ಬೆಂಗಳೂರು: ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ, ಹಾಡಿನ ಮೂಲಕವೇ ಮೋಡಿ ಮಾಡೋ ಗಾನ ಗಾರುಡಿಗ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚೇತರಿಕೆಗಾಗಿ ನಾಳೆ ಕನ್ನಡ ಚಿತ್ರರಂಗದ ವತಿಯಿಂದ ಪ್ರಾರ್ಥನೆ ಸಲ್ಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸಾರಥ್ಯವನ್ನು ನಾದ ಬ್ರಹ್ಮ ಹಂಸಲೇಖ ಅವರು ವಹಿಸಿಕೊಂಡಿದ್ದಾರೆ.
ಎಸ್.ಪಿ.ಹಾಡುಗಳನ್ನ ಇಟ್ಟುಕೊಂಡು ವಿಶೇಷವಾದ ಯೋಜನೆಯೊಂದನ್ನ ಹಂಸಲೇಖ ಅಂಡ್ ಟೀಂ ಮಾಡಿಕೊಂಡಿದೆ. ಕಾರ್ಯಕ್ರಮದಲ್ಲಿ ಬಹುತೇಕ ಚಿತ್ರರಂಗದ ಗಣ್ಯರು ಭಾಗಿ ಆಗಲಿದ್ದಾರೆ. ಸುದೀಪ್, ದರ್ಶನ್, ಶಿವರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸುಮಲತಾ ಅಂಬರೀಶ್ ಸೇರಿದಂತೆ ಸ್ಟಾರ್ ನಟರು, ಹಿರಿಯ ಕಲಾವಿದರು ಭಾಗಿ ಆಗಲಿದ್ದಾರೆ.
ನಾಳೆ ಸಂಜೆ 4ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದೆ. ಇನ್ನೂ ಕೋವಿಡ್ ಇರೋದ್ರಿಂದ ಸುಮಾರು 45ರಿಂದ 50 ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗ್ತಿದೆ. ಕಲಾವಿದರ ಸಂಘದಲ್ಲಿರೋ ಅಂಬರೀಶ್ ಆಡಿಟೋರಿಯಂ ನಲ್ಲಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಬಗ್ಗೆ ಟಿವಿ9ಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಹಿತಿ ನೀಡಿದ್ರು.
ಎಸ್.ಪಿ.ಬಿ ಆರೋಗ್ಯ ಚೇತರಿಕೆಗಾಗಿ ಹಂಸಗಾನ..
ಇನ್ನು ನಾದಬ್ರಹ್ಮ ಹಂಸಲೇಖ ಅವರು, ಚೆನ್ನೈನ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನ ಗಾರುಡಿಗ ಎಸ್.ಪಿ.ಬಿ ಯವರ ಆರೋಗ್ಯ ಚೇತರಿಸಿಕೊಳ್ಳಲು ವಿಶೇಷವಾಗಿ ಹಾಡು ಸಂಯೋಜನೆ ಮಾಡಿದ್ದಾರೆ.
Published On - 3:10 pm, Wed, 2 September 20