Vedha Title Launch: ಶಿವಣ್ಣನ ಸಿನಿಮಾದಲ್ಲಿ ಚಾನ್ಸ್ ಕೇಳಿದ ದುನಿಯಾ ವಿಜಯ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದ ಟೈಟಲ್ ಲಾಂಚ್ ಆಗಿದೆ.
ಬೆಂಗಳೂರು: ನಗರದ ವೈಟಲ್ ಪೆಟಲ್ಸ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರದ ಟೈಟಲ್ ಲಾಂಚ್ ಆಗಿದೆ. ಗೀತಾ ಶಿವರಾಜ್ ಕುಮಾರ್ ಬರ್ತಡೇ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಲಾಗುತ್ತಿದ್ದು, ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈ ವೇದ ಸಿನಿಮಾ ಬರ್ತಿದೆ. ಗೀತಾ ಶಿವರಾಜ ಕುಮಾರ್ ಅವರ ಹುಟ್ಟಿದ ಹಬ್ಬಕ್ಕೆ ದುನಿಯಾ ವಿಜಯ ಅವರನ್ನು ಆಹ್ವಾನಿಸಿದ್ದು, ಕಾರ್ಯಕ್ರಮಕ್ಕೆ ಬಂದ ದುನಿಯಾ ವಿಜಯ ಹ್ಯಾಪಿ ಬರ್ತ್ ಡೇ ಗೀತಕ್ಕ ಎಂದು ಶುಭಾಶಯ ಕೋರಿದರು. ಗೀತಾ ಪಿಕ್ಚರ್ಸ್ ಲಾಂಚ್ ಆಗಿದ್ದು ಖುಷಿ ಆಯ್ತು. ವೇದ ಚಿತ್ರಕ್ಕೆ ಶುಭವಾಗಲಿ.. ನೂರು ಕಾಲ ಶಿವಣ್ಣ- ಗೀತಕ್ಕ ಬಾಳಬೇಕು. ಇದನ್ನ ಹೇಳಲು ನಾನು ಚಿಕ್ಕವನು. ನಾನು- ಶಿವಣ್ಣ ಜೊತೆಗೆ ನಟಿಸೋದು ತಡವಾಗುತ್ತಿದೆ. ವೇದ ಆದ್ಮೇಲೆ ಶಿವಣ್ಣ ಜೊತೆ ಸಿನಿಮಾ ಮಾಡೋ ಆಶಯ ವ್ಯಕ್ತಪಡಿಸಿದ ದುನಿಯಾ ವಿಜಯ್
Published on: Jun 22, 2022 10:07 PM