ಡ್ರಗ್ಸ್ ಚಟದಿಂದಾಗಿ ಕನ್ನಡ ಚಿತ್ರರಂಗವೇ ಸಂಜನಾಳಿಂದ ದೂರ ಉಳಿದಿತ್ತಾ?
[lazy-load-videos-and-sticky-control id=”UzmkuldSI-Y”] ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಪಟ್ಟಂತೆ CCB ಅಧಿಕಾರಿಗಳಿಂದ ವಿಚಾರಣೆಗೆ ಒಳ್ಳಪಟ್ಟಿರುವ ನಟಿ ಸಂಜನಾ ಅವರ ಒಂದೊಂದೆ ರಹಸ್ಯಗಳು ಈಗ ಹೊರಬೀಳುತ್ತಿವೆ. ನಟಿ ಸಂಜನಾ ಅವರ ವೈಯಕ್ತಿಕ ವಿಚಾರಗಳನ್ನ ತಿಳಿದಿದ್ದ ಚಿತ್ರರಂಗವೇ ಅವರಿಂದ ದೂರ ಉಳಿದಿತ್ತಾ ಎಂಬ ಪ್ರಶ್ನೆ ಈಗ ಎಲ್ಲೆಡೆ ವ್ಯಕ್ತವಾಗುತ್ತಿದೆ. ಸಂಜನಾ ಅಷ್ಟಾಗಿ ಚಿತ್ರರಂಗದವರ ಜೊತೆ ಬೆರೆಯುತ್ತಾ ಇರಲಿಲ್ಲ. ಜೊತೆಗೆ ಸಿನಿಮಾ ಕಾರ್ಯಕ್ರಮಗಳಲ್ಲಿ ಮಾತ್ರ ಸಂಜನಾ ಸಿನಿಮಾದವರ ಜೊತೆ ಇರುತ್ತಿದ್ದರು ಎಂಬುದು ತಿಳಿದುಬಂದಿದೆ. ಸಂಜನಾ ಫ್ರೆಂಡ್ಸ್ ಸರ್ಕಲ್ನಲ್ಲೂ ಸಹ ಸಿನಿಮಾ […]
[lazy-load-videos-and-sticky-control id=”UzmkuldSI-Y”]
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಪಟ್ಟಂತೆ CCB ಅಧಿಕಾರಿಗಳಿಂದ ವಿಚಾರಣೆಗೆ ಒಳ್ಳಪಟ್ಟಿರುವ ನಟಿ ಸಂಜನಾ ಅವರ ಒಂದೊಂದೆ ರಹಸ್ಯಗಳು ಈಗ ಹೊರಬೀಳುತ್ತಿವೆ.
ನಟಿ ಸಂಜನಾ ಅವರ ವೈಯಕ್ತಿಕ ವಿಚಾರಗಳನ್ನ ತಿಳಿದಿದ್ದ ಚಿತ್ರರಂಗವೇ ಅವರಿಂದ ದೂರ ಉಳಿದಿತ್ತಾ ಎಂಬ ಪ್ರಶ್ನೆ ಈಗ ಎಲ್ಲೆಡೆ ವ್ಯಕ್ತವಾಗುತ್ತಿದೆ. ಸಂಜನಾ ಅಷ್ಟಾಗಿ ಚಿತ್ರರಂಗದವರ ಜೊತೆ ಬೆರೆಯುತ್ತಾ ಇರಲಿಲ್ಲ. ಜೊತೆಗೆ ಸಿನಿಮಾ ಕಾರ್ಯಕ್ರಮಗಳಲ್ಲಿ ಮಾತ್ರ ಸಂಜನಾ ಸಿನಿಮಾದವರ ಜೊತೆ ಇರುತ್ತಿದ್ದರು ಎಂಬುದು ತಿಳಿದುಬಂದಿದೆ.
ಸಂಜನಾ ಫ್ರೆಂಡ್ಸ್ ಸರ್ಕಲ್ನಲ್ಲೂ ಸಹ ಸಿನಿಮಾ ಮಂದಿ ಅಷ್ಟಾಗಿ ಇಲ್ಲ. ಯಾವ ನಟಿ, ನಟಿಯರೂ ಸಂಜನಾ ಸಹವಾಸಕ್ಕೆ ಹೋಗಿಲ್ಲ. ಜೊತೆಗೆ ಸಂಜನಾ ಸರ್ಕಲ್ನಲ್ಲಿದ್ದ ಬಹುತೇಕರು ಈಗ ಖಾಕಿ ಅತಿಥಿ ಆಗಿದ್ದಾರೆ. ಅಲ್ಲದೆ ಇತ್ತೀಚೆಗೆ ಸಂಜನಾ ಕೈಯಲ್ಲಿ ಯಾವುದೇ ಸಿನಿಮಾ ಇರಲಿಲ್ಲ. 2019ರಲ್ಲಿ ಸಂಜನಾ ಅವರ ಯಾವುದೇ ಚಿತ್ರವೂ ಬಿಡುಗಡೆ ಆಗಿಲ್ಲ. ರಾಜಸಿಂಹ ಚಿತ್ರವೇ ಅವರ ಕಡೆಯ ಕನ್ನಡ ಚಿತ್ರವಾಗಿದೆ.
ತೆಲುಗಿನ ಸ್ವರ್ಣ ಖಡ್ಗಂ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಮತ್ಯಾವ ದೊಡ್ಡ ಪ್ರಾಜೆಕ್ಟ್ನಲ್ಲೂ ಸಂಜನಾ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಒಂದೆರಡು ಮಲಯಾಳಂ ಚಿತ್ರಗಳಿಗೆ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ.
Published On - 10:13 am, Wed, 9 September 20