ತನಿಖಾಧಿಕಾರಿ ಅಂಜುಮಾಲಾ ಬ್ಯುಸಿಯೆಂದು ರಿಲ್ಯಾಕ್ಸ್ ಆಗಿದ್ದ ರಾಗಿಣಿಗೆ ಶಾಕ್ ಕೊಟ್ಟ CCB

ತನಿಖಾಧಿಕಾರಿ ಅಂಜುಮಾಲಾ ಬ್ಯುಸಿಯೆಂದು ರಿಲ್ಯಾಕ್ಸ್ ಆಗಿದ್ದ ರಾಗಿಣಿಗೆ ಶಾಕ್ ಕೊಟ್ಟ CCB

ಬೆಂಗಳೂರು: ಸ್ಯಾಂಡಲ್ ವುಡ್​ಗೆ ಡ್ರಗ್ ಮಾಫಿಯಾ ನಂಟು ಪ್ರಕರಣ ಸಂಬಂಧ ನಟಿ ರಾಗಿಣಿ ದ್ವಿವೇದಿ ಬಂಧನದಲ್ಲಿದ್ದಾರೆ. ರಾಗಿಣಿ ವಿಚಾರಣೆ ನಡೆಸುತ್ತಿದ್ದ ಇನ್ಸ್ ಪೆಕ್ಟರ್ ಅಂಜುಮಾಲಾ ನಟಿ ಸಂಜನಾ ಗಲ್ರಾನಿ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಿಲ್ಯಾಕ್ಸ್ ಆಗಿದ್ದ ರಾಗಿಣಿಗೆ ಸಿಸಿಬಿ ಮತ್ತೆ ಶಾಕ್ ಕೊಟ್ಟಿದೆ.

ಶಿವಾಜಿನಗರ ಇನ್ಸ್​ಪೆಕ್ಟರ್ ಕಾತ್ಯಾಯಿನಿಯಿಂದ ರಾಗಿಣಿ ವಿಚಾರಣೆ
ಹೌದು ಇನ್ಸ್ ಪೆಕ್ಟರ್ ಅಂಜುಮಾಲಾ ನೇತೃತ್ವದಲ್ಲಿ ರಾಗಿಣಿ ತನಿಖೆ ನಡೆಯುತ್ತಿತ್ತು. ಆದರೆ ಸಂಜನಾ ವಿಚಾರದಲ್ಲಿ ಅಂಜುಮಾಲಾ ಬ್ಯುಸಿಯಾಗಿದ್ದಾರೆ. ಹೀಗಾಗಿ ವಿಚಾರಣೆ ಇಲ್ಲ ಅಂದುಕೊಂಡಿದ್ದ ರಾಗಿಣಿಗೆ ಅಧಿಕಾರಿಗಳು ಮೇಲಿಂದ ಮೇಲೆ ಶಾಕ್ ಕೊಟ್ಟಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದಲ್ಲೇ ಮಹಿಳಾ ಅಧಿಕಾರಿ ಕ್ಯಾತ್ಯಾಯಿನಿ ನೇತೃತ್ವದಲ್ಲಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಕ್ಯಾತ್ಯಾಯಿನಿ ಈಗಾಗಲೇ ವಿಚಾರಣೆಯ ಸಂಪೂರ್ಣ ರಿಪೋರ್ಟ್ ಪಡೆದಿದ್ದಾರೆ. ಸದ್ಯ ಶಿವಾಜಿನಗ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕಾತ್ಯಾಯಿನಿ ರಾಗಿಣಿಯನ್ನ ತನಿಖೆ ಮಾಡಲಿದ್ದಾರೆ.

Click on your DTH Provider to Add TV9 Kannada