Rashmika Mandanna: ಬಾಲಿವುಡ್​ ಸ್ಟಾರ್​ ನಟನ ಸಿನಿಮಾಗೆ ನೋ ಎಂದ ರಶ್ಮಿಕಾ; ಸ್ಪಷ್ಟನೆ ನೀಡಿದ ನಟಿ

ಸಿದ್ಧಾರ್ಥ್​ ಮಲ್ಹೋತ್ರ ನಟನೆಯ ಮಿಷನ್​ ಮಜ್ನು ಹಾಗೂ ಬಿಗ್​​ಬಿ ನಟನೆಯ ಗುಡ್​ಬೈ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರಿಗೆ ಈ ಆಫರ್​ ಬಂದಿದೆ. ಆದರೆ, ಇದನ್ನು ಅವರು ರಿಜೆಕ್ಟ್​ ಮಾಡಿದ್ದಾರೆ.

Rashmika Mandanna: ಬಾಲಿವುಡ್​ ಸ್ಟಾರ್​ ನಟನ ಸಿನಿಮಾಗೆ ನೋ ಎಂದ ರಶ್ಮಿಕಾ; ಸ್ಪಷ್ಟನೆ ನೀಡಿದ ನಟಿ
ರಶ್ಮಿಕಾ ಮಂದಣ್ಣ
Edited By:

Updated on: May 02, 2021 | 10:27 AM

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಸಿನಿಮಾ ಆಫರ್​ಗಳನ್ನು ಗಳಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ಸ್ಟಾರ್​ ನಟರ ಜತೆ ನಟಿಸುತ್ತಿರುವುದರ ಜತೆಗೆ ಹಿಂದಿಯಲ್ಲಿ ಎರಡು ದೊಡ್ಡ ಪ್ರಾಜೆಕ್ಟ್​ಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗಲೇ ನಟಿ ರಶ್ಮಿಕಾ ಸ್ಟಾರ್​ ನಟನ ಸಿನಿಮಾಗೆ ನೋ ಎಂದಿದ್ದಾರಂತೆ. ಇದಕ್ಕೆ ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ.

ಕಬೀರ್​ ಸಿಂಗ್​ ಹಿಟ್​ ಆದ ನಂತರದಲ್ಲಿ ಶಾಹಿದ್​ ಕಪೂರ್​ ಜೆರ್ಸಿ ರಿಮೇಕ್​ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕ್ರಿಕೇಟರ್​ ಓರ್ವನ ಕಥೆಯನ್ನು ಹೇಳುತ್ತಿದೆ. ತೆಲುಗಿನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ನಾನಿ ಹಾಗೂ ಶ್ರದ್ಧಾ ಶ್ರೀನಾಥ್​ ತೆಲುಗಿನಲ್ಲಿ ಬಣ್ಣ ಹಚ್ಚಿದ್ದರು. ಹಿಂದಿ ರಿಮೇಕ್​ನಲ್ಲಿ  ಶಾಹಿದ್​ ಕ್ರಿಕೆಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸೋಕೆ ರಶ್ಮಿಕಾಗೆ ಆಫರ್​ ನೀಡಲಾಗಿತ್ತಂತೆ.

ಸಿದ್ಧಾರ್ಥ್​ ಮಲ್ಹೋತ್ರ ನಟನೆಯ ಮಿಷನ್​ ಮಜ್ನು ಹಾಗೂ ಬಿಗ್​​ಬಿ ನಟನೆಯ ಗುಡ್​ಬೈ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರಿಗೆ ಈ ಆಫರ್​ ಬಂದಿದೆ. ಆದರೆ, ಇದನ್ನು ಅವರು ರಿಜೆಕ್ಟ್​ ಮಾಡಿದ್ದಾರೆ.

ಹಾಗಾದರೆ, ರಶ್ಮಿಕಾಗೆ ಡೇಟ್ಸ್​ ಸಮಸ್ಯೆ ಇತ್ತಾ? ಇಲ್ಲ. ಶ್ರದ್ಧಾ ಶ್ರೀನಾಥ್​ ಈ ಪಾತ್ರಕ್ಕೆ ನೀಡಿದಷ್ಟು ನ್ಯಾಯವನ್ನು ತಾವು ನೀಡಲು ಸಾಧ್ಯವಾಗದೇ ಇರಬಹುದು ಎಂದು ರಶ್ಮಿಕಾ ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕೆ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ.

ಜೆರ್ಸಿ ಸಿನಿಮಾವನ್ನು ಗೌತಮ್​ ಹಿಂದಿಗೆ ರಿಮೇಕ್​ ಮಾಡುತ್ತಿದ್ದಾರೆ. ಪಂಕಜ್​ ಕಪೂರ್​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೃನಾಲ್​ ಠಾಕೂರ್​ ಸಿನಿಮಾಕ್ಕೆ ನಾಯಕಿ. ಟಾಲಿವುಡ್​ನಲ್ಲಿ ತೆರೆಕಂಡ ಅರ್ಜುನ್​ ರೆಡ್ಡಿ ಸಿನಿಮಾ ಬಾಲಿವುಡ್​ನಲ್ಲಿ ಕಬೀರ್​ ಸಿಂಗ್​ ಆಗಿ ತೆರೆಗೆ ಬಂದಿತ್ತು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಹೀಗಾಗಿ ತೆಲುಗಿನ ಜೆರ್ಸಿ ಸಿನಿಮಾವನ್ನು ಬಾಲಿವುಡ್​ಗೆ ರಿಮೇಕ್​ ಮಾಡಲಾಗುತ್ತಿದೆ. ಶಶಾಂಕ್​ ಖೈತಾನ್​ ಮುಂದಿನ ಚಿತ್ರ ಯೋಧ ಸಿನಿಮಾದಲ್ಲಿ ಶಾಹಿದ್​ ನಟಿಸಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ಅವರು ಸಿನಿಮಾದಿಂದ ಹೊರ ನಡೆದಿದ್ದರು.

ಇದನ್ನೂ ಓದಿ: Rashmika Mandanna: ‘ಈ ಸಲ ಕಪ್​ ನಮ್ದೇ’ ಎಂದ ರಶ್ಮಿಕಾ ಮಂದಣ್ಣಗೆ ಆರ್​ಸಿಬಿ ಫ್ಯಾನ್ಸ್​ ಫಿದಾ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us