Urvashi Rautela: ‘ಕಾಂತಾರ 2’ ಚಿತ್ರದಲ್ಲಿ ಊರ್ವಶಿ ರೌಟೇಲಾ ನಟಿಸೋದು ನಿಜವಲ್ಲ; ಫೋಟೋ ಹಿಂದಿನ ಸತ್ಯ ಇಲ್ಲಿದೆ

Kantara 2 | Rishab Shetty: ಒಂದೇ ಒಂದು ಫೋಟೋ ಹಂಚಿಕೊಳ್ಳುವ ಮೂಲಕ ಊರ್ವಶಿ ರೌಟೇಲಾ ಅವರು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಆ ಫೋಟೋದ ಅಸಲಿಯತ್ತು ಏನು ಎಂಬುದು ಈಗ ಬಯಲಾಗಿದೆ.

Urvashi Rautela: ‘ಕಾಂತಾರ 2’ ಚಿತ್ರದಲ್ಲಿ ಊರ್ವಶಿ ರೌಟೇಲಾ ನಟಿಸೋದು ನಿಜವಲ್ಲ; ಫೋಟೋ ಹಿಂದಿನ ಸತ್ಯ ಇಲ್ಲಿದೆ
ಊರ್ವಶಿ ರೌಟೇಲಾ, ರಿಷಬ್ ಶೆಟ್ಟಿ
Follow us
ಮದನ್​ ಕುಮಾರ್​
|

Updated on:Feb 12, 2023 | 3:07 PM

ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದಾರೆ. ರಿಷಭ್​ ಪಂತ್​ ಜೊತೆ ಅವರ ಹೆಸರು ತಳುಕು ಹಾಕಿಕೊಂಡಾಗಿನಿಂದಲೂ ಹಲವು ಬಗೆಯ ಸುದ್ದಿಗಳು ಕೇಳಿಬರಲಾರಂಭಿಸಿದವು. ಅಚ್ಚರಿ ಎಂದರೆ ಇತ್ತೀಚೆಗೆ ರಿಷಭ್​ ಪಂತ್​ ಬದಲಿಗೆ ರಿಷಬ್​ ಶೆಟ್ಟಿಯ ಕಾರಣದಿಂದ ಊರ್ವಶಿ ರೌಟೇಲಾ ಹೆಸರು ಮತ್ತೆ ಮುನ್ನೆಲೆಗೆ ಬಂತು. ಅದಕ್ಕೆಲ್ಲ ಕಾರಣ ಆಗಿದ್ದು ಒಂದೇ ಒಂದು ಫೋಟೋ. ರಿಷಬ್​ ಶೆಟ್ಟಿ (Rishab Shetty) ಮತ್ತು ಊರ್ವಶಿ ರೌಟೇಲಾ ಅವರು ಜೊತೆಯಾಗಿ ನಿಂತಿರುವ ಫೋಟೋ ವೈರಲ್​ ಆಯಿತು. ‘ಕಾಂತಾರ 2’ (Kantara 2) ಚಿತ್ರದಲ್ಲಿ ಊರ್ವಶಿ ನಟಿಸುತ್ತಾರೆ ಎಂಬ ಗಾಸಿಪ್​ ಕೂಡ ಹಬ್ಬಿತು. ಆದರೆ ಅದು ನಿಜವಲ್ಲ ಎಂಬುದು ಈಗ ತಿಳಿದುಬಂದಿದೆ. ಪ್ರಚಾರಕ್ಕಾಗಿ ಊರ್ವಶಿ ಅವರು ಇಷ್ಟೆಲ್ಲ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ರಿಷಬ್​ ಶೆಟ್ಟಿ ನಟಿಸಿ ನಿರ್ದೇಶಿಸಿದ ‘ಕಾಂತಾರ’ ಸಿನಿಮಾ ಸೂಪರ್​ ಹಿಟ್​ ಆಯಿತು. ಈಗ ‘ಕಾಂತಾರ 2’ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಬಹುತೇಕ ಅದೇ ತಂಡವೇ ಮತ್ತೊಮ್ಮೆ ಒಂದಾಗಲಿದೆ. ಜೊತೆಗೆ ಬೇರೆ ಕಲಾವಿದರು ಕೂಡ ಪಾತ್ರವರ್ಗಕ್ಕೆ ಸೇರ್ಪಡೆ ಆಗಲಿದ್ದಾರೆ. ರಿಷಬ್​ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡು ‘ಕಾಂತಾರ 2 ಲೋಡಿಂಗ್​..’ ಎಂದು ಊರ್ವಶಿ ರೌಟೇಲಾ ಅವರು ಕ್ಯಾಪ್ಷನ್​ ನೀಡಿದ್ದರಿಂದ ಅವರು ಈ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಎಂದೇ ಊಹಿಸಲಾಗಿತ್ತು. ಆದರೆ ಅದು ನಿಜವಲ್ಲ.

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

ಇದನ್ನೂ ಓದಿ: ‘ಕಾಂತಾರ’ ತಂಡದವರಿಗೆ ಎಷ್ಟು ಬಾರಿ ಪೇಮೆಂಟ್ ಸಿಕ್ಕಿದೆ? ಅಸಲಿ ವಿಚಾರ ತಿಳಿಸಿದ ರಿಷಬ್ ಶೆಟ್ಟಿ

ಕೆಲವು ಮಾಧ್ಯಮಗಳಿಗೆ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ಕಾಂತಾರ 2 ಚಿತ್ರದಲ್ಲಿ ಊರ್ವಶಿ ನಟಿಸುತ್ತಾರೆ ಎಂಬ ಸುದ್ದಿ ಸಂಪೂರ್ಣ ಆಧಾರ ರಹಿತವಾದದ್ದು. ರಿಷಬ್​ ಶೆಟ್ಟಿ ಅವರನ್ನು ಭೇಟಿ ಮಾಡಬೇಕು ಅಂತ ಊರ್ವಶಿ ಮನವಿ ಮಾಡಿಕೊಂಡಿದ್ದರು. ಆ ಸಂದರ್ಭದ ಫೋಟೋವನ್ನು ಈಗ ಅವರು ಇಂಥ ಕ್ಯಾಪ್ಷನ್​ ಮೂಲಕ ಪೋಸ್ಟ್​ ಮಾಡಿದ್ದರಿಂದ ಗಾಳಿಸುದ್ದಿ ಹುಟ್ಟಿಕೊಂಡಿತು’ ಎಂದು ‘ಹೊಂಬಾಳೆ ಫಿಲ್ಮ್ಸ್​’​ ಮೂಲಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್​ ಮಾಡಲು ರಿಷಬ್​ ಶೆಟ್ಟಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿವೆ. ಜೊತೆಗೆ ಲೊಕೇಷನ್​ ಹುಡುಕಾಟವೂ ಜೋರಾಗಿದೆ. ಈ ಕಥೆಯಲ್ಲಿನ ದೃಶ್ಯಗಳ ಚಿತ್ರೀಕರಣಕ್ಕೆ ಮಳೆಯ ಅವಶ್ಯಕತೆ ಇರುವುದರಿಂದ ಜೂನ್​ ತಿಂಗಳಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ನಿರ್ಮಾಪಕ ವಿಜಯ್​ ಕಿರಗಂದೂರು ಸಜ್ಜಾಗಿದ್ದರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:07 pm, Sun, 12 February 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ