ನಟ ದರ್ಶನ್ ಅವರು ಜೈಲಿನಲ್ಲಿ ಹಾಯಾಗಿ ದಿನಗಳನ್ನು ಕಳೆಯುತ್ತಿದ್ದಾರೆ. ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ದರ್ಶನ್ಗೆ ಇದರಿಂದ ರಾಜಾತಿಥ್ಯ ಸಿಗುತ್ತಿದೆಯೇ ಎನ್ನುವ ಪ್ರಶ್ನೆ ಏಳುವಂತೆ ಆಗಿದೆ. ದರ್ಶನ್ ಅವರು ಜೈಲಲ್ಲಿ ಪಶ್ಚಾತಾಪ ಪಡುತ್ತಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಆದರೆ, ಆ ರೀತಿ ಇಲ್ಲ ಎಂಬುದು ಸ್ಪಷ್ಟವಾಗಿದೆ. ಈ ಬೆನ್ನಲ್ಲೇ ಗೃಹಸಚಿವ ಜಿ.ಪರಮೇಶ್ವರ್ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ದರ್ಶನ್ ಅವರು ಜೈಲಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಅವರು ವಿಲ್ಸನ್ ಗಾರ್ಡನ್ ನಾಗ, ಮ್ಯಾನೇಜರ್ ನಾಗರಾಜ್ ಒಟ್ಟಿಗೆ ಸಮಯ ಕಳೆಯುತ್ತಿರೋ ಫೋಟೋನ ಯಾರೋ ವೈರಲ್ ಮಾಡಿದ್ದಾರೆ. ಇದರಿಂದ ದರ್ಶನ್ಗೆ ರಾಜಾತಿಥ್ಯ ಸಿಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ. ಸದ್ಯ ಬಂದಿಖಾನೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಜೊತೆ ಗೃಹ ಸಚಿವ ಪರಮೇಶ್ವರ್ ಚರ್ಚೆ ಮಾಡಿದ್ದಾರೆ.
ಪರಮೇಶ್ವರ್ ಅವರು ಮಾಲಿನಿ ಕೃಷ್ಣಮೂರ್ತಿ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ದರ್ಶನ್ಗೆ ರಾಜಾತಿಥ್ಯದ ಬಗ್ಗೆ ಪರಮೇಶ್ವರ್ ಗರಂ ಆಗಿದ್ದಾರೆ. ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ವರದಿ ಆಗಿದೆ.
ಇನ್ನು ಜೈಲಿನಲ್ಲಿ ದರ್ಶನ್ಗೆ ಮೊಬೈಲ್ ಬಳಕೆಗೂ ಅವಕಾಶ ಸಿಗುತ್ತಿದೆ. ಅವರು ಸಹ ಖೈದಿಯ ಮೊಬೈಲ್ನಿಂದ ಇತರ ರೌಡಿ ಶೀಟರ್ ಕುಟುಂಬದವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಜೈಲಿಂದ ದರ್ಶನ್ ವಿಡಿಯೋ ಕಾಲ್ ಮಾಡಿದ್ದು ಕೂಡ ರೌಡಿಗಳಿಗೆ; ಸ್ವಲ್ಪವೂ ಬದಲಾಗಿಲ್ಲ ದಾಸ
ದರ್ಶನ್ಗೆ ಪಶ್ಚಾತಾಪ ಇದೆ ಎಂದೆಲ್ಲ ಹೇಳಲಾಗಿತ್ತು. ಆದರೆ, ಅವರಿಗೆ ಆ ರೀತಿಯ ಯಾವುದೇ ಭಾವನೆ ಇದ್ದಂತೆ ಇಲ್ಲ. ಅವರು ಹಾಯಾಗಿಯೇ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಇತ್ತ ರೇಣುಕಾ ಸ್ವಾಮಿ ಕುಟುಂಬದವರ ಕಣ್ಣೀರು ಮುಂದುವರಿದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.