ಸಂಜನಾಗೆ ಸಮಾಧಾನಕರ ಸಂಗತಿ: ಕೊರೊನಾ ಱಂಡಮ್​ ಟೆಸ್ಟ್ ವರದಿ ಬಂದೇಬಿಡ್ತು!

ಸಂಜನಾಗೆ ಸಮಾಧಾನಕರ ಸಂಗತಿ: ಕೊರೊನಾ ಱಂಡಮ್​ ಟೆಸ್ಟ್ ವರದಿ ಬಂದೇಬಿಡ್ತು!

ಬೆಂಗಳೂರು: ಸಿಸಿಬಿ ಪೊಲೀಸರಿಂದ ಸಂಜನಾ ಗಲ್ರಾನಿ ಬಂಧನದ ಹಿನ್ನೆಲೆಯಲ್ಲಿ ಸಂಜನಾಗೆ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ. ಇದರ ಜೊತೆಗೆ ಸಂಜನಾಗೆ ಕೊರೊನಾ ಟೆಸ್ಟ್ ಮಾಡಿಸುವುದು ಅಗತ್ಯವಾಗಿದೆ. ಹೀಗಾಗಿ ಆ್ಯಂಟಿಜೆನ್ ಟೆಸ್ಟ್ ಮಾಡಿಸಿದ, ಬಳಿಕ ಆರ್​ಟಿಪಿಸಿಆರ್ ಟೆಸ್ಟ್ ಕೂಡ ಮಾಡಲಾಗುತ್ತೆ. ಸದ್ಯ ನಟಿ ಸಂಜನಾಗೆ ಕೊರೊನಾ ಱಂಡಮ್​ ಟೆಸ್ಟ್​ನಲ್ಲಿ ಕೊರೊನಾ ನೆಗೆಟಿವ್ ಎಂದು ಬಂದಿದೆ. ಇದರಿಂದ ತೀವ್ರ ಸಂಕಟದ ನಡುವೆಯೂ ಸಂಜನಾಗೆ ತುಸು ನೆಮ್ಮದಿ ತಂದಿದೆ.

ಈ ಮಧ್ಯೆ, ಸಂಜನಾಗೆ ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮುಂದುವರಿದಿದ್ದು, ಸಿಸಿಬಿ ಅಧಿಕಾರಿಗಳು ರಕ್ತದ ಮಾದರಿ ಪಡೆದು ಫೊರೆನ್ಸಿಕ್ ಲ್ಯಾಬ್​ಗೆ ರವಾನೆ ಮಾಡಲಿದ್ದಾರೆ. ಡ್ರಗ್ಸ್​ ಪಡೆದಿದ್ದಾರಾ, ಇಲ್ವಾ? ಎಂಬುದು ಇದರಿಂದ ಪತ್ತೆಯಾಗಲಿದೆ. ಜೊತೆಗೆ ಸಂಜನಾಗೆ ರಕ್ತ, ಕೂದಲು, ಉಗುರು, ಮೂತ್ರ ಪರೀಕ್ಷೆಯೂ ನಡೆಯಲಿದೆ. 3 ದಿನಕ್ಕೆ ಸಿಸಿಬಿ ಕೈ ಸೇರಲಿದೆ ಬ್ಲಡ್​ ಸ್ಯಾಂಪಲ್ ವರದಿ.

Click on your DTH Provider to Add TV9 Kannada