‘ಸಲಾರ್’ ಮೊದಲ ದಿನದ ಗಳಿಕೆ ಎಷ್ಟು? ಐತಿಹಾಸಿಕ ದಾಖಲೆ ಬರೆದ ಪ್ರಶಾಂತ್ ನೀಲ್ ಸಿನಿಮಾ

Salaar Movie Collection: ‘ಸಲಾರ್’ ಚಿತ್ರವನ್ನು ಕೆಲವರು ‘ಉಗ್ರಂ’ ಕಥೆ ಹಾಗೂ ‘ಕೆಜಿಎಫ್ 2’ ಮೇಕಿಂಗ್​ಗೆ ಹೋಲಿಕೆ ಮಾಡಿದರು. ಆದರೆ, ಇದೆಲ್ಲ ನೆಗೆಟಿವ್ ಮಾತುಗಳನ್ನು ಪ್ರೇಕ್ಷಕರು ನಿರ್ಲಕ್ಷಿಸಿದ್ದಾರೆ. ಹೀಗಾಗಿ ‘ಸಲಾರ್’ ಉತ್ತಮ ಗಳಿಕೆ ಮಾಡಿದೆ.

‘ಸಲಾರ್’ ಮೊದಲ ದಿನದ ಗಳಿಕೆ ಎಷ್ಟು? ಐತಿಹಾಸಿಕ ದಾಖಲೆ ಬರೆದ ಪ್ರಶಾಂತ್ ನೀಲ್ ಸಿನಿಮಾ
ಸಲಾರ್
Follow us
ರಾಜೇಶ್ ದುಗ್ಗುಮನೆ
|

Updated on:Dec 23, 2023 | 7:16 AM

‘ಸಲಾರ್’ ಸಿನಿಮಾ (Salaar Movie) ರಿಲೀಸ್ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಅವರು ಸಾಕಷ್ಟು ನರ್ವಸ್ ಆಗಿದ್ದರು. ಚಿತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಅವರನ್ನು ಕಾಡಿತ್ತು. ಈ ಭಯ ಈಗ ದೂರವಾಗಿದೆ. ‘ಸಲಾರ್’ ಚಿತ್ರ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಯಾವ ಸಿನಿಮಾಗಳೂ ಇಲ್ಲಿಯವರೆಗೆ ಮಾಡದಷ್ಟು ಗಳಿಕೆ ಮಾಡಿವೆ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್​ಗೆ ಭರ್ಜರಿ ಲಾಭ ಆಗಿದೆ.

‘ಸಲಾರ್’ ಚಿತ್ರವನ್ನು ಕೆಲವರು ‘ಉಗ್ರಂ’ ಕಥೆ ಹಾಗೂ ‘ಕೆಜಿಎಫ್ 2’ ಮೇಕಿಂಗ್​ಗೆ ಹೋಲಿಕೆ ಮಾಡಿದರು. ಆದರೆ, ಇದೆಲ್ಲ ನೆಗೆಟಿವ್ ಮಾತುಗಳನ್ನು ಪ್ರೇಕ್ಷಕರು ನಿರ್ಲಕ್ಷಿಸಿದ್ದಾರೆ. ಹೀಗಾಗಿ ‘ಸಲಾರ್’ ಉತ್ತಮ ಗಳಿಕೆ ಮಾಡಿದೆ. ಆರಂಭದ ವರದಿಗಳ ಪ್ರಕಾರ ‘ಸಲಾರ್’ ಭಾರತದಲ್ಲಿ 95 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವ ಮಟ್ಟದಲ್ಲಿ ಈ ಸಿನಿಮಾದ ಗಳಿಕೆ 175 ಕೋಟಿ ರೂಪಾಯಿ ಆಗಿದೆ. ಈ ಚಿತ್ರದಿಂದ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ದೊಡ್ಡ ಗೆಲುವು ಕಂಡಿದ್ದಾರೆ. ಕ್ರಿಸ್​ಮಸ್ ರಜೆ ಇರುವುದರಿಂದ ಸಿನಿಮಾ ಮತ್ತಷ್ಟು ಗಳಿಕೆ ಮಾಡಲಿದೆ.

‘ಬಾಹುಬಲಿ 2’ ಚಿತ್ರದ ಬಳಿಕ ಪ್ರಭಾಸ್ ಅವರು ದೊಡ್ಡ ಗೆಲುವು ಕಾಣಲು ವಿಫಲರಾಗಿದ್ದರು. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸಿನಿಮಾಗಳು ನೆಲಕಚ್ಚಿದ್ದವು. ಈಗ ಅವರ ವೃತ್ತಿ ಬದುಕಿಗೆ ದೊಡ್ಡ ಗೆಲುವು ಸಿಕ್ಕಿದೆ. ಗುರುವಾರ (ಡಿಸೆಂಬರ್ 21) ಮಧ್ಯರಾತ್ರಿಯಿಂದಲೇ ಶೋಗಳು ಇದ್ದಿದ್ದರಿಂದ ಸಿನಿಮಾಗೆ ಸಹಕಾರಿ ಆಗಿದೆ.

ಇದನ್ನೂ ಓದಿ: ‘ಸಲಾರ್’ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ ಮಾಹಿತಿ

‘ಸಲಾರ್’ ಸಿನಿಮಾ ‘ಉಗ್ರಂ’ ರಿಮೇಕ್ ಎಂದು ಪ್ರಶಾಂತ್ ನೀಲ್ ಅವರು ಇತ್ತೀಚೆಗೆ ಒಪ್ಪಿಕೊಂಡಿದ್ದರು. ಮೇಕಿಂಗ್​ನಲ್ಲಿ ‘ಕೆಜಿಎಫ್’ ಶೈಲಿ ಇದೆ ಎಂದು ಕೂಡ ಹೇಳಿದ್ದರು. ಈ ವಿಚಾರಗಳನ್ನು ಹೇಳಿಕೊಳ್ಳಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ದೇವ ಪಾತ್ರದಲ್ಲಿ ಪ್ರಭಾಸ್, ವರದರಾಜ್ ಮನ್ನಾರ್ ಪಾತ್ರದಲ್ಲಿ ಪೃಥ್ವಿರಾಜ್ ಗಮನ ಸೆಳೆದಿದ್ದಾರೆ. ಕನ್ನಡದ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:56 am, Sat, 23 December 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ