AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kaatera Movie: 100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಕಾಟೇರ’; ಮಾರಾಟ ಆದ ಟಿಕೆಟ್​ಗಳೆಷ್ಟು?

Kaatera Movie Collection: ದರ್ಶನ್ ಅವರ ಆಪ್ತರು ನೀಡಿದ ಮಾಹಿತಿ ಪ್ರಕಾರ ‘ಕಾಟೇರ’ ಸಿನಿಮಾ ಏಳು ದಿನಕ್ಕೆ 104.58 ಕೋಟಿ ರೂಪಾಯಿ ಬಾಚಿಕೊಂಡಿದೆ. ಕೇವಲ ಕನ್ನಡದಲ್ಲಿ ರಿಲೀಸ್ ಆಗಿ ‘ಕಾಟೇರ’ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ತಂಡದ ಖುಷಿ ಹೆಚ್ಚಿಸಿದೆ.

Kaatera Movie: 100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಕಾಟೇರ’; ಮಾರಾಟ ಆದ ಟಿಕೆಟ್​ಗಳೆಷ್ಟು?
ದರ್ಶನ್
ರಾಜೇಶ್ ದುಗ್ಗುಮನೆ
|

Updated on: Jan 05, 2024 | 8:33 AM

Share

2023ರ ಕೊನೆಯಲ್ಲಿ ರಿಲೀಸ್ ಆದ ‘ಕಾಟೇರ’ ಸಿನಿಮಾ (Kaatera Movie) ಸೂಪರ್ ಹಿಟ್ ಆಗಿದೆ. ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ 104 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಚಿತ್ರ ಗೆದ್ದು ಬೀಗಿದೆ. ವಾರದ ದಿನಗಳಲ್ಲೂ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಕೇವಲ ಒಂದೇ ವಾರಕ್ಕೆ ಚಿತ್ರ ನೂರು ಕೋಟಿ ರೂಪಾಯಿ ಗಳಿಕೆ ಮಾಡಿದೆ ಅನ್ನೋದು ವಿಶೇಷ. ಇದನ್ನು ದರ್ಶನ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ದರ್ಶನ್ ಅವರ ಆಪ್ತರು ನೀಡಿದ ಮಾಹಿತಿ ಪ್ರಕಾರ ‘ಕಾಟೇರ’ ಸಿನಿಮಾ ಏಳು ದಿನಕ್ಕೆ 104.58 ಕೋಟಿ ರೂಪಾಯಿ ಬಾಚಿಕೊಂಡಿದೆ. ಕೇವಲ ಕನ್ನಡದಲ್ಲಿ ರಿಲೀಸ್ ಆಗಿ ‘ಕಾಟೇರ’ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ತಂಡದ ಖುಷಿ ಹೆಚ್ಚಿಸಿದೆ. ಈಗ ಟಾಲಿವುಡ್ ಹಾಗೂ ಕಾಲಿವುಡ್​ನಲ್ಲೂ ‘ಕಾಟೇರ’ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲಿಂದಲೂ ಸಿನಿಮಾಗೆ ಬೇಡಿಕೆ ಬರುತ್ತಿದ್ದು, ಡಬ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಇದನ್ನೂ ಓದಿ: ‘ಕಾಟೇರ’ ಸಿನಿಮಾ ರಿಲೀಸ್​ ಆದ ಬಳಿಕ ವಿದೇಶಕ್ಕೆ ತೆರಳಿದ ನಟಿ ಆರಾಧನಾ

ಕಾಟೇರ ಏಳು ದಿನದ ಕಲೆಕ್ಷನ್ ವಿವರ

ಡಿಸೆಂಬರ್ 29: 19.79 ಕೋಟಿ ರೂಪಾಯಿ

ಡಿಸೆಂಬರ್ 30: 17.35 ಕೋಟಿ ರೂಪಾಯಿ

ಡಿಸೆಂಬರ್ 31: 20.94 ಕೋಟಿ ರೂಪಾಯಿ

ಜನವರಿ 1: 18.26 ಕೋಟಿ ರೂಪಾಯಿ

ಜನವರಿ 2: 9.24 ಕೋಟಿ ರೂಪಾಯಿ

ಜನವರಿ 3: 9.78 ಕೋಟಿ ರೂಪಾಯಿ

ಜನವರಿ 4: 9.52 ಕೋಟಿ ರೂಪಾಯಿ

ಏಳು ದಿನಕ್ಕೆ ‘ಕಾಟೇರ’ ಚಿತ್ರದ 52.77 ಲಕ್ಷ ಟಿಕೆಟ್ ಮಾರಾಟ ಆಗಿದೆ. ಈ ಚಿತ್ರದಲ್ಲಿ ಮಾಲಶ್ರೀ ಮಗಳು ಆರಾಧನಾ ರಾಮ್ ನಟಿಸಿದ್ದಾರೆ. ಮೊದಲ ಚಿತ್ರದಲ್ಲೇ ಗೆದ್ದಿದ್ದಾರೆ. ಅಚ್ಯುತ್ ಕುಮಾರ್, ಜಗಪತಿ ಬಾಬು ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಿಂದ ರಾಕ್​ಲೈನ್ ವೆಂಕಟೇಶ್ ದೊಡ್ಡ ಲಾಭ ಕಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್