‘ಕಾಂತಾರ’ ತಂಡದವರಿಗೆ ಎಷ್ಟು ಬಾರಿ ಪೇಮೆಂಟ್ ಸಿಕ್ಕಿದೆ? ಅಸಲಿ ವಿಚಾರ ತಿಳಿಸಿದ ರಿಷಬ್ ಶೆಟ್ಟಿ

|

Updated on: Feb 11, 2023 | 12:37 PM

‘ಕಾಂತಾರ’ ಸಿನಿಮಾ ಕೇವಲ 15 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡಿತ್ತು. ಈ ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್​ನ ವಿಜಯ್ ಕಿರಗಂದೂರು ಅವರಿಗೆ ಸಾಕಷ್ಟು ಲಾಭ ಆಗಿದೆ.

‘ಕಾಂತಾರ’ ತಂಡದವರಿಗೆ ಎಷ್ಟು ಬಾರಿ ಪೇಮೆಂಟ್ ಸಿಕ್ಕಿದೆ? ಅಸಲಿ ವಿಚಾರ ತಿಳಿಸಿದ ರಿಷಬ್ ಶೆಟ್ಟಿ
ವಿಜಯ್ ಕಿರಗಂದೂರು-ರಿಷಬ್,ಸಪ್ತಮಿ ಗೌಡ
Follow us on

‘ಕಾಂತಾರ’ (Kantara Movie) ಯಶಸ್ಸಿನಿಂದ ಈ ಚಿತ್ರದ ಕಲಾವಿದರ ಖ್ಯಾತಿ ಹೆಚ್ಚಿದೆ. ರಿಷಬ್ ಶೆಟ್ಟಿ ಜತೆ ಸಿನಿಮಾ ಮಾಡಬೇಕು ಎಂದು ಅನೇಕ ನಿರ್ಮಾಪಕರು ಮುಂದೆ ಬಂದಿದ್ದಾರೆ. ಬಾಲಿವುಡ್​, ಟಾಲಿವುಡ್​ನಿಂದ ಅವರಿಗೆ ಅವಕಾಶಗಳು ಬರುತ್ತಿವೆ. ಆದರೆ, ಅವರ ಸಂಪೂರ್ಣ ಗಮನ ‘ಕಾಂತಾರ 2’ ಮೇಲಿದೆ. ನಟಿ ಸಪ್ತಮಿ ಗೌಡ ಅವರು ಬಾಲಿವುಡ್​ನಿಂದ ಆಫರ್ ಗಿಟ್ಟಿಸಿಕೊಂಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಮುಂದಿನ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ‘ಕಾಂತಾರ’ ಯಶಸ್ಸಿನ ಬಳಿಕ ನಡೆದ ವಿಚಾರಗಳನ್ನು ರಿಷಬ್ ಹೇಳಿಕೊಂಡಿದ್ದಾರೆ.

‘ಕಾಂತಾರ’ ಸಿನಿಮಾ ಕೇವಲ 15 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧಗೊಂಡಿತ್ತು. ಈ ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್​ನ ವಿಜಯ್ ಕಿರಗಂದೂರು ಅವರಿಗೆ ಸಾಕಷ್ಟು ಲಾಭ ಆಗಿದೆ. ಹಾಗಂತ ಅವರು ಲಾಭವನ್ನು ತಾವಷ್ಟೇ ಇಟ್ಟುಕೊಂಡಿಲ್ಲ. ಇದನ್ನು ಚಿತ್ರಕ್ಕೆ ಕೆಲಸ ಮಾಡಿದವರಿಗೆ ಹಂಚಿದ್ದಾರೆ. ಈ ಬಗ್ಗೆ ರಿಷಬ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಉದ್ಘಾಟನೆಗೊಂಡಿದೆ. ಸಿನಿಮಾ ಪತ್ರಕರ್ತರ ಜೊತೆ ರಿಷಬ್ ಶೆಟ್ಟಿ ಅವರ ಮೊದಲ ಮುಖಾಮುಖಿ ನಡೆದಿದೆ. ಈ ವೇಳೆ ಅವರು ‘ಕಾಂತಾರ’ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್​​ನವರು ಎರಡನೇ ಪೇಮೆಂಟ್ ಮಾಡಿರುವ ಬಗ್ಗೆ ರಿಷಬ್ ಮಾಹಿತಿ ನೀಡಿದ್ದಾರೆ. ‘ಕಾಂತಾರ ಗೆದ್ದ ನಂತರ ಹೊಂಬಾಳೆ ಎಲ್ಲರಿಗೂ ಮತ್ತೊಮ್ಮೆ ಪೇಮೆಂಟ್​ ಮಾಡಿದೆ. ಅದು ಅವರ ದೊಡ್ಡತನ’ ಎಂದು ರಿಷಬ್ ಹೇಳಿದ್ದಾರೆ.  ಈ ಮೂಲಕ ಎಲ್ಲಾ ಕಲಾವಿದರಿಗೆ ಎರಡು ಸಲ ಸಂಭಾವನೆ ಸಿಕ್ಕಂತೆ ಆಗಿದೆ.

ಪ್ಯಾನ್ ಇಂಡಿಯಾ ಯಶಸ್ಸಿಗೆ ಹೊಂಬಾಳೆ ಕಾರಣ

‘ನಾವು ಸಿನಿಮಾ ರಿಲೀಸ್​ಗೆ ಮುಂಚೆ ಹೆಚ್ಚು ಪ್ರಚಾರ ಮಾಡಿರಲಿಲ್ಲ. ಆದಾಗ್ಯೂ ದೊಡ್ಡ ಯಶಸ್ಸು ಸಿಕ್ಕಿದೆ. ಬಾಯಿಮಾತಿನ ಪ್ರಚಾರ ಚಿತ್ರಕ್ಕೆ ಸಹಕಾರಿ ಆಯಿತು. ಕಾಂತಾರ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ ಎಂದುಕೊಂಡಿರಲಿಲ್ಲ. ನಮ್ಮ ಚಿತ್ರ ಪ್ಯಾನ್ ಇಂಡಿಯಾ ಮಟ್ಟಕ್ಕೆ ತಲುಪಲು ವಿಜಯ್ ಕಿರಂಗದೂರು ಕೂಡ ಕಾರಣ. ಅವರಿಗೆ ನಮ್ಮ ಸಿನಿಮಾನ ಹೇಗೆ ತಲುಪಿಸಬೇಕು ಎನ್ನುವ ಕ್ಲ್ಯಾರಿಟಿ ಇತ್ತು. ಈ ಕ್ಲ್ಯಾರಿಟಿ ಇದ್ದಿದ್ದರಿಂದಲೇ ಯಶಸ್ಸು ಸಿಕ್ಕಿತು’ ಎಂದಿದ್ದಾರೆ ರಿಷಬ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ