AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಟಿಯನ್ನು ಕೀಳಾಗಿ ತೋರಿಸೋ ಉದ್ದೇಶವಿರಲಿಲ್ಲ’; ಜಾನ್ವಿ ಹೊಕ್ಕುಳ ಪ್ರದರ್ಶನದ ಬಗ್ಗೆ ನಿರ್ದೇಶಕರ ಸ್ಪಷ್ಟನೆ

'ಪೆದ್ದಿ' ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರ ಕೇವಲ ಗ್ಲಾಮರ್​ಗೆ ಸೀಮಿತ ಎಂಬ ಟೀಕೆಗೆ ನಿರ್ದೇಶಕ ಬುಚ್ಚಿ ಬಾಬು ಸನ ಸ್ಪಷ್ಟನೆ ನೀಡಿದ್ದಾರೆ. ಜಾನ್ವಿ ಕಪೂರ್ ಅವರನ್ನು ಗ್ಲಾಮರ್ ಗೊಂಬೆಯಾಗಿ ಬಳಸಿದ್ದಾರೆ ಎಂಬ ಆರೋಪಕ್ಕೆ ಅವರು, ಚಿತ್ರದ ಕಥಾಹಂದರಕ್ಕೆ ತಕ್ಕಂತೆ ಪಾತ್ರವನ್ನು ವಿನ್ಯಾಸಗೊಳಿಸಲಾಗಿದೆ, ವಿವಾದ ಸೃಷ್ಟಿಯ ಉದ್ದೇಶವಿರಲಿಲ್ಲ ಎಂದಿದ್ದಾರೆ. ಗ್ರಾಮೀಣ ಸೊಗಡಿನ ಹೈ-ಎನರ್ಜಿ ಡ್ರಾಮಾಗೆ ಪೂರಕವಾಗಿಯೇ ನಟಿಯ ಪಾತ್ರ ಇದೆ ಎಂದು ಹೇಳಿದ್ದಾರೆ.

‘ನಟಿಯನ್ನು ಕೀಳಾಗಿ ತೋರಿಸೋ ಉದ್ದೇಶವಿರಲಿಲ್ಲ’; ಜಾನ್ವಿ ಹೊಕ್ಕುಳ ಪ್ರದರ್ಶನದ ಬಗ್ಗೆ ನಿರ್ದೇಶಕರ ಸ್ಪಷ್ಟನೆ
ಜಾನ್ವಿ
ರಾಜೇಶ್ ದುಗ್ಗುಮನೆ
|

Updated on: Jun 06, 2026 | 10:00 AM

Share

‘ಪೆದ್ದಿ’ ಸಿನಿಮಾ ಮೂಲಕ ಜಾನ್ವಿ ಕಪೂರ್ ಅವರು ದಕ್ಷಿಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳಬಹದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಊಹೆ ತಪ್ಪಾಗಿದೆ. ಜಾನ್ವಿ ಕಪೂರ್ ಅವರನ್ನು (Janhvi Kapoor) ಕೇವಲ ಗ್ಲಾಮರ್ ಗೊಂಬೆಯಾಗಿ ಬಳಕೆ ಮಾಡಿಕೊಳ್ಳಾಗಿದೆ. ‘ದೇವರ’ ಸಿನಿಮಾದಲ್ಲೂ ಇದೇ ರೀತಿಯಲ್ಲಿ ಜಾನ್ವಿ ಪಾತ್ರ ಇತ್ತು. ಈಗ ‘ಪೆದ್ದಿ’ ಚಿತ್ರದಲ್ಲೂ ಅದು ಮುಂದುವರಿದಿದೆ. ಈ ವಿಷಯ ಸಾಕಷ್ಟು ಚರ್ಚೆ ಆಗುತ್ತಿದ್ದು, ನಿರ್ದೇಶಕ ಬುಚ್ಚಿ ಬಾಬು ಸನ ಅವರನ್ನು ಟೀಕೆ ಮಾಡಲಾಗಿದೆ. ಈ ವಿಷಯವಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

‘ಉಪ್ಪೇನಾ’ ಸಿನಿಮಾದಲ್ಲಿ ಮರ್ಹಾದೆ ಹತ್ಯೆ ಬಗ್ಗೆ ಹೇಳಿದ್ದ ಬುಚ್ಚಿ ಬಾಬು ಸನಾ ಅವರು ಸಾಕಷ್ಟು ಎಚ್ಚರಿಕೆಯಿಂದ ನಡೆದುಕೊಂಡಿದ್ದರು. ಈ ಕಾರಣಕ್ಕೆ ಅವರಿಗೆ ಪ್ರಶಂಸೆ ಸಿಕ್ಕಿತ್ತು. ಆದರೆ, ‘ಪೆದ್ದಿ’ ಸಿನಿಮಾದಲ್ಲಿ ನಾಯಕಿ ಜಾನ್ವಿ ಕಪೂರ್ ಅವರನ್ನು ತೋರಿಸಿದ ರೀತಿ ಅನೇಕರಿಗೆ ಇಷ್ಟ ಆಗಿಲ್ಲ.

‘ಪೆದ್ದಿ’ ಸಿನಿಮಾದಲ್ಲಿ ಜಾನ್ವಿ ಮುಖ ತೋರಿಸಿದ್ದಕ್ಕಿಂತ, ಅಂಗಾಗ ಪ್ರದರ್ಶನ ಮಾಡಿದ್ದೇ ಹೆಚ್ಚು ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ಇದು ಬುಚ್ಚಿ ಬಾಬು ಸನಾ ಅವರಿಗೆ ಶಾಕಿಂಗ್ ಎನಿಸಿದೆ. ‘ಇಷ್ಟೊಂದು ನೆಗೆಟಿವ್ ವಿಮರ್ಶೆ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ’ ಎಂದು ಅವರು ಹೇಳಿದ್ದಾರೆ. ‘ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಡುವಿನ ಒಂದು ಸುಂದರ ಪ್ರೇಮಕಥೆಯನ್ನು ತೋರಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ಕಪೂರ್ ಪಾತ್ರದ ಬಗ್ಗೆ ಟೀಕೆ ಏಕೆ?

‘ಈ ಪಾತ್ರದ ಚಿತ್ರಣವು ಯಾವುದೇ ವಿವಾದ ಸೃಷ್ಟಿಸುವ ಉದ್ದೇಶ ಹೊಂದಿರಲಿಲ್ಲ. ‘ಪೆದ್ದಿ’ ಚಿತ್ರವು ಒಂದು ಹಳ್ಳಿ ಸೊಗಡಿನ, ಹೈ-ಎನರ್ಜಿ ಡ್ರಾಮಾ ಕಥಾಹಂದರವನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿಯೇ ಈ ಪಾತ್ರವನ್ನು ವಿನ್ಯಾಸಗೊಳಿಸಲಾಗಿತ್ತು. ನಟಿಯ ಪಾತ್ರವನ್ನು ಎಲ್ಲೂ ಕೀಳಾಗಿ ಬಿಂಬಿಸುವ ಉದ್ದೇಶ ತಮಗಿರಲಿಲ್ಲ’ ಎಂದು ನಿರ್ದೇಶಕರು ನೇರವಾಗಿ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More