Rajinikanth: ‘ಕಾಂತಾರ 2’ ಚಿತ್ರದಲ್ಲಿ ರಜನಿಕಾಂತ್​ ನಟಿಸ್ತಾರಾ? ರಿಷಬ್​ ಶೆಟ್ಟಿ ಸಿನಿಮಾ ಬಗ್ಗೆ ಹೊಸ ಚರ್ಚೆ ಶುರು

Superstar Rajinikanth | Kantara 2 Cast: ‘ಕಾಂತಾರ 2’ ಸಿನಿಮಾದ ಪಾತ್ರವರ್ಗದ ಬಗ್ಗೆ ಸಿನಿಪ್ರಿಯರಲ್ಲಿ ಭಾರಿ ಕೌತುಕ ಮೂಡಿದೆ. ರಿಷಬ್​ ಶೆಟ್ಟಿ ಜೊತೆಗೆ ಯಾರೆಲ್ಲ ನಟಿಸಬಹುದು ಎಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Rajinikanth: ‘ಕಾಂತಾರ 2’ ಚಿತ್ರದಲ್ಲಿ ರಜನಿಕಾಂತ್​ ನಟಿಸ್ತಾರಾ? ರಿಷಬ್​ ಶೆಟ್ಟಿ ಸಿನಿಮಾ ಬಗ್ಗೆ ಹೊಸ ಚರ್ಚೆ ಶುರು
ರಜನಿಕಾಂತ್, ರಿಷಬ್ ಶೆಟ್ಟಿ

Updated on: Feb 20, 2023 | 7:23 PM

ಗಲ್ಲಾ ಪೆಟ್ಟಿಗೆಯಲ್ಲಿ ಮ್ಯಾಜಿಕ್​ ಮಾಡಿದ ‘ಕಾಂತಾರ’ (Kantara) ಸಿನಿಮಾ ಬಗ್ಗೆ ಈಗಲೂ ಚರ್ಚೆಗಳು ನಡೆಯುತ್ತಲೇ ಇವೆ. ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಪರಭಾಷೆ ಮಂದಿ ಕೂಡ ‘ಕಾಂತಾರ’ ಚಿತ್ರವನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡರು. ಅನೇಕ ಸೆಲೆಬ್ರಿಟಿಗಳು ಕೂಡ ಮಾತನಾಡಿದರು. ರಿಷಬ್​ ಶೆಟ್ಟಿ ಅವರ ಕೆಲಸಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿಬಂತು. ಈಗ ಆ ಚಿತ್ರಕ್ಕೆ ಪ್ರೀಕ್ವೆಲ್​ ತಯಾರಿಸುವ ಕಾರ್ಯ ನಡೆಯುತ್ತಿದೆ. ರಿಷಬ್​ ಶೆಟ್ಟಿ (Rishab Shetty) ಮತ್ತು ಅವರ ತಂಡದವರು ಸ್ಕ್ರಿಪ್ಟ್​ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಅದರ ಜೊತೆ ಲೊಕೇಷನ್​ ಹುಡುಕಾಟವೂ ನಡೆಯುತ್ತಿದೆ. ಈ ನಡುವೆ ‘ಕಾಂತಾರ 2’ ಬಗ್ಗೆ ಹಲವು ಬಗೆಯ ಗುಸುಗುಸು ಕೇಳಿಬರುತ್ತಿವೆ. ಈ ಚಿತ್ರದಲ್ಲಿ ಯಾರೆಲ್ಲ ನಟಿಸಬಹುದು ಎಂಬ ಪ್ರಶ್ನೆ ಮೂಡಿದೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ (Rajinikanth) ಕೂಡ ಅಭಿನಯಿಸಲಿದ್ದಾರೆ ಎಂಬ ಅನುಮಾನ ಕೆಲವರಿಗಿದೆ. ಆದರೆ ಅದಕ್ಕೆ ಚಿತ್ರತಂಡದಿಂದ ಇನ್ನಷ್ಟೇ ಪ್ರತಿಕ್ರಿಯೆ ಸಿಗಬೇಕಿದೆ.

‘ಕಾಂತಾರ’ ಸಿನಿಮಾ ಸೂಪರ್​ ಹಿಟ್​ ಆದಾಗ ರಜನಿಕಾಂತ್​ ಅವರು ಮನಸಾರೆ ಹೊಗಳಿದ್ದರು. ರಿಷಬ್​ ಶೆಟ್ಟಿ ಅವರನ್ನು ಮನೆಗೆ ಕರೆಸಿಕೊಂಡು ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರು. ಈ ಭೇಟಿ ಸುಮ್ಮನೆ ಆಗಿದ್ದಲ್ಲ ಎಂಬುದು ಕೆಲವರ ವಾದ. ‘ಕಾಂತಾರ 2’ ಚಿತ್ರದ ಬಗ್ಗೆ ಈ ಭೇಟಿಯ ಸಂದರ್ಭದಲ್ಲಿ ಮಾತುಕಥೆ ನಡೆದಿರಬಹುದು ಎಂದು ಒಂದಷ್ಟು ಮಂದಿ ಊಹಿಸುತ್ತಿದ್ದಾರೆ. ಆ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಅಂತೆ-ಕಂತೆಗಳು ಹರಿದಾಡುತ್ತಿವೆ.

ಇದನ್ನೂ ಓದಿ: Urvashi Rautela: ‘ಕಾಂತಾರ 2’ ಚಿತ್ರದಲ್ಲಿ ಊರ್ವಶಿ ರೌಟೇಲಾ ನಟಿಸೋದು ನಿಜವಲ್ಲ; ಫೋಟೋ ಹಿಂದಿನ ಸತ್ಯ ಇಲ್ಲಿದೆ

ಇದನ್ನೂ ಓದಿ
Jailer: ಶಿವಣ್ಣ-ರಜನಿಕಾಂತ್​ ಸಿನಿಮಾಗೆ ‘ಜೈಲರ್​’ ಶೀರ್ಷಿಕೆ: ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ ಪೋಸ್ಟರ್​
ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​
ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

ರಿಷಬ್​ ಶೆಟ್ಟಿ ಅವರು ಪ್ರತಿ ಬಾರಿಯೂ ಹೊಸ ಹೊಸ ಪ್ರಕಾರದಲ್ಲಿ ಸಿನಿಮಾ ಮಾಡುತ್ತಾ ಬಂದಿದ್ದಾರೆ. ‘ಕಾಂತಾರ’ ಬ್ಲಾಕ್​ ಬಸ್ಟರ್​ ಹಿಟ್​ ಆಗಿದ್ದರಿಂದ ಈಗ ಅವರು ‘ಕಾಂತಾರ 2’ ಚಿತ್ರವನ್ನು ಯಾವ ರೀತಿ ಕಟ್ಟಿಕೊಡಬಹುದು ಎಂಬ ಕೌತುಕ ಮೂಡಿದೆ. ಒಂದಷ್ಟು ಅಚ್ಚರಿಯ ವಿಚಾರಗಳಂತೂ ಖಂಡಿತ ಇರಲಿವೆ. ಇದು ಪ್ರೀಕ್ವೆಲ್​ ಆಗಿರುವುದರಿಂದ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಿದೆ.

ಇದನ್ನೂ ಓದಿ: Kantara 2 Shooting: ‘ಕಾಂತಾರ 2’ ಆರಂಭಿಸಲು ಮಳೆಗಾಲಕ್ಕೆ ಕಾದಿರುವ ರಿಷಬ್​ ಶೆಟ್ಟಿ; ಮಾಹಿತಿ ನೀಡಿದ ವಿಜಯ್​ ಕಿರಗಂದೂರು

ಮೊದಲ ಪಾರ್ಟ್​ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈಗ ಎರಡನೇ ಪಾರ್ಟ್​ ಅದಕ್ಕಿಂತಲೂ ದೊಡ್ಡ ಹಿಟ್​ ಆಗಬೇಕು ಎಂಬ ಬಯಕೆ ಅಭಿಮಾನಿಗಳಿಗೆ ಇರುತ್ತದೆ. ಅದಕ್ಕೆ ತಕ್ಕಂತೆಯೇ ನಿರ್ಮಾಣ ಸಂಸ್ಥೆ ಕೂಡ ಯೋಚಿಸುತ್ತದೆ. ಈ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್​’​ ಬಹುಕೋಟಿ ರೂಪಾಯಿ ಬಂಡವಾಳ ಹೂಡಲಿದೆ.

ಇದನ್ನೂ ಓದಿ: Kantara 2: ಅಣ್ಣಪ್ಪ ಪಂಜುರ್ಲಿ ಬಳಿ ‘ಕಾಂತಾರ 2’ ಬಗ್ಗೆ ರಿಷಬ್​ ಶೆಟ್ಟಿ ಕೇಳಿದ್ದೇನು? ಎಲ್ಲವನ್ನೂ ವಿವರಿಸಿದ ದೈವ ನರ್ತಕರು

ಈ ವರ್ಷ ಮಳೆಗಾಲದಲ್ಲಿ ‘ಕಾಂತಾರ 2’ ಸೆಟ್ಟೇರಲಿದೆ. ಕಾಡಿನಲ್ಲಿ ಹೆಚ್ಚಿನ ದೃಶ್ಯಗಳ ಶೂಟಿಂಗ್​ ನಡೆಯುವ ಸಾಧ್ಯತೆ ಇದೆ. ಪಾತ್ರವರ್ಗದ ಬಗ್ಗೆ ಆದಷ್ಟು ಬೇಗ ಅಪ್​ಡೇಟ್​ ಸಿಗಲಿ ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us