ಶ್ರೇಯಸ್ ಮಂಜು ನಟನೆಯ ‘ದಿಲ್‌ದಾರ್’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ

ಶೀರ್ಷಿಕೆ ಮೂಲಕ ಕುತೂಹಲ ಮೂಡಿಸಿರುವ ‘ದಿಲ್​ದಾರ್’ ಸಿನಿಮಾದಲ್ಲಿ ಶ್ರೇಯಸ್ ಮಂಜು ಅವರ ಪಾತ್ರ ಡಿಫರೆಂಟ್ ಆಗಿದೆ ಎನ್ನಲಾಗಿದೆ. ಈಗ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಮೂಲಕ ಕುತೂಹಲ ಹೆಚ್ಚಿಸಲಾಗಿದೆ. ಇದೊಂದು ಭಿನ್ನವಾದ ಪ್ರೇಮ ಕಥಾಹಂದರ ಇರುವ ಆ್ಯಕ್ಷನ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

ಶ್ರೇಯಸ್ ಮಂಜು ನಟನೆಯ ‘ದಿಲ್‌ದಾರ್’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ
Shreyas Manju

Updated on: Jul 13, 2026 | 5:32 PM

ಮುಖ್ಯಾಂಶಗಳು

  • ‘ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್ ಮಂಜು ನಟನೆಯ ಹೊಸ ಸಿನಿಮಾ.
  • ಮಾಸ್ ಆಗಿ ಮೂಡಿಬಂದ ‘ದಿಲ್​ದಾರ್’ ಸಿನಿಮಾದ ಫಸ್ಟ್ ಲುಕ್ ಟೀಸರ್.
  • ಚಿತ್ರದ ಶೂಟಿಂಗ್ ಮುಕ್ತಾಯ ಆಗಿದ್ದು, ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.

ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜು (Shreyas Manju) ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ‘ಪಡ್ಡೆಹುಲಿ’ ಸಿನಿಮಾ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಅವರು ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸುತ್ತಿದ್ದಾರೆ. ಈಗ ಶ್ರೇಯಸ್ ಮಂಜು ಅವರು ‘ದಿಲ್​ದಾರ್’ (Dildar) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡುತ್ತಿದ್ದಾರೆ.

ಇದು ಪಕ್ಕಾ ಮಾಸ್ ಸಿನಿಮಾ:

ಮಧು ಗೌಡ ಗಂಗೂರ್ ಅವರು ‘ದಿಲ್​ದಾರ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಡಿ ಬೀಟ್ಸ್ ಮ್ಯೂಸಿಕ್ ವರ್ಲ್ಡ್’ ಮೂಲಕ ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ‘ದಿಲ್​ದಾರ್’ ಎಂಬ ಶೀರ್ಷಿಕೆಗೆ ‘ಒನ್ ಮ್ಯಾನ್ ಆರ್ಮಿ’ ಎಂಬ ಟ್ಯಾಗ್ ಲೈನ್ ಇದೆ. ಆ ಮೂಲಕ ಇದು ಪಕ್ಕಾ ಮಾಸ್ ಸಿನಿಮಾ ಎಂಬುದನ್ನು ಸೂಚಿಸಲಾಗಿದೆ. ಇದನ್ನು ನೋಡಿದರೆ ಕಥಾವಸ್ತು ಬಗ್ಗೆ ಕೌತುಕ ಮೂಡುತ್ತದೆ.

ಪ್ರೇಕ್ಷಕರಿಂದ ಪಾಸಿಟಿವ್ ಕಮೆಂಟ್ಸ್:

ಈ ಮೊದಲಿನ ಸಿನಿಮಾಗಳಲ್ಲಿ ಕೂಡ ಶ್ರೇಯಸ್ ಮಂಜು ಅವರು ಮಾಸ್ ಪಾತ್ರಗಳನ್ನು ಮಾಡಿದ್ದರು. ಆದರೆ ಈಗ ‘ದಿಲ್​ದಾರ್’ ಸಿನಿಮಾದಲ್ಲಿ ಮತ್ತೊಂದು ಹಂತಕ್ಕೆ ಅವರು ಏರಿದಂತಿದೆ. ಮಾಸ್ ಗೆಟಪ್ ಮಾತ್ರವಲ್ಲದೇ ಮಾಸ್ ಡೈಲಾಗ್ ಕೂಡ ಈ ಟೀಸರ್​ನಲ್ಲಿದೆ. ಟೀಸರ್ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್ ಕಮೆಂಟ್​ಗಳು ಬರುತ್ತಿವೆ. ಸದ್ಯಕ್ಕೆ ಕಥೆಯ ಬಗ್ಗೆ ಚಿತ್ರತಂಡ ಸುಳಿವು ನೀಡಿಲ್ಲ.

Dildar | Official First Look Teaser | Shreyas Manju | Arjun Janya |MadhuGowda|R Santhosh Kumar [SVT]

‘ದಿಲ್​ದಾರ್’ ಸಿನಿಮಾ ಮೇಲೆ ಕೌತುಕ ಹೆಚ್ಚಿಸುವಲ್ಲಿ ಈ ಫಸ್ಟ್ ಲುಕ್ ಟೀಸರ್ ಯಶಸ್ವಿ ಆಗಿದೆ. ‘ಏನ್ಸಿಯಂಟ್ ಮೂವೀಸ್’ ಬ್ಯಾನರ್ ಮೂಲಕ ಆರ್. ಸಂತೋಷ್ ಕುಮಾರ್ (ಎಸ್‌ವಿಟಿ) ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ. ಸಿನಿಮಾ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಶ್ರೇಯಸ್ ಮಂಜು ನಟನೆಯ ‘ದಿಲ್ ದಾರ್’ ಚಿತ್ರಕ್ಕೆ ಶರಣ್ ಸೊಸೆ ಕೀರ್ತಿ ಕೃಷ್ಣ ನಾಯಕಿ

ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?

ಖ್ಯಾತ ನಟ ಶರಣ್ ಅವರ ತಂಗಿ ಮಗಳಾದ ಕೀರ್ತಿ ಕೃಷ್ಣ ಅವರು ‘ದಿಲ್​ದಾರ್’ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸಾಧು ಕೋಕಿಲ, ಚಂದ್ರಪ್ರಭ, ಚಿಲ್ಲರ್ ಮಂಜು, ಕಾರ್ತಿಕ್, ಆಂಡ್ರೋ ಅವಿನಾಶ್, ಭಜರಂಗಿ ಲೋಕಿ, ಅರ್ಪಿತ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಹರೇಕೃಷ್ಣ ರೆಡ್ಡಿ ಎಸ್. ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us