Kaatera Movie: ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಹೆಚ್ಚಿತು ‘ಕಾಟೇರ’ ಥಿಯೇಟರ್​ ಸಂಖ್ಯೆ

ಕಳೆದ ವಾರಕ್ಕಿಂತ ಈ ವಾರ ‘ಕಾಟೇರ’ಕ್ಕೆ ಹೆಚ್ಚಿನ ಚಿತ್ರಮಂದಿರ ಸಿಕ್ಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಗಳಿಕೆ ಕೂಡ ಹೆಚ್ಚುವ ನಿರೀಕ್ಷೆ ಇದೆ. ‘ಕಾಟೇರ’ ಚಿತ್ರದ ಅಬ್ಬರದ ಎದುರು ‘ಸಲಾರ್’ ಹಾಗೂ ‘ಡಂಕಿ’ ಸಿನಿಮಾಗಳ ಅಬ್ಬರ ಕಡಿಮೆ ಆಗಿದೆ.

Kaatera Movie: ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಹೆಚ್ಚಿತು ‘ಕಾಟೇರ’ ಥಿಯೇಟರ್​ ಸಂಖ್ಯೆ
ದರ್ಶನ್

Updated on: Jan 06, 2024 | 7:02 AM

‘ಕಾಟೇರ’ ಸಿನಿಮಾ (Kaatera Movie) ರಿಲೀಸ್ ಆಗಿ ಒಂದು ವಾರ ಕಳೆದರೂ ಅಬ್ಬರ ತಗ್ಗಿಲ್ಲ. ಈಗಲೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರದ ಹೆಚ್ಚುಗಾರಿಕೆ. ಸಿನಿಮಾ ಈಗಾಗಲೇ ನೂರು ಕೋಟಿ ರೂಪಾಯಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗಲಿದೆ ಎನ್ನುವ ಕುತೂಹಲ ಮೂಡಿದೆ. ಕಳೆದ ವಾರಕ್ಕಿಂತ ಈ ವಾರ ‘ಕಾಟೇರ’ಕ್ಕೆ ಹೆಚ್ಚಿನ ಚಿತ್ರಮಂದಿರ ಸಿಕ್ಕಿದೆ. ಇದರಿಂದ ಮುಂದಿನ ದಿನಗಳಲ್ಲಿ ಗಳಿಕೆ ಕೂಡ ಹೆಚ್ಚುವ ನಿರೀಕ್ಷೆ ಇದೆ.

‘ಸಲಾರ್’ ಸಿನಿಮಾ ರಿಲೀಸ್ ಆದ ವಾರ 406 ಏಕಪರದೆ ಚಿತ್ರಮಂದಿರ ಹಾಗೂ 72 ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಮಲ್ಟಿಪ್ಲೆಕ್ಸ್​ಗಳ ಸಂಖ್ಯೆ ಅಷ್ಟೇ ಇದ್ದು ಸಿಂಗಲ್​ ಸ್ಕ್ರೀನ್ ಥಿಯೇಟರ್ ಸಂಖ್ಯೆ 462ಕ್ಕೆ ಏರಿಕೆ ಆಗಿದೆ. ಈ ಮೂಲಕ ‘ಕಾಟೇರ’ನ ಅಧಿಪತ್ಯ ಹೆಚ್ಚುತ್ತಿದೆ. ‘ಕಾಟೇರ’ ಚಿತ್ರದ ಅಬ್ಬರದ ಎದುರು ‘ಸಲಾರ್’ ಹಾಗೂ ‘ಡಂಕಿ’ ಸಿನಿಮಾಗಳ ಅಬ್ಬರ ಕಡಿಮೆ ಆಗಿದೆ.

‘ಕಾಟೇರ’ ಗಳಿಕೆ ವಿವರ..

ಮೊದಲ ದಿನ ಅಂದರೆ ಡಿಸೆಂಬರ್ 29ರಂದು ಕಾಟೇರ 19.79 ಕೋಟಿ ರೂಪಾಯಿ ಗಳಿಕೆ ಮಾಡಿತು. ಡಿಸೆಂಬರ್ 30ರಂದು 17.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಡಿಸೆಂಬರ್ 31ರಂದು 20.94 ಕೋಟಿ ರೂ., ಜನವರಿ 1ರಂದು 18.26 ಕೋಟಿ ರೂ., ಜನವರಿ 2ರಂದು 9.24 ಕೋಟಿ ರೂ., ಜನವರಿ 3ರಂದು 9.78 ಕೋಟಿ ರೂ., ಜನವರಿ 4ರಂದು 9.52 ಕೋಟಿ ರೂ. ಬಾಚಿಕೊಂಡಿತು. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 104.5 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: Kaatera Movie: 100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಕಾಟೇರ’; ಮಾರಾಟ ಆದ ಟಿಕೆಟ್​ಗಳೆಷ್ಟು?

ಪಾತ್ರವರ್ಗ..

‘ಕಾಟೇರ’ ಸಿನಿಮಾದಲ್ಲಿ ದರ್ಶನ್​ಗೆ ಜೊತೆಯಾಗಿ ಆರಾಧನಾ ರಾಮ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಜಗಪತಿ ಬಾಬು, ಶ್ರುತಿ, ವೈಜನಾಥ್ ಬಿರಾದಾರ್ ಮೊದಲಾದವರು ಸಿನಿಮಾದಲ್ಲಿ  ನಟಿಸಿದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಜಾತಿ ಪದ್ಧತಿ, ರೈತರ ಕಷ್ಟಗಳು ಮತ್ತಿತ್ಯಾದಿ ಸಮಸ್ಯೆಗಳ ಬಗ್ಗೆ ಸಿನಿಮಾ ಬೆಳಕು ಚೆಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us