ಡ್ರಗ್ಸ್ ಜಾಲದಲ್ಲಿ ಸಂಜನಾ ಸಿಸಿಬಿಗೆ ತಗ್ಲಾಕೊಂಡಿದ್ದು ಹೇಗೆ?

  • Updated On - 11:26 am, Wed, 9 September 20
ಡ್ರಗ್ಸ್ ಜಾಲದಲ್ಲಿ ಸಂಜನಾ ಸಿಸಿಬಿಗೆ ತಗ್ಲಾಕೊಂಡಿದ್ದು ಹೇಗೆ?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಸಂಜನಾ ಸಿಸಿಬಿ ಬಲೆಗೆ ಬಿದ್ದದ್ದು ಹೇಗೆ ಎಂಬುವುದರ ಇನ್ ಸೈಡ್ ಡೀಟೇಲ್ಸ್ ಇಲ್ಲಿದೆ.

ಸಿಸಿಬಿಗೆ ಮೊದಲು ಅನುಮಾನ ಬಂದಿದ್ದೆ ಸಂಜನಾ ಮೇಲೆ. ಯಾಕೆಂದ್ರೆ ರಾಹುಲ್ ಒಡನಾಟದ ಮೇಲೆ ಸಿಸಿಬಿ ಕಣ್ಣು ಇಟ್ಟಿತ್ತು. ರಾಹುಲ್​ನನ್ನು ಫಾಲೋ ಮಾಡ್ತಿದ್ದ ಸಿಸಿಬಿಗೆ ಸಂಜನಾ ಮೇಲೆ ಅನುಮಾನ ಹೆಚ್ಚಾಗಿತ್ತು.‌ ಒಂದೆಡೆ ರವಿಶಂಕರ್ ಮತ್ತೊಂದೆಡೆ ರಾಹುಲ್ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸಿಸಿಬಿ ರವಿಶಂಕರ್ ನೀಡಿದ ಮಾಹಿತಿ ಆಧಾರದ ಮೇಲೆ ರಾಗಿಣಿಯನ್ನು ಅರೆಸ್ಟ್ ಮಾಡಿದ್ದರು. ಇತ್ತ ಸಂಜನಾಳನ್ನು ಟಚ್ ಮಾಡುವಂತಹಾ ಸಾಕ್ಷಿಗಳು ಸಿಸಿಬಿಗೆ ಮೊದಲ ಹಂತದಲ್ಲಿ ಸಿಕ್ಕಿರಲಿಲ್ಲ.

ರಾಹುಲ್ ಬಳಿ ಕಲೆ ಹಾಕಿದ್ದ ಮಾಹಿತಿ ಮೇರೆಗೆ ಮತ್ತು ಟೆಕ್ನಿಕಲ್ ಎವಿಡೆನ್ಸ್ ಮೇಲೆ ಪೃಥ್ವಿ ಶೆಟ್ಟಿಯನ್ನು ವಿಚಾರಿಸಿದಾಗ ಪೃಥ್ವಿ ಶೆಟ್ಟಿ ಸಂಜನಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ರು. ಸಂಜನಾ ಪಾರ್ಟಿ, ಇನ್ವೆಸ್ಟ್ಮೆಂಟ್, ಶ್ರೀಲಂಕಾ ಟ್ರಿಪ್ ಹೀಗೆ ಅನೇಕ ಮಾಹಿತಿ ಸಿಕುದ್ವು.

ಇನ್ನು ನಯೀಜ್ ಬಳಿ ಸಂಜನಾ ಸಂಪರ್ಕ ಹೊಂದಿದ್ದಾಳೆ. ಅಲ್ಲದೆ ವ್ಯವಹಾರಗಳಲ್ಲಿ ಪಾಲುದಾರರು ಎಂಬ ಮಾಹಿತಿ ಸಿಕ್ಕಿತು. ನಯೀಜ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಜನಾ ಪಾತ್ರ ಬಯಲಿಗೆ ಬಂದಿತು. ನಯಾಜ್, ಪೃಥ್ವಿ ಶೆಟ್ಟಿ ,ರಾಹುಲ್ ಮೂವರು ನೀಡಿದ್ದ ಹೇಳಿಕೆ ಮತ್ತು ಸಿಸಿಬಿ ಕಲೆಹಾಕಿದ್ದ ಸಾಕ್ಷಿಗಳ ಅನ್ವಯ ಸಂಜನಾಳನ್ನು ಸಿಸಿಬಿ ನೆನ್ನೆ ಅರೆಸ್ಟ್ ಮಾಡಿದ್ರು.

Click on your DTH Provider to Add TV9 Kannada