ಬೆಂಗಳೂರು: ಸಂಜನಾ, ರಾಗಿಣಿ ಗೊತ್ತಿಲ್ಲ; ನಮ್ಮ ಶ್ರೀಮತಿ ಬಿಟ್ಟು ಬೇರೆ ಯಾರೂ ಗೊತ್ತಿಲ್ಲ. ನಾನು ಅ ವಿಚಾರದಲ್ಲಿ ಎಲ್ ಬೋರ್ಡ್, ಜಿರೋ ಎಂದು ಸಚಿವ ಸೋಮಣ್ಣ ಅಲವತ್ತುಕೊಂಡಿದ್ದಾರೆ. ‘ಚಂದದ ಚಂದನವನದಲ್ಲಿ ಡ್ರಗ್ಸ್ ಬಿರುಗಾಳಿ’ ಎದ್ದಿರುವ ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯೆ ನೀಡುತ್ತಾ ಹೀಗೆ ಮಾರ್ಮಿಕವಾಗಿ ಹೇಳಿದ್ದಾರೆ.
ಬಂಧನ ನೋಡಿದ್ದೇ ಕೊನೆ
ಯಾರೇ ಇದ್ದರೂ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ ಎಂದು ಎಚ್ಚರಿಕೆ ನೀಡುವ ಧಾಟಿಯಲ್ಲಿ ಸಚಿವ ಸೋಮಣ್ಣ, ಡ್ರಗ್ಸ್ ಮಾಫಿಯಾಗೆ ಸಂದೇಶ ರವಾನಿಸಿದರು.
ಇನ್ನು ಡ್ರಗ್ಸ್ ಪ್ರಕರಣದಲ್ಲಿ ಶಾಸಕ ಜಮೀರ್ ಖಾನ್ ಇರೋ ಆರೋಪದ ಬಗ್ಗೆ ಮಾತನಾಡಿ, ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಕಾನೂನು ಪ್ರಕಾರ ತನಿಖೆ ನಡೆಯುತ್ತೆ ಎಂದರು.