‘ನಿಜಕ್ಕೂ ಬ್ಲಾಕ್​ಬಸ್ಟರ್’; ‘ಕಾಟೇರ’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

|

Updated on: Dec 29, 2023 | 10:41 AM

Katera Movie Twitter Review: ‘ಕಾಟೇರ’ ಸಿನಿಮಾ ಇಂದು (ಡಿಸೆಂಬರ್ 29) ಬಿಡುಗಡೆ ಆಗಿದೆ. ಡಿಸೆಂಬರ್ 28ರ ಮಧ್ಯರಾತ್ರಿ ಬೆಂಗಳೂರಿನ ಅನೇಕ ಕಡೆಗಳಲ್ಲಿ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸುತ್ತಿದ್ದಾರೆ.

‘ನಿಜಕ್ಕೂ ಬ್ಲಾಕ್​ಬಸ್ಟರ್’; ‘ಕಾಟೇರ’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್
ದರ್ಶನ್
Follow us on

‘ಕಾಟೇರ’ ಸಿನಿಮಾ (Katera Movie) ಮೂಲಕ ನಟ ದರ್ಶನ್ ದೊಡ್ಡ ಮಟ್ಟದ ಯಶಸ್ಸು ಪಡೆಯುವ ಸೂಚನೆ ಸಿಕ್ಕಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಈ ನಿರೀಕ್ಷೆಯನ್ನು ಮೀರಿ ಸಿನಿಮಾ ಮೂಡಿ ಬಂದಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಚಿತ್ರವನ್ನು ಸಂಭ್ರಮಿಸುತ್ತಿದ್ದಾರೆ. ‘ಸಿನಿಮಾ ಬ್ಲಾಕ್​ಬಸ್ಟರ್’ ಎಂದು ಅಭಿಮಾನಿಗಳು ಘೋಷಣೆ ಮಾಡಿದ್ದಾರೆ. ವರ್ಷಾಂತ್ಯಕ್ಕೆ ಒಂದೊಳ್ಳೆಯ ಸಿನಿಮಾ ಸಿಕ್ಕಿದೆ ಎಂದು ಸಿನಿಪ್ರಿಯರು ಖುಷಿಪಟ್ಟಿದ್ದಾರೆ.

‘ಕಾಟೇರ’ ಸಿನಿಮಾ ಇಂದು (ಡಿಸೆಂಬರ್ 29) ಬಿಡುಗಡೆ ಆಗಿದೆ. ಡಿಸೆಂಬರ್ 28ರ ಮಧ್ಯರಾತ್ರಿ ಬೆಂಗಳೂರಿನ ಅನೇಕ ಕಡೆಗಳಲ್ಲಿ ಶೋ ಆಯೋಜನೆ ಮಾಡಲಾಗಿತ್ತು. ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ವಿಮರ್ಶೆ ತಿಳಿಸುತ್ತಿದ್ದಾರೆ. ದರ್ಶನ್ ಅಭಿನಯವನ್ನು ಅನೇಕರು ಹೊಗಳಿದರೆ ಇನ್ನೂ ಕೆಲವರು ಸಿನಿಮಾದ ಕಥೆ ಮೆಚ್ಚಿಕೊಂಡಿದ್ದಾರೆ.

‘ಬ್ಲಾಕ್​ಬಸ್ಟರ್ ಎಂಡಿಂಗ್. ತರುಣ್ ಸುಧೀರ್ ಅವರೇ ಎಂಥ ಅದ್ಭುತ ಸಿನಿಮಾ’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ‘ದರ್ಶನ್ ಅವರ ವೃತ್ತಿಜೀವನದ ಬೆಸ್ಟ್ ಕಂಟೆಂಟ್ ಸಿನಿಮಾ ಇದು’ ಎಂದು ಕೆಲವರು ಹೇಳಿದ್ದಾರೆ. ‘ಡಿ ಬಾಸ್ ಈಸ್ ಬ್ಯಾಕ್’ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಒಳ್ಳೆಯ ಸಿನಿಮಾ ಕೊಟ್ಟ ಡಿ ಬಾಸ್​ಗೆ ಧನ್ಯವಾದ’; ಖುಷಿಯಿಂದ ‘ಕಾಟೇರ’ ವಿಮರ್ಶೆ ತಿಳಿಸಿದ ಫ್ಯಾನ್ಸ್

‘ಕಾಟೇರ’ ಸಿನಿಮಾದಲ್ಲಿ ದರ್ಶನ್​ಗೆ ಜೊತೆಯಾಗಿ ಮಾಲಾಶ್ರೀ ಮಗಳು ಆರಾಧನ ರಾಮ್ ನಟಿಸಿದ್ದಾರೆ. ಅವರ ನಟನೆಗೆ ಮೆಚ್ಚುಗೆ ಸಿಕ್ಕಿದೆ. ಜಗಪತಿ ಬಾಬು, ಅವಿನಾಶ್, ಶ್ರುತಿ, ಕುಮಾರ್ ಗೋವಿಂದ್, ಅಚ್ಯುತ್ ಕುಮಾರ್, ವೈಜನಾಥ ಬೀರಾದಾರ ಮೊದಲಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಾಸ್ತಿ ಬರೆದ ಡೈಲಾಗ್​ಗೂ ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ