‘ಕೆಜಿಎಫ್ 2’ ಎದುರು ‘ಬೀಸ್ಟ್’ ಚಿತ್ರ ಕಡೆಗಣಿಸಿದ ತಮಿಳು ಮಂದಿ; ವೈರಲ್ ಆಯ್ತು ವಿಡಿಯೋ

‘ಬೀಸ್ಟ್’ ಸಿನಿಮಾ ಏಪ್ರಿಲ್ 13ರಂದು ತೆರೆಗೆ ಬಂದಿದೆ. ಸಿನಿಮಾದಲ್ಲಿ ಹೊಸತನ, ಮನರಂಜನೆ ಎರಡೂ ಇಲ್ಲ ಎಂದು ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ.

‘ಕೆಜಿಎಫ್ 2’ ಎದುರು ‘ಬೀಸ್ಟ್’ ಚಿತ್ರ ಕಡೆಗಣಿಸಿದ ತಮಿಳು ಮಂದಿ; ವೈರಲ್ ಆಯ್ತು ವಿಡಿಯೋ
ಯಶ್-ವಿಜಯ್
Edited By:

Updated on: Apr 14, 2022 | 9:40 PM

‘ಕೆಜಿಎಫ್ ಚಾಪ್ಟರ್​ 2’ ಚಿತ್ರದ (KGF Chapter 2) ಎದುರು ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ (Beast Movie) ಮಂಕಾಗಿದೆ. ಬೆಂಗಳೂರಿನಲ್ಲಿ ಮೊದಲ ದಿನ ಸುಮಾರು 900 ಶೋಗಳನ್ನು ‘ಬೀಸ್ಟ್​’ಗೆ ನೀಡಲಾಗಿತ್ತು. ಅದು ಈಗ 250ಕ್ಕೆ ಇಳಿಕೆ ಆಗಿದೆ. ಮುಂದಿನ ದಿನಗಳಲ್ಲಿ ವಿಜಯ್ ಸಿನಿಮಾದ ಶೋ ಸಂಖ್ಯೆ ಕುಸಿಯಬಹುದು. ಈ ಮಧ್ಯೆ, ತಮಿಳುಮಂದಿ ಕೂಡ ‘ಕೆಜಿಎಫ್ 2’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷ ಎಂದರೆ, ಯಶ್ (Yash) ಚಿತ್ರಕ್ಕಾಗಿ ‘ಬೀಸ್ಟ್’ ಸಿನಿಮಾ ಕಡೆಗಣಿಸಿದ್ದಾರೆ. ಪ್ರಶಾಂತ್ ನೀಲ್​ ನಿರ್ದೇಶನದ ಈ ಸಿನಿಮಾನ ಮೊದಲು ನೋಡಿ ಎಂದು ಕೋರುತ್ತಿದ್ದಾರೆ.

‘ಬೀಸ್ಟ್’ ಸಿನಿಮಾ ಏಪ್ರಿಲ್ 13ರಂದು ತೆರೆಗೆ ಬಂದಿದೆ. ಸಿನಿಮಾದಲ್ಲಿ ಹೊಸತನ, ಮನರಂಜನೆ ಎರಡೂ ಇಲ್ಲ ಎಂದು ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ. ಸಿನಿಮಾ ಉತ್ತಮವಾಗಿಲ್ಲ ಎಂದು ಅಭಿಮಾನಿಯೋರ್ವ ಥಿಯೇಟರ್​ನ ಸ್ಕ್ರೀನ್​ಗೆ ಬೆಂಕಿ ಹಚ್ಚಿದ ಬಗ್ಗೆ ವರದಿ ಆಗಿತ್ತು. ಇದಾದ ಮರುದಿನ (ಏಪ್ರಿಲ್ 14) ‘ಕೆಜಿಎಫ್​ ಚಾಪ್ಟರ್​ 2’ ತೆರೆಗೆ ಬಂದಿದೆ. ಈ ಸಿನಿಮಾಗೆ ಧನಾತ್ಮಕ ಪ್ರತಿಕ್ರಿಯೆ ಬಂದಿದೆ.

ತಮಿಳುನಾಡಿನಲ್ಲಿ 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಕೆಜಿಎಫ್​ 2’ ತೆರೆಗೆ ಬಂದಿದೆ. ಕೆಲ ಯೂಟ್ಯೂಬ್​ ಚಾನೆಲ್​ಗಳು ಸಿನಿಮಾ ನೋಡಿದವರನ್ನು ಮಾತನಾಡಿಸಿದ್ದಾರೆ. ಎಲ್ಲರೂ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಕೆಲವರು ಯಶ್ ಅವರ ನಟನೆಯನ್ನು ಹೊಗಳಿದರೆ, ಇನ್ನೂ ಕೆಲವರು ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ವಿಶೇಷ ಎಂದರೆ, ತಮಿಳುನಾಡಿನಲ್ಲಿ ಕೆಲವರು ‘ಮೊದಲು ಕೆಜಿಎಫ್ ಎರಡನೇ ಚಾಪ್ಟರ್​ ನೋಡಿ. ಆಮೇಲೆ ಬೇಕಿದ್ದರೆ ಬೀಸ್ಟ್​ ನೋಡುವಿರಂತೆ’ ಎಂದಿದ್ದಾರೆ. ಇನ್ನೂ ಕೆಲವರು, ‘ಯಶ್ ನಟನೆಯ ‘ಕೆಜಿಎಫ್ 2’ ನಿಜವಾದ ಬೀಸ್ಟ್​’ ಎಂದು ಬಾಯ್ತುಂಬ ಹೊಗಳಿದ್ದಾರೆ. ತಮಿಳುನಾಡಿನಲ್ಲಿ ಈ ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ, ತಮಿಳುನಾಡಿನ ಹಲವು ಚಿತ್ರಮಂದಿರಗಳಲ್ಲಿ ‘ಬೀಸ್ಟ್’​ ಬದಲು ‘ಕೆಜಿಎಫ್ 2’ ಕಂಡರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ‘ಬೀಸ್ಟ್​’ ಚೆನ್ನಾಗಿಲ್ಲ ಎಂಬ ಹತಾಶೆಯಿಂದ​ ಥಿಯೇಟರ್​ ಪರದೆಗೆ ಬೆಂಕಿ ಹಚ್ಚಿದ ವಿಜಯ್​ ಫ್ಯಾನ್ಸ್​? ವಿಡಿಯೋ ವೈರಲ್​

ಬೆಂಗಳೂರಲ್ಲಿ ‘ಬೀಸ್ಟ್​’ ನೋಡಿ ಜನ ಏನಂದ್ರು? ಫ್ಯಾನ್ಸ್​ ಸೂಪರ್​ ಅಂದ್ರು, ಕೆಲವರು ಮುಖ ಹಿಂಡಿದ್ರು

Follow Us