Prashanth Neel:‘ನಾನು ಬ್ಯಾಡ್ ಹಸ್ಬಂಡ್’; ಓಪನ್ ಆಗಿ ಮಾತನಾಡಿದ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡಿಲ್ಲ. ಈ ವಿಚಾರವನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿದ್ದಾರೆ. ‘ನಾನು ಬ್ಯಾಡ್ ಹಸ್ಬಂಡ್’ ಎಂದು ಹೇಳಿದ್ದಾರೆ.

Prashanth Neel:‘ನಾನು ಬ್ಯಾಡ್ ಹಸ್ಬಂಡ್’; ಓಪನ್ ಆಗಿ ಮಾತನಾಡಿದ ಪ್ರಶಾಂತ್ ನೀಲ್
ಪ್ರಶಾಂತ್ ನೀಲ್

Updated on: Dec 23, 2023 | 8:56 AM

ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾ (Salar Movie) ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದಿದೆ. ಈ ವರ್ಷ ರಿಲೀಸ್ ಆದ ‘ಪಠಾಣ್’, ‘ಜವಾನ್’, ‘ಅನಿಮಲ್’ ಮೊದಲಾದ ಸೂಪರ್ ಹಿಟ್ ಸಿನಿಮಾದ ದಾಖಲೆಗಳನ್ನು ಒಂದೇ ದಿನದಲ್ಲಿ ಪ್ರಶಾಂತ್ ನೀಲ್ ಚಿತ್ರ ಉಡೀಸ್ ಮಾಡಿದೆ. ಈ ಚಿತ್ರ ಮೊದಲ ದಿನ 175 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾಗಾಗಿ ಸಂಪೂರ್ಣ ಸಮಯ ಮೀಸಲಿಡುತ್ತಿರುವ ಪ್ರಶಾಂತ್ ನೀಲ್ ಅವರು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ವಿಚಾರಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಬ್ಯಾಡ್ ಹಸ್ಬಂಡ್’ ಎಂದು ಹೇಳಿದ್ದಾರೆ.

‘ಸಲಾರ್’ ಸಿನಿಮಾದಲ್ಲಿ ಫ್ರೆಂಡ್​ಶಿಪ್ ಬಗ್ಗೆ ಇದೆ. ಇಬ್ಬರು ಗೆಳೆಯರು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಏನೇ ಸಹಾಯ ಕೇಳಿದರೂ ಮಾಡೋಕೆ ರೆಡಿ ಇರುತ್ತಾರೆ. ಇಷ್ಟು ಒಳ್ಳೆಯ ಫ್ರೆಂಡ್​ಶಿಪ್ ಕಥೆ ಹೇಳುವ ಪ್ರಶಾಂತ್ ನೀಲ್ ಅವರು ಗೆಳೆತನವನ್ನು ಹೇಗೆ ನೋಡುತ್ತಾರೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಈ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.

‘ಗೆಳೆತನವನ್ನು ಪ್ರಶಾಂತ್ ನೀಲ್ ಹೇಗೆ ನೊಡ್ತಾರೆ’ ಎನ್ನುವ ಪ್ರಶ್ನೆಯನ್ನು ಪ್ರಶಾಂತ್ ನೀಲ್​ಗೆ ಕೇಳಲಾಯಿತು. ಇದಕ್ಕೆ ಅವರು ಮುಚ್ಚುಮರೆ ಇಲ್ಲದೆ ಉತ್ತರಿಸಿದ್ದಾರೆ ‘ನಾನೋರ್ವ ಕೆಟ್ಟ ತಂದೆ, ಕೆಟ್ಟ ಮಗ, ಕೆಟ್ಟ ಪತಿ ಮತ್ತು ಹಾರಿಬಲ್ ಗೆಳೆಯ. ನಾನು ಸಿನಿಮಾಗೋಸ್ಕರ ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಆದರೆ ಫ್ರೆಂಡ್​ಶಿಪ್​ಗೆ ವ್ಯಾಲ್ಯೂ ಮಾಡೋದನ್ನು ನೋಡಿದ್ದೇನೆ. ವಿಜಯ್ ಕಿರಗಂದೂರು ಅವರು ಹಾಗೂ ಅವರ ಗೆಳೆಯರನ್ನು ನೋಡಿದರೆ ಹೆಮ್ಮೆ ಅನಿಸುತ್ತದೆ. ಅವರನ್ನು ನೋಡಿ ನಾನು ಖುಷಿಪಟ್ಟಿದ್ದೇನೆ’ ಎಂದರು ಪ್ರಶಾಂತ್ ನೀಲ್.

ಪ್ರಶಾಂತ್ ನೀಲ್ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡಿಲ್ಲ. ಈ ವಿಚಾರವನ್ನು ಪ್ರಶಾಂತ್ ನೀಲ್ ಒಪ್ಪಿಕೊಂಡಿದ್ದಾರೆ. ಬ್ರೇಕ್ ತೆಗೆದುಕೊಳ್ಳುವ ವಿಚಾರದ ಬಗ್ಗೆ ಪ್ರಶಾಂತ್​ ನೀಲ್​ಗೆ ಕೇಳಲಾಗಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಕುಟುಂಬಕ್ಕೆ ಹೆಚ್ಚು ಸಮಯ ನೀಡುವುದಿಲ್ಲ. ನಾನು ನನ್ನ ಮಕ್ಕಳನ್ನು ಮೂರು ತಿಂಗಳಿಗೆ ಒಮ್ಮೆ ನೋಡುತ್ತೇನೆ. ಅದೂ ಅವರು ಅತ್ತಾಗ. ಆಗ ಓಡೋಡಿಕೊಂಡು ಹೋಗುತ್ತೇನೆ. ನಾನು ಈ ರೀಯಾಲಿಟಿಯನ್ನು ಒಪ್ಪಿಕೊಂಡು ಸ್ವೀಕರಿಸಿದ್ದೇನೆ. ನಾನು ಮಾಡೋ ಸಿನಿಮಾ ಉತ್ತಮವಾಗಿ ಮೂಡಿಬರಬೇಕು ಅನ್ನೋದು ಅಷ್ಟೇ ನನ್ನ ಉದ್ದೇಶ. ಒಂದು ಸಿನಿಮಾ ಮುಗಿದ ಬಳಿಕ ಬ್ರೇಕ್ ತೆಗೆದುಕೊಳ್ಳೋದು ನನ್ನ ಕೈಯಲ್ಲೇ ಇರುತ್ತದೆ’ ಎಂದಿದ್ದಾರೆ ಪ್ರಶಾಂತ್ ನೀಲ್.

ಇದನ್ನೂ ಓದಿ: ‘ಸಲಾರ್’ ಮೊದಲ ದಿನದ ಗಳಿಕೆ ಎಷ್ಟು? ಐತಿಹಾಸಿಕ ದಾಖಲೆ ಬರೆದ ಪ್ರಶಾಂತ್ ನೀಲ್ ಸಿನಿಮಾ

ಪ್ರಶಾಂತ್ ನೀಲ್ ಅವರಿಗೆ ಇಷ್ಟು ದೊಡ್ಡ ಜನಪ್ರಿಯತೆ ಸಿಗಲು ಅವರ ಪತ್ನಿ ಲಿಖಿತಾ ರೆಡ್ಡಿ ಕೂಡ ಒಂದು ರೀತಿಯಲ್ಲಿ ಕಾರಣವೇ. ಪ್ರಶಾಂತ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದ ಸಂದರ್ಭದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಲಿಖಿತಾ ತೆಗೆದುಕೊಳ್ಳುತ್ತಾರೆ. ಅದನ್ನು ಅವರು ಯಶಸ್ವಿ ಆಗಿ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಪ್ರಶಾಂತ್​ ನೀಲ್​ಗೆ ಖುಷಿ ಇದೆ.

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ. ಕನ್ನಡದ ದೇವರಾಜ್, ಗರುಡ ರಾಮ್, ಪ್ರಮೋದ್, ನವೀನ್ ಶಂಕರ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಈ ಪಾತ್ರಗಳು ಗಮನ ಸೆಳೆದಿವೆ. ‘ಸಲಾರ್’ ಚಿತ್ರ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ದೊಡ್ಡ ಲಾಭ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us