AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜನಾ ಜೊತೆ ಕಿರಿಕ್ ಮಾಡಿಕೊಂಡ ವಂದನಾ ಯಾರು ಗೊತ್ತಾ? ಕ್ರಿಕೆಟರ್ ಅಮಿತ್ ಜೊತೆ ಮಾಡಿದ್ದೇನು?

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಸಂಜನಾ ಜೊತೆ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಕಿರಿಕ್ ಮಾಡಿಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ನಿರ್ಮಾಪಕಿ ವಂದನಾ ಜೈನ್ ಓರ್ವ ವಿಚ್ಛೇದಿತೆ ಮಹಿಳೆಯಾಗಿದ್ದು, ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆಸ್ತಿ ಹೊಂದಿದ್ದಾಳೆ ಎಂದು ಸಂಜನಾ ಗಂಭೀರ ಆರೋಪ ಮಾಡಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿ ವಂದನಾ 100/200 ಅಳತೆಯ ನಿವೇಶನ ಹೊಂದಿದ್ದಾಳೆ. ಅಲ್ಲದೆ, ಸೆಲೆಬ್ರಿಟಿಗಳಿಂದಲೂ ವಂದನಾ ಜೈನ್ ಹಣ ಕೀಳುತ್ತಾಳೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮನೆ ಕೂಡ ಅಕ್ರಮ ಆಸ್ತಿ ಎಂದು ಸಂಜನಾ ಆರೋಪಿಸಿದ್ದಾಳೆ. ಅಲ್ಲದೆ, ಕ್ರಿಕೆಟರ್ ಅಮಿತ್ […]

ಸಂಜನಾ ಜೊತೆ ಕಿರಿಕ್ ಮಾಡಿಕೊಂಡ ವಂದನಾ ಯಾರು ಗೊತ್ತಾ? ಕ್ರಿಕೆಟರ್ ಅಮಿತ್ ಜೊತೆ ಮಾಡಿದ್ದೇನು?
ಸಾಧು ಶ್ರೀನಾಥ್​
|

Updated on:Dec 27, 2019 | 3:30 PM

Share

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಸಂಜನಾ ಜೊತೆ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಕಿರಿಕ್ ಮಾಡಿಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ನಿರ್ಮಾಪಕಿ ವಂದನಾ ಜೈನ್ ಓರ್ವ ವಿಚ್ಛೇದಿತೆ ಮಹಿಳೆಯಾಗಿದ್ದು, ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆಸ್ತಿ ಹೊಂದಿದ್ದಾಳೆ ಎಂದು ಸಂಜನಾ ಗಂಭೀರ ಆರೋಪ ಮಾಡಿದ್ದಾರೆ.

ಬ್ರಿಗೇಡ್ ರಸ್ತೆಯಲ್ಲಿ ವಂದನಾ 100/200 ಅಳತೆಯ ನಿವೇಶನ ಹೊಂದಿದ್ದಾಳೆ. ಅಲ್ಲದೆ, ಸೆಲೆಬ್ರಿಟಿಗಳಿಂದಲೂ ವಂದನಾ ಜೈನ್ ಹಣ ಕೀಳುತ್ತಾಳೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಮನೆ ಕೂಡ ಅಕ್ರಮ ಆಸ್ತಿ ಎಂದು ಸಂಜನಾ ಆರೋಪಿಸಿದ್ದಾಳೆ. ಅಲ್ಲದೆ, ಕ್ರಿಕೆಟರ್ ಅಮಿತ್ ಮಿಶ್ರಾರನ್ನ ಬೀದಿಗೆ ತಂದವಳು ವಂದನಾ, ಭಾರತ ಕ್ರಿಕೆಟ್ ತಂಡದಿಂದ ಅಮಿತ್ ಮಿಶ್ರಾ ಹೊರಬೀಳಲು ಕಾರಣ ಅವಳೇ ಎಂದು ವಂದನಾ ಜೈನ್ ವಿರುದ್ಧ ನಟಿ ಸಂಜನಾ ಗಂಭೀರ ಆರೋಪ ಮಾಡಿದ್ದಾಳೆ.

ಗಂಡನನ್ನ ಮನೆಯಿಂದ ಓಡಿಸಿದ್ದಾಳೆ: ವಂದನಾ ಆಸ್ತಿಯನ್ನು ನೋಡಿ, ಆಗ ಎಲ್ಲಾ ಗೊತ್ತಾಗುತ್ತೆ. ನನ್ನ ತಾಯಿಯನ್ನು ತುಂಬಾ ಕೆಟ್ಟದಾಗಿ ಬೈದಿದ್ದಾಳೆ. ನನಗೆ ಅವಳ ಸಹವಾಸ ಬೇಕಾಗಿಲ್ಲ. ನಾನು ಅನಗತ್ಯವಾಗಿ ಯಾರ ತಂಟೆಗೂ ಹೋಗೋದಿಲ್ಲ. ನನ್ನ ತಂಟೆಗೆ ಬಂದ್ರೆ ಸುಮ್ಮನಿರೋದಿಲ್ಲ. ಅವಳಿಗೆ ಯಾರೂ ಇಲ್ಲ, ಇಬ್ಬರು ಮಕ್ಕಳಿದ್ದಾರೆ. ಆ ಮಕ್ಕಳನ್ನೂ ವಿದೇಶಕ್ಕೆ ಕಳಿಸಿಬಿಟ್ಟಿದ್ದಾಳೆ. ಗಂಡನನ್ನು ಮನೆಯಿಂದ ಒದ್ದು ಓಡಿಸಿಬಿಟ್ಟಿದ್ದಾಳೆ ಎಂದು ಟಿವಿ9ಗೆ ನಟಿ ಸಂಜನಾ ಗಲ್ರಾನಿ ಪ್ರತಿಕ್ರಿಯಿಸಿದ್ದಾಳೆ.

₹200 ಕೋಟಿ ಅಕ್ರಮ ಆಸ್ತಿ: ಬೆಂಗಳೂರಿನಲ್ಲಿ ವಂದನಾ ಜೈನ್​​ಗೆ ಯಾವ್ದೇ ಬ್ಯುಸಿನೆಸ್ ಇಲ್ಲ. ಆದ್ರೂ ವಂದನಾ ಜೈನ್ ಅಕ್ರಮವಾಗಿ 200 ಕೋಟಿ ರೂ. ಆಸ್ತಿ ಮಾಡಿದ್ದಾಳೆ. ವಂದನಾ ಜೈನ್ ಯಾವುದೇ ಕಂಪನಿಯನ್ನೂ ನಡೆಸುತ್ತಿಲ್ಲ. ಅವಳಿಗೆ ಇಷ್ಟೊಂದು ಆಸ್ತಿ ಎಲ್ಲಿಂದ ಬಂತು, ಈ ಬಗ್ಗೆ ತನಿಖೆ ಆಗ್ಬೇಕು. ಆದಾಯ ತೆರಿಗೆ ಇಲಾಖೆಗೆ ನಾನು ಮನವಿ ಮಾಡುತ್ತೇನೆ. ಮುಂಬೈನ ವರ್ಲಿಯಲ್ಲಿ ₹20 ಕೋಟಿ ಮೌಲ್ಯದ ಬಂಗಲೆ ಇದೆ. ರಾಜಕಾರಣಿ ಬಳಿ ವಸೂಲಿ ಮಾಡಿ ಮನೆ ಖರೀದಿಸಿದ್ದಾಳೆ ಎಂದು ವಂದನಾ ವಿರುದ್ಧ ನಟಿ ಸಂಜನಾ ಗಂಭೀರ ಆರೋಪ ಮಾಡಿದ್ದಾಳೆ.

Published On - 3:16 pm, Fri, 27 December 19

Follow Us
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ