ಅನೂಪ್​ ರೇವಣ್ಣ ಜತೆ ಧನ್ಯಾ ರಾಮ್​ಕುಮಾರ್​ ‘ಹೈಡ್​ ಆ್ಯಂಡ್​ ಸೀಕ್​’; ಇಲ್ಲಿದೆ ಮೋಷನ್​ ಪೋಸ್ಟರ್​

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದಲ್ಲಿ ಕಿಡ್ನಾಪ್​ ಕಹಾನಿ ಇದೆ. ಈ ಸಿನಿಮಾದಲ್ಲಿ ಧನ್ಯಾ ರಾಮ್​ಕುಮಾರ್​ ಮತ್ತು ಅನೂಪ್​ ರೇವಣ್ಣ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಪುನೀತ್​ ನಾಗರಾಜು ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಮೋಷನ್​ ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಈ ಸಿನಿಮಾದಲ್ಲಿ ರಿವರ್ಸ್​ ಸ್ಕ್ರೀನ್​ಪ್ಲೇ ಇದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ.

ಅನೂಪ್​ ರೇವಣ್ಣ ಜತೆ ಧನ್ಯಾ ರಾಮ್​ಕುಮಾರ್​ ‘ಹೈಡ್​ ಆ್ಯಂಡ್​ ಸೀಕ್​’; ಇಲ್ಲಿದೆ ಮೋಷನ್​ ಪೋಸ್ಟರ್​
ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​

Updated on: Feb 25, 2024 | 11:32 AM

ಕನ್ನಡದ ‘ಹೈಡ್​ ಆ್ಯಂಡ್​ ಸೀಕ್​’ (Hide and Seek) ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಶೀರ್ಷಿಕೆಯ ಕಾರಣದಿಂದಲೇ ಈ ಚಿತ್ರ ಕೌತುಕ ಮೂಡಿಸಿತ್ತು. ಈಗ ಈ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರದಲ್ಲಿ ಅನೂಪ್​ ರೇವಣ್ಣ (Anoop Revanna) ಅವರು ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಧನ್ಯಾ ರಾಮ್​ಕುಮಾರ್​ (Dhanya Ramkumar) ಅಭಿನಯಿಸಿದ್ದಾರೆ. ಮೋಷನ್​ ಪೋಸ್ಟರ್​ನಲ್ಲಿ ಇವರಿಬ್ಬರ ಗೆಟಪ್​ ಹೈಲೈಟ್​ ಆಗಿದೆ. ಬಹಳ ದಿನಗಳಿಂದ ಈ ಚಿತ್ರಕ್ಕಾಗಿ ಸಿನಿಪ್ರಿಯರು ಕಾದಿದ್ದರು. ಕಡೆಗೂ ಈ ಸಿನಿಮಾವನ್ನು ಚಿತ್ರಮಂದಿರಕ್ಕೆ ತರಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಮಾರ್ಚ್​ 15ರಂದು ‘ಹೈಡ್​ ಆ್ಯಂಡ್​ ಸೀಕ್​’ ಬಿಡುಗಡೆ ಆಗಲಿದೆ.

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾಗೆ ಪುನೀತ್​ ನಾಗರಾಜು ನಿರ್ದೇಶನ ಮಾಡಿದ್ದಾರೆ. ವಸಂತ್​ ಎಂ. ರಾವ್​ ಕುಲಕರ್ಣಿ, ಪುನೀತ್​ ನಾಗರಾಜು​ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ‘ಸುನೇರಿ ಆರ್ಟ್​ ಕ್ರಿಯೇಷನ್ಸ್​’ ಬ್ಯಾನರ್​ ಮೂಲಕ ಈ ಚಿತ್ರವನ್ನು ನಿರ್ಮಿಸಲಾಗಿದೆ. ಪಿಜೋ ಪಿ. ಜಾನ್​ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮಧು ತುಂಬೆಕೆರೆ ಅವರು ಸಂಕಲನ ಮಾಡಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರಕ್ಕೆ ಸ್ಯಾಂಡಿ ಅಡ್ಡಂಕಿ ಅವರು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Shakhahaari Review: ‘ಶಾಖಾಹಾರಿ’ ಸಿನಿಮಾದಲ್ಲಿ ಹಲವು ಟ್ವಿಸ್ಟ್​; ರಂಗಾಯಣ ರಘು ಬೆಸ್ಟ್​

‘ಎ2 ಮ್ಯೂಸಿಕ್​’ ಮೂಲಕ ‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಿದೆ. ಅನೂಪ್​ ರೇವಣ್ಣ, ಧನ್ಯಾ ರಾಮ್​ಕುಮಾರ್​ ಜೊತೆ ಈ ಸಿನಿಮಾದಲ್ಲಿ ಮೈತ್ರಿ ಜಗ್ಗಿ, ಸೂರಜ್​, ಬಲರಾಜ್​ ವಾಡಿ, ಕೃಷ್ಣ ಹೆಬ್ಬಾಳೆ, ರಾಜೇಶ್​ ನಟರಂಗ, ಅರವಿಂದ್​ ರಾವ್​ ಮುಂತಾದವರು ನಟಿಸಿದ್ದಾರೆ. ‘ಹೈಡ್​ ಆ್ಯಂಡ್​ ಸೀಕ್​’ ಚಿತ್ರದಲ್ಲಿ ಅನೂಪ್​ ರೇವಣ್ಣ ಅವರು ಕಿಡ್ನಾಪರ್​ ಪಾತ್ರ ಮಾಡಿದ್ದಾರೆ ಎಂಬುದು ವಿಶೇಷ.

‘ಹೈಡ್​ ಆ್ಯಂಡ್​ ಸೀಕ್​’ ಸಿನಿಮಾದ ಮೋಷನ್​ ಪೋಸ್ಟರ್:

ಡಾ. ರಾಜ್​ಕುಮಾರ್​ ಅವರ ಮೊಮ್ಮಗಳು ಧನ್ಯಾ ರಾಮ್​ಕುಮಾರ್ ಈ ಸಿನಿಮಾದಲ್ಲಿ ಉದ್ಯಮಿಯ ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದು ಅವರು ಒಪ್ಪಿಕೊಂಡ ಎರಡನೇ ಸಿನಿಮಾ. ರಿವರ್ಸ್​ ಸ್ಕ್ರೀನ್​ಪ್ಲೇ ಈ ಸಿನಿಮಾದಲ್ಲಿ ಇದೆ ಎಂದು ಚಿತ್ರತಂಡದವರು ಹೇಳಿರುವುದು ಕೌತುಕ ಮೂಡಿಸಿದೆ. ಕಥೆಯಲ್ಲಿ ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳು ಇವೆ. ಈ ಕಾರಣದಿಂದ ಅನೂಪ್​ ರೇವಣ್ಣ ಮತ್ತು ಧನ್ಯಾ ರಾಮ್​ಕುಮಾರ್​ ಅವರು ಈ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಮಾರ್ಚ್​ 15ರಂದು ‘ಹೈಡ್​ ಆ್ಯಂಡ್​ ಸೀಕ್​’ ತೆರೆಕಾಣಲಿದೆ. ಸಿನಿಪ್ರಿಯರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಸಿನಿಮಾದ ಪ್ರಮೋಷನ್​ ಕಾರ್ಯ ಭರದಿಂದ ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us