ಶ್ಯಾಡೋ ಹಾಗೂ ಇನ್ಸ್​ಪೆಕ್ಟರ್ ವಿಕ್ರಮ್ ಸಿನಿಮಾ ಯಶಸ್ಸು ಕಾಣಲಿ; ಶುಭಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ವಿನೋದ್ ಪ್ರಭಾಕರ್ ಅಭಿನಯದ ಶಾಡ್ಯೋ ಸಿನಿಮಾ ಮೊದಲ ಶೋ ಆರಂಭವಾಗಿದೆ. ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ್ ರಿಲೀಸ್ ಆಗಿದ್ದು, ಸಿನಿಮಾ ನೋಡೋಕೆ ಅಭಿಮಾನಿಗಳ ದಂಡು ಹರಿದು ಬರುತ್ತಿದೆ.

ಶ್ಯಾಡೋ ಹಾಗೂ ಇನ್ಸ್​ಪೆಕ್ಟರ್ ವಿಕ್ರಮ್ ಸಿನಿಮಾ ಯಶಸ್ಸು ಕಾಣಲಿ; ಶುಭಕೋರಿದ ಚಾಲೆಂಜಿಂಗ್ ಸ್ಟಾರ್  ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್
Edited By:

Updated on: Feb 05, 2021 | 1:08 PM

ಬೆಂಗಳೂರು: ಇಂದಿನಿಂದ (ಫೆಬ್ರವರಿ 5) ಶೇ.100 ಪ್ರೇಕ್ಷಕರಿಗೆ ಚಿತ್ರ ಮಂದಿರಗಳಲ್ಲಿ ಸಿನಿಮಾಗಳನ್ನು ವೀಕ್ಷಿಸಲು ಅವಕಾಶ ದೊರಕಿದ್ದು, ಶ್ಯಾಡೋ  ಹಾಗೂ ಇನ್ಸ್ ಪೆಕ್ಟರ್ ವಿಕ್ರಮ್ ಸಿನಿಮಾ ಬಿಡುಗಡೆಯಾಗಿದೆ. ಎರಡೂ ಸಿನಿಮಾಗಳು ಯಶಸ್ಸು ಪಡೆಯಲಿ ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.

ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೋ ಸಿನಿಮಾ ಮೊದಲ ಶೋ ಆರಂಭವಾಗಿದೆ. ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್​ಪೆಕ್ಟರ್ ವಿಕ್ರಮ್ ರಿಲೀಸ್ ಆಗಿದ್ದು, ಸಿನಿಮಾ ನೋಡೋಕೆ ಅಭಿಮಾನಿಗಳ ದಂಡು ಹರಿದು ಬರುತ್ತಿದೆ. ಅಲ್ಲದೇ ನಟ ಪ್ರಜ್ವಲ್ ದೇವರಾಜ್ ಕೂಡ ಫಸ್ಟ್ ಡೇ ಫಸ್ಟ್ ಶೋ ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿದ್ದಾರೆ.

ದರ್ಶನ್ ಟ್ವೀಟ್
ವಿನೋದ್ ಪ್ರಭಾಕರ್ ,ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾಗಳು ರಿಲೀಸ್ ಆಗುತ್ತಿವೆ. ಶ್ಯಾಡೋ ಮತ್ತು ಇನ್ಸ್​ಪೆಕ್ಟರ್ ವಿಕ್ರಮ್ ಎರಡೂ ಚಲನಚಿತ್ರಗಳು ಉತ್ತಮ ಯಶಸ್ಸನ್ನು ಪಡೆಯಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮೂಲಕ ಶುಭಕೋರಿದ್ದಾರೆ.

 

ಯದುವೀರ್ ಒಡೆಯರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ

Published On - 1:07 pm, Fri, 5 February 21