‘ಬೆಂಕಿ ಬಿರುಗಾಳಿ’ ಖ್ಯಾತಿಯ ಹಿರಿಯ ನಿರ್ದೇಶಕ, ಕಲಾವಿದ ತಿಪಟೂರು ರಘು ನಿಧನ

Tiptur Raghu Death: ರಘು ಅವರಿಗೆ 83 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ (ಮೇ 29) ಮುಂಜಾನೆ ಉಸಿರಾಟದ ಸಮಸ್ಯೆಯಿಂದ ಮೃತರಾದರು.

‘ಬೆಂಕಿ ಬಿರುಗಾಳಿ’ ಖ್ಯಾತಿಯ ಹಿರಿಯ ನಿರ್ದೇಶಕ, ಕಲಾವಿದ ತಿಪಟೂರು ರಘು ನಿಧನ
ನಿರ್ದೇಶಕ ತಿಪಟೂರು ರಘು

Updated on: May 29, 2021 | 11:15 AM

ಲಾಕ್​ಡೌನ್​ ಸಮಯದಲ್ಲಿ ಕನ್ನಡ ಚಿತ್ರರಂಗದ ಅನೇಕರು ಸಾವಿನ ಮನೆಯ ಹಾದಿ ಹಿಡಿಯುತ್ತಿದ್ದಾರೆ. ಹಿರಿಯ ನಿರ್ದೇಶಕ ತಿಪಟೂರು ರಘು ಅವರು ಶನಿವಾರ (ಮೇ 29) ನಿಧನರಾಗಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿ ಅವರು ಫೇಮಸ್​ ಆಗಿದ್ದರು. ವಿಷ್ಣುವರ್ಧನ್​, ಶಂಕರ್​ನಾಗ್​ ಮುಂತಾದ ಸ್ಟಾರ್​ ನಟರಿಗೆ ತಿಪಟೂರು ರಘು ಆ್ಯಕ್ಷನ್​-ಕಟ್​ ಹೇಳಿದ್ದರು.

ತಿಪಟೂರು ರಘು ಅವರಿಗೆ 83 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಮುಂಜಾನೆ ಉಸಿರಾಟದ ಸಮಸ್ಯೆಯಿಂದ ಮೃತರಾದರು ಎಂದು ತಿಳಿದುಬಂದಿದೆ. ಕನ್ನಡ ಚಿತ್ರರಂಗದಲ್ಲಿ ಅವರು ಹಲವು ವರ್ಷಗಳ ಅನುಭವ ಹೊಂದಿದ್ದರು. ನಿರ್ದೇಶನ ಮಾತ್ರವಲ್ಲದೇ ನಟನಾಗಿಯೂ ಗುರುತಿಸಿಕೊಂಡಿದ್ದರು.

ವಿಷ್ಣುವರ್ಧನ್​, ಶಂಕರ್​ನಾಗ್​ ನಟನೆಯ ‘ಬೆಂಕಿ ಬಿರುಗಾಳಿ’, ಬಿ. ಸರೋಜಾ ದೇವಿ, ರಾಮಕೃಷ್ಣ ಅಭಿನಯದ ‘ಲೇಡಿಸ್​ ಹಾಸ್ಟೆಲ್’​, ವಿಷ್ಣುವರ್ಧನ್​, ಜಯಂತಿ, ಜಯಮಾಲಾ ಮುಂತಾದವರು ನಟಿಸಿದ್ದ ‘ನಾಗ ಕಾಳ ಭೈರವ’, ‘ಆಕ್ರೋಶ’, ‘ಕಲ್ಲು ವೀಣೆ ನುಡಿಯಿತು’ ಮುಂತಾದವು ತಿಪಟೂರು ರಘು ಅವರ ಪ್ರಮುಖ ಚಿತ್ರಗಳು. 1965ರಿಂದಲೂ ಅವರು ನಟನಾಗಿ, ಸಹಾಯಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು.

ಇದನ್ನೂ ಓದಿ:

ಸಿನಿಮಾ ತೆರೆಗೆ ಬರುವ ಮೊದಲೇ ಕನ್ನಡದ ಹೀರೋ, ಡೈರೆಕ್ಟರ್​ ಇಬ್ಬರೂ ಕೊವಿಡ್​ಗೆ ಬಲಿ

Renuka Sharma Death: ಕವಿರತ್ನ ಕಾಳಿದಾಸ ಸಿನಿಮಾ ನಿರ್ದೇಶಕ ರೇಣುಕಾ ಶರ್ಮಾ ಕೊರೊನಾದಿಂದ ನಿಧನ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us