
ಚಿಕ್ಕಬಳ್ಳಾಪುರ: ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ರಸ್ತೆ ಅಪಘಾತಕ್ಕೆ ತುತ್ತಾಗಿದ್ದಾರೆ. ಯತಿರಾಜ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಹೈದರಾಬಾದ್ ರಸ್ತೆಯಲ್ಲಿ ಘಟನೆ ನಡೆದಿದೆ. ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ಚಲಿಸುವಾಗ ಯತಿರಾಜ್ ಅವರ ಕಾರು ಹೆದ್ದಾರಿಯ ಡಿವೈಡರ್ಗೆ ಡಿಕ್ಕಿ ಹೊಡೆದಿರುವುದು ತಿಳಿದುಬಂದಿದೆ.
ನಟ ಜಗ್ಗೇಶ್ ಅವರ ಕಿರಿಯ ಮಗ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿ ಅಪಘಾತಕ್ಕೀಡಾಗಿದೆ. ಹೆದ್ದಾರಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಬೆಂಗಳೂರು ಹೈದರಾಬಾದ್ ರಸ್ತೆಯ ಅಗಲಗುರ್ಕಿ ಬಳಿ ಕಾರು ನಿಯಂತ್ರಣ ತಪ್ಪಿದ ಪರಿಣಾಮ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಪೊಲೀಸರು
ಜಗ್ಗೇಶ್ ಪುತ್ರ ಗುರುರಾಜ್ ಚಲಿಸುತ್ತಿದ್ದ ಕಾರು ಅಪಘಾತ
ಹೈದರಾಬಾದ್ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ KA 51 ME 9339 ಸಂಖ್ಯೆಯ ಬಿಳಿ ಬಣ್ಣದ BMW ಕಾರು ಅಪಘಾತಕ್ಕೆ ತುತ್ತಾಗಿದ್ದು, ಕಾರಿನ ಮುಂಬಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಜಗ್ಗೇಶ್ ಪುತ್ರ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಕಣ್ಣು ಮತ್ತು ಕಿವಿಯ ಬಳಿ ಸಣ್ಣ, ಪುಟ್ಟ ಗಾಯ ಆಗಿದೆ. ಸದ್ಯ ಗಾಯಕ್ಕೆ ಚಿಕಿತ್ಸೆ ಪಡೆಯಲೆಂದು ಸ್ಥಳಿಯ ಆಸ್ಪತ್ರೆಗೆ ತೆರಳಿದ್ದಾರೆ. ಕಾರಿನ ಟೈರ್ ಏಕಾಏಕಿ ಬ್ಲಾಸ್ಟ್ ಆದ ಕಾರಣ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದೃಷ್ಟವಶಾತ್ ಬೇರೆ ಯಾವುದೇ ವಾಹನಗಳು ಆ ಸಂದರ್ಭದಲ್ಲಿ ವೇಗವಾಗಿ ಬರುತ್ತಿರಲಿಲ್ಲವಾದ್ದರಿಂದ ಯಾವುದೇ ದೊಡ್ಡ ಸಮಸ್ಯೆ ಆಗಿಲ್ಲ.
ಕಾರನ್ನು ಸ್ವತಃ ಯತಿರಾಜ್ ಡ್ರೈವ್ ಮಾಡುತ್ತಿದ್ದರು. ಆದರೆ, ಹೇಗೆ ಅಪಘಾತವಾಯಿತು ಎನ್ನುವ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸದ್ಯಕ್ಕೆ ಯತಿರಾಜ್ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಯತಿರಾಜ್ ಬಲಗೈಗೆ ಸಣ್ಣ ಗಾಯವಾಗಿದೆ. ತೀರಾ ಗಂಭೀರ ಗಾಯಗಳೇನೂ ಆಗಿಲ್ಲ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಜಗ್ಗೇಶ್ ಕುಟುಂಬದಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:
ಕಣ್ಮುಚ್ಚಿ ಬಿಡುವಷ್ಟರಲ್ಲಿ ಭೀಕರ ಅಪಘಾತ; ಪ್ರಯಾಣಿಕ ಸ್ಥಳದಲ್ಲೇ ಸಾವು
ಸಂಚಾರಿ ವಿಜಯ್ ಬಳಿಕ ಮತ್ತೋರ್ವ ನಟನಿಗೆ ರಸ್ತೆ ಅಪಘಾತ; ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ
Published On - 1:13 pm, Thu, 1 July 21