ಬೆಂಗಳೂರು: ಸಿನಿಮೀಯ ರೀತಿ ನಟ ದರೋಡೆಕೋರರನ್ನು ಹಿಡಿದಿರುವ ಘಟನೆ ನಗರದ ಸೇಂಟ್ ಜಾನ್ ಸರ್ಕಲ್ ಬಳಿ ನಡೆದಿದೆ. ನಟ ರಘುಭಟ್ ಮಧ್ಯರಾತ್ರಿ ತನ್ನ ಕುಟುಂಬಸ್ಥರ ಜೊತೆ ಅವನೇ ಶ್ರೀಮನ್ನಾರಯಣ ಸಿನಿಮಾ ಮುಗಿಸಿ ಹಿಂತಿರುಗುತ್ತಿರುವಾಗ ಈ ಘಟನೆ ನಡೆದಿದೆ.
ಸಿಗ್ಮಾ ಮಾಲ್ ನಲ್ಲಿ ಸಿನಿಮಾ ನೋಡಿ ಮನೆಗೆ ತೆರಳುತ್ತಿದ್ದ ವೇಳೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ RMZ ಬಳಿ ಕಾರೊಂದನ್ನು ಅಡ್ಡ ಗಟ್ಟಿ ಇಬ್ಬರು ದರೋಡೆಕೋರರು ದರೋಡೆ ಮಾಡಿ ಎಸ್ಕೇಪ್ ಆಗ್ತಿದ್ದರು. ಈ ವೇಳೆ ರಘುಭಟ್ ಇಬ್ಬರನ್ನು ಸಿನಿಮೀಯ ರೀತಿಯಲ್ಲಿ ಸುಮಾರು 2 ಕಿ.ಮೀ. ಚೇಸ್ ಮಾಡಿ ಸೇಂಟ್ ಜಾನ್ ಸರ್ಕಲ್ ಬಳಿ ಹಿಡಿದಿದ್ದಾರೆ.
ಸಿಕ್ಕಿಬಿದ್ದ ದರೋಡೆಕೋರರಾದ ಅಬ್ದುಲ್, ಮೊಹೀನ್‌ನನ್ನು ಹಲಸೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಚೇಸಿಂಗ್ ವೇಳೆ ಸೆಲ್ಫ್ ಌಕ್ಸಿಡೆಂಟ್ ಮಾಡಿಕೊಂಡಿದ್ದ ದರೋಡೆಕೋರರಿಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
Published On - 10:28 am, Fri, 27 December 19