್ 6.42 ಕೋಟಿ ರೂಪಾಯಿ ಎಂದು ಬಾಕ್ಸ್ ಆಫೀಸ್​ ಟ್ರ್ಯಾಕರ್ sacnilk ವರದಿ ಮಾಡಿದೆ. ಮೊದಲ ದಿನ ಈ ಚಿತ್ರ ಒಂದೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನವಾದ ಶನಿವಾರ ಚಿತ್ರ 1.82 ಕೋಟಿ ರೂಪಾಯಿ ಗಳಿಕೆ ಮಾಡಿತು. ಭಾನುವಾರ ಚಿತ್ರದ ಕಲೆಕ್ಷನ್ 2.39 ಕೋಟಿ ರೂಪಾಯಿ ಆಗಿದೆ. ಈ ಬಗ್ಗೆ ತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ.

ಇದನ್ನೂ ಓದಿ
ರಿಯಾಲಿಟಿ ಶೋ ಸಂಭಾವನೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ಅಮಿತಾಭ್ ಬಚ್ಚನ್
ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
‘ಎಕ್ಕ’ ಸಿನಿಮಾ ಗಳಿಕೆ; ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಯುವ
ಬರ್ತ್​ಡೇ ಗರ್ಲ್ ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತೆ ಗೊತ್ತಾ?

ಈ ಸಿನಿಮಾಗೆ ಬಾಯ್ಮಾತಿನ ಪ್ರಚಾರ ಚೆನ್ನಾಗಿ ಸಿಗುತ್ತಿದೆ. ಹೀಗಾಗಿ ಸಿನಿಮಾದ ಗಳಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಭಾನುವಾರ ಅನೇಕ ಶೋಗಳು ಹೌಸ್​ಫುಲ್ ಓಡಿವೆ. ಇಷ್ಟು ದಿನ ಡಲ್ ಆಗಿದ್ದ ಚಿತ್ರರಂಗಕ್ಕೆ ಈಗ ಒಂದು ಬ್ರೇಕ್ ಸಿಕ್ಕಂತೆ ಆಗಿದೆ. ವಾರದ ದಿನಗಳಲ್ಲಿ ಈ ಚಿತ್ರ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಎಕ್ಕ’ ಸಿನಿಮಾ ಗಳಿಕೆ; ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಯುವ

ಈ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಇದೆ. ಈ ಸಿನಿಮಾದಲ್ಲಿ ಯುವ ರಾಜ್​ಕುಮಾರ್, ಸಂಜನಾ ಆನಂದ್, ರಾಹುಲ್ ದೇವ್ ಶೆಟ್ಟಿ, ಅತುಲ್ ಕುಲ್ಕರ್ಣಿ, ಸಂಪದಾ ನಟಿಸಿದ್ದಾರೆ. ಕೆಆರ್​ಜಿ ಸ್ಟುಡಿಯೋ, ಜಯಣ್ಣ ಫಿಲ್ಮ್ಸ್, ಪಿಆರ್​ಕೆ ಸ್ಟುಡಿಯೋ ಸಿನಿಮಾನ ಒಟ್ಟಾಗಿ ನಿರ್ಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us