ಸಾಂತ್ವನ ಕೇಂದ್ರದಲ್ಲಿ.. ಸಂಜನಾಗೆ ಆ ಕೊನೆ ಬೆಡ್, ರಾಗಿಣಿಗೆ ಈ ಕೊನೆಯ ಬೆಡ್, ಯಾಕೆ ಗೊತ್ತಾ!?
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿ ಸದ್ಯ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗಿರುವ ನಟಿ ಸಂಜನಾ ಗಲ್ರಾನಿಗೂ ಸಹ, ಮಹಿಳಾ ಸಾಂತ್ವನ ಕೇಂದ್ರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಅಲ್ಲಿ ಈಗಾಗಲೇ ಏಟು ಆರೋಪಿ ರಾಗಿಣಿ ಠಿಕಾಣಿ ಹೂಡಿದ್ದಾರೆ. ಸಾಂತ್ವನ ಕೇಂದ್ರದಲ್ಲಿ ಇಬ್ಬರಿಗೂ ಸಿಸಿಬಿಯಿಂದ ‘ಸಾಂತ್ವನ’ ಸದ್ಯ ನಟಿಯರಿಬ್ಬರಿಗೂ 5 ಹಾಸಿಗೆಗಳಿರುವ ಕೊಠಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗಿದೆ. ಜೊತೆಗೆ, ಇಬ್ಬರ ಭದ್ರತೆಗಾಗಿ ಮೂವರು ಮಹಿಳಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರಲ್ಲಿರುವ ಈ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿ ಸದ್ಯ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗಿರುವ ನಟಿ ಸಂಜನಾ ಗಲ್ರಾನಿಗೂ ಸಹ, ಮಹಿಳಾ ಸಾಂತ್ವನ ಕೇಂದ್ರದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಅಲ್ಲಿ ಈಗಾಗಲೇ ಏಟು ಆರೋಪಿ ರಾಗಿಣಿ ಠಿಕಾಣಿ ಹೂಡಿದ್ದಾರೆ. ಸಾಂತ್ವನ ಕೇಂದ್ರದಲ್ಲಿ ಇಬ್ಬರಿಗೂ ಸಿಸಿಬಿಯಿಂದ ‘ಸಾಂತ್ವನ’ ಸದ್ಯ ನಟಿಯರಿಬ್ಬರಿಗೂ 5 ಹಾಸಿಗೆಗಳಿರುವ ಕೊಠಡಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗಿದೆ. ಜೊತೆಗೆ, ಇಬ್ಬರ ಭದ್ರತೆಗಾಗಿ ಮೂವರು ಮಹಿಳಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.
ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರಲ್ಲಿರುವ ಈ ಕೋಣೆಯಲ್ಲಿ ರಾಗಿಣಿ ಮತ್ತು ಸಂಜನಾಗೆ ಕೊನೆಯ ಬೆಡ್ಗಳು ಸಿಗಲಿದೆ. ಮಧ್ಯದ ಮೂರು ಬೆಡ್ನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗುವುದು ಎಂದು ತಿಳಿದುಬಂದಿದೆ.
ಇಬ್ಬರಲ್ಲಿಯೂ ಹಿಂದಿನಿಂದಲೂ ಪರಸ್ಪರ ವೈರತ್ವ ಒಂದು ಮೂಲದ ಪ್ರಕಾರ ಇಬ್ಬರಲ್ಲಿಯೂ ಈ ಹಿಂದಿನಿಂದಲೂ ಪರಸ್ಪರ ವೈರತ್ವ ಮನೆ ಮಾಡಿದೆ. ಒಬ್ಬರಿಗೊಬ್ಬರು ಬದ್ಧ ದ್ವೇಷಿಗಳು ಎನ್ನಲಾಗಿದೆ. ಹಾಗಾಗಿ ಇಲ್ಲೂ ಆ ಗೊಡವೆ ಯಾಕೆ ಎಂದು ಸಿಸಿಬಿ ಅಧಿಕಾರಿಗಳು ಇಬ್ಬರನ್ನೂ ಕೊನೆಯ ಬೆಡ್ಗಳಲ್ಲಿ ಪವಡಿಸಲು ಸೂಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಕುತೂಹಲಕಾರಿ ಸಂಗತಿಯೆಂದ್ರೆ ಇಂದು ಮಧ್ಯಾಹ್ನ ಸಂಜನಾ ಅರೆಸ್ಟ್ ಆಗಿದ್ದಾಳೆ ಎಂಬುದನ್ನು ತಿಳಿದ ರಾಗಿಣಿ, ಹಾಗಾದ್ರೆ ಸಂಜನಾ ಸಹ ಇಲ್ಲಿಗೇ ಶಿಫ್ಟ್ ಆಗಲಿದ್ದಾಳೆ. ಆಗ ತನ್ನ ಮೇಲೆ ದೈಹಿಕ ಹಲ್ಲೆಗೆ ಮುಂದಾಗಬಹುದು ಎಂದು ಸಿಸಿಬಿ ಸಿಬ್ಬಂದಿ ಬಳಿ ಆತಂಕ ತೋಡಿಕೊಂಡಿದ್ದರಂತೆ!
Published On - 6:36 pm, Tue, 8 September 20