ನಟ ಪುನೀತ್ ಅಂತ್ಯಕ್ರಿಯೆ; ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿಯನ್ನು ಪ್ರಶಂಸಿಸಿದ ಕಮಲ್ ಪಂತ್

| Updated By: preethi shettigar

Updated on: Oct 31, 2021 | 4:14 PM

ನಟ ಪುನೀತ್ ಅಂತಿಮ ದರ್ಶನ, ಅಂತಿಮ ಯಾತ್ರೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸಿಬ್ಬಂದಿಯ ಕೈ ಕುಲುಕಿ ಕಮಲ್ ಪಂತ್ ಧನ್ಯವಾದ ತಿಳಿಸಿದ್ದಾರೆ.

ನಟ ಪುನೀತ್ ಅಂತ್ಯಕ್ರಿಯೆ; ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿಯನ್ನು ಪ್ರಶಂಸಿಸಿದ ಕಮಲ್ ಪಂತ್
ಸಿಬ್ಬಂದಿಯ ಕೈ ಕುಲುಕಿ ಕಮಲ್ ಪಂತ್ ಧನ್ಯವಾದ
Follow us on

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆ ವೇಳೆ ಭದ್ರತೆ ಒದಗಿಸಿದ ಪೊಲೀಸ್ ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್‌ ಪ್ರಶಂಸಿದ್ದಾರೆ. ನಟ ಪುನೀತ್ ಅಂತಿಮ ದರ್ಶನ, ಅಂತಿಮ ಯಾತ್ರೆ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಸಿಬ್ಬಂದಿಯ ಕೈ ಕುಲುಕಿ ಕಮಲ್ ಪಂತ್ ಧನ್ಯವಾದ ತಿಳಿಸಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರರಿಂದ ಪೊಲೀಸ್ ಸಿಬ್ಬಂದಿಗೆ ಅಭಿನಂದನೆ
ಅತ್ಯಂತ ಶಿಸ್ತುಬದ್ಧವಾಗಿ, ಎಷ್ಟೇ ಕಷ್ಟಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಶಿಸ್ತುಬದ್ಧವಾಗಿ ನಿಭಾಯಿಸಿದ ಪೊಲೀಸ್, ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪುನೀತ್ ಪಾರ್ಥಿವ ಶರೀರಕ್ಕೆ ಕೈ ಮುಗಿದು, ಹಣೆಗೆ ಮುತ್ತಿಟ್ಟ ಸಿಎಂ ಬಸವರಾಜ ಬೊಮ್ಮಾಯಿ
ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ಗೆ ಇನ್ನು ನೆನಪು ಮಾತ್ರ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಮಣ್ಣಲ್ಲಿ ಮಣ್ಣಾದರು. ಕುಟುಂಬಸ್ಥರು ಸೇರಿ ಹಲವು ಗಣ್ಯರು ಪುನೀತ್​ಗೆ ಅಂತಿಮ ನಮನ ಸಲ್ಲಿಸಿದರು. ಪುನೀತ್ ಅಂತಿಮ ಯಾತ್ರೆಗೂ ಮುನ್ನ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪವರ್ ಸ್ಟಾರ್​ಗೆ ನಮನ ಸಲ್ಲಿಸಿದರು. ಈ ವೇಳೆ ಭಾವುಕರಾದ ಅವರು ಪಾರ್ಥಿವ ಶರೀರಕ್ಕೆ ಕೈಮುಗಿದು, ಹಣೆಗೆ ಮುತ್ತಿಟ್ಟರು. ಪುನೀತ್​ರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಹೀಗಾಗಿ ಪುನೀತ್ ಅಂತ್ಯಕ್ರಿಯೆ ವೇಳೆ ಭಾವುಕನಾದೆ ಅಂತ ಕಂಠೀರವ ಸ್ಟೇಡಿಯಂ ಬಳಿ ಸಿಎಂ ಬೊಮ್ಮಾಯಿ ಹೇಳಿದರು.

ಭಾವುಕರಾದ ಡಿಕೆಶಿ
ಇನ್ನು ಪುನೀತ್ ರಾಜ್ಕುಮಾರ್ ನೆನದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾವುಕರಾದರು. ನಟ ಪುನೀತ್ ರಾಜ್​ಕುಮಾರ್​ರದ್ದು ವಿಭಿನ್ನ ವ್ಯಕ್ತಿತ್ವ. ನನ್ನ ಅವರ ಕುಟುಂಬದ ಓಡನಾಟ 25 ವರ್ಷನದ್ದು. ಹುಟ್ಟು ಸಾವು ಇದ್ದಿದ್ದೇ. ಆದರು ನಾವು ಏನು ಮಾಡಿದ್ದೇವೆ ಅನ್ನುವುದು ಗೊತ್ತಾಗುತ್ತದೆ. ನಟ ಪುನೀತ್ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಅಂತ ಅಂತ್ಯಕ್ರಿಯೆ ಬಳಿಕ ಅಭಿಪ್ರಾಪಟ್ಟರು.

ಇದನ್ನೂ ಓದಿ:
Puneeth Rajkumar Funeral: ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಅಪ್ಪು ಚಿರ ನಿದ್ರೆ; ಈಡಿಗ ಸಂಪ್ರದಾಯದಂತೆ ಪುನೀತ್​ ಅಂತ್ಯಕ್ರಿಯೆ

Puneeth Rajkumar Funeral Live: ಮಣ್ಣಲ್ಲಿ ಮಣ್ಣಾದ ಅಪ್ಪು; ಸಕಲ ಗೌರವಗಳೊಂದಿಗೆ ಪುನೀತ್​ಗೆ ಅಂತಿಮ ವಿದಾಯ

Published On - 8:50 am, Sun, 31 October 21