
ಚಂದನವನದಲ್ಲಿ ತಮ್ಮ ನೆಚ್ಚಿನ ತಾರೆಯರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನಾನಾವಿಧದಿಂದ ಸಂಭ್ರಮವನ್ನು ಆಚರಿಸುತ್ತಾರೆ. ನಟ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಅದಕ್ಕಾಗಿ ಫ್ಯಾನ್ಸ್ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ತಮ್ಮ ನೆಚ್ಚಿನ ಸುಂದರ ಚಿತ್ರವನ್ನು ವಿನ್ಯಾಸಗೊಳಿಸಿರುವ ಅವರು, ಅದನ್ನು ಖ್ಯಾತ ಕ್ರಿಕೆಟಿಗ, ಸುದೀಪ್ ಸ್ನೇಹಿತ ಅನಿಲ್ ಕುಂಬ್ಳೆಯವರ ಕೈಯಿಂದ ಬಿಡುಗಡೆಯನ್ನೂ ಮಾಡಿಸಿದ್ದಾರೆ. ಚಿತ್ರವನ್ನು ಸುದೀಪ್ ದೊಡ್ಡ ಮೈದಾನವೊಂದರಲ್ಲಿ ನಿಂತು ತನ್ನ ಅಭಿಮಾನಿಗಳನ್ನು ಮಾತನಾಡಿಸುತ್ತಿರುವ ಅಭೂತಪೂರ್ವ ಪರಿಕಲ್ಪನೆಯಲ್ಲಿ ರೂಪಿಸಲಾಗಿದ್ದು, ಅಭಿಮಾನಿಗಳು ಸಂತಸದಿಂದ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಸುದೀಪ್ ಜನ್ಮದಿನದ ಸಂಭ್ರಮದ ಕಾರ್ಯಕ್ರಮಗಳಿಗೆ ದೊಡ್ಡ ಮಟ್ಟದಲ್ಲಿಯೇ ಚಾಲನೆ ನೀಡಿದಂತಾಗಿದೆ.
ಸ್ನೇಹಿತ, ನಟ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿಡಿಪಿ ಬಿಡುಗಡೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಬರೆದುಕೊಂಡು ಅನಿಲ್ ಕುಂಬ್ಳೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸಿಡಿಪಿ ಎಂದರೆ ಕಾಮನ್ ಡಿಸ್ಪ್ಲೆ ಪ್ರೊಫೈಲ್. ವಿಶೇಷ ಸಂದರ್ಭಗಳಲ್ಲಿ ಶುಭಾಶಯ ಕೋರುವ ಸಲುವಾಗಿ ಎಲ್ಲರೂ ಹಾಕಿಕೊಳ್ಳಲು ರೂಪಿಸುವ ಚಿತ್ರವನ್ನು ಸಿಡಿಪಿ ಎನ್ನುತ್ತಾರೆ.
ಅನಿಲ್ ಕುಂಬ್ಳೆ ಬಿಡುಗಡೆ ಮಾಡಿರುವ ಸಿಡಿಪಿ:
ಅನಿಲ್ ಕುಂಬ್ಳೆ ಮತ್ತು ಅಭಿಮಾನಿಗಳು ನೀಡಿದ ಸರ್ಪ್ರೈಸ್ ಗಿಫ್ಟ್ಗೆ ಕಿಚ್ಚ ಇಂಪ್ರೆಸ್ ಆಗಿದ್ದು, ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೇನಿದೆ ಎಂದು ಟ್ವೀಟ್ ಮಾಡಿದ್ದಾರೆ. ‘ಎಲ್ಲರೂ ಸೇರಿ ನೀಡಿರುವ ಈ ಚಿತ್ರಕ್ಕಿಂತ ಉತ್ತಮವಾದ ಉಡುಗೊರೆ ಮತ್ತೇನಿರಲು ಸಾಧ್ಯ. ನಿಮ್ಮ ಗೌರವಕ್ಕೆ ಕೃತಜ್ಞನಾಗಿದ್ದೇನೆ. ಎಲ್ಲರಿಗೂ ಧನ್ಯವಾದಗಳು’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಸುದೀಪ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:
ಅನಿಲ್ ಕುಂಬ್ಳೆ ಹಾಗೂ ಸುದೀಪ್ ಉತ್ತಮ ಸ್ನೇಹಿತರಾಗಿದ್ದು, ಕ್ರಿಕೆಟ್ ಇಬ್ಬರಿಗೂ ಅತ್ಯಂತ ಪ್ರಿಯವಾದ ಸಾಮಾನ್ಯ ಹವ್ಯಾಸವಾಗಿದೆ. ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮುನ್ನಡೆಸಿದ, ವಿಶ್ವಶ್ರೇಷ್ಠ ಸ್ಪಿನ್ನರ್ ಆಗಿದ್ದರೆ, ಸುದೀಪ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಕರ್ನಾಟಕದ ಕಪ್ತಾನರಾಗಿದ್ಧಾರೆ. ಪ್ರಸ್ತುತ ಅನಿಲ್ ಕುಂಬ್ಳೆ ಪಂಜಾಬ್ ಕಿಂಗ್ಸ್ನ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಕೆಲಸಗಳು ಲಗುಬಗೆಯಿಂದ ಸಾಗುತ್ತಿವೆ. ಇತ್ತೀಚೆಗಷ್ಟೇ ಇದರ ಕುರಿತು ಅಪ್ಡೇಟ್ ನೀಡಿದ್ದ ಕಿಚ್ಚ, ಎಲ್ಲಾ ಸರಿಯಾಗಿದ್ದಿದ್ದರೆ ವರಮಹಾಲಕ್ಷ್ಮಿ ಹಬ್ಬದಂದು ಚಿತ್ರ ಬಿಡುಗಡೆಯಾಗಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಾಧ್ಯವಾಗಿಲ್ಲ. ಚಿತ್ರದ ಕೆಲಸಗಳು ವೇಗ ಪಡೆದುಕೊಂಡಿದ್ದು, ಮತ್ತೆ ಪ್ರಾರಂಭವಾಗಿವೆ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ:
(Fans designed a new CDP for Kichcha Sudeep birthday and it is released by Anil Kumble)