ಆತ Drug ಪೆಡ್ಲರ್ ಅಂತಾ ಗೊತ್ತಿದ್ರೂ ನಮಗೆ ಯಾಕೆ ತಿಳಿಸಲಿಲ್ಲ? ಸಂಜನಾಗೆ ಪ್ರಶ್ನೆಗಳ ಸುರಿಮಳೆ

ಆತ Drug ಪೆಡ್ಲರ್ ಅಂತಾ ಗೊತ್ತಿದ್ರೂ ನಮಗೆ ಯಾಕೆ ತಿಳಿಸಲಿಲ್ಲ? ಸಂಜನಾಗೆ ಪ್ರಶ್ನೆಗಳ ಸುರಿಮಳೆ

ಬೆಂಗಳೂರು: ವಿಚಾರಣೆಗೆಂದು ತಮ್ಮ ಕಚೇರಿಗೆ ಕರೆತಂದಿರುವ ನಟಿ ಸಂಜನಾ ಗಲ್ರಾನಿಗೆ CCBಯಿಂದ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಒಬ್ಬ ಡ್ರಗ್ ಪೆಡ್ಲರ್ ಜೊತೆ ಇರುವಂತಹ ಸಂಬಂಧ ಏನು? ಆತ ಡ್ರಗ್ ಪೆಡ್ಲರ್ ಅಂತಾ ಗೊತ್ತಿದ್ದರೂ ಪೊಲೀಸರಿಗೆ ಯಾಕೆ ತಿಳಿಸಲಿಲ್ಲ? ನೀವು ಅವರ ಪಾರ್ಟಿಗಳಲ್ಲಿ ಡ್ರಗ್ಸ್​ ಸೇವಿಸಿದ್ರಾ? ಅಂತಾ ನಟಿಗೆ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.

ಜೊತೆಗೆ, ಪ್ರೈವೇಟ್ ಪಾರ್ಟಿಗಳು ಎಲ್ಲೆಲ್ಲಿ ನಡೆಯುತಿದ್ವು? ಪಾರ್ಟಿಗಳಲ್ಲಿ ಯಾಱರು ಭಾಗವಹಿಸುತಿದ್ರು? ಸೆಲೆಬ್ರಿಟಿಗಳು ಯಾಱರು ಭಾಗಿಯಾಗ್ತಿದ್ರು? ಎಂದೂ ಸಹ ಪ್ರಶ್ನಿಸಿದ್ದಾರೆ.

ರಾಹುಲ್ ಬಿಟ್ಟರೆ ಬೇರೆ ಯಾವ ಯಾವ ಡ್ರಗ್ ಪೆಡ್ಲರ್ ಜೊತೆ ಸಂಪರ್ಕದಲ್ಲಿದ್ದೀರೀ? ಶ್ರೀಲಂಕಾದಲ್ಲಿ ನಡೆದ ಕೆಸಿನೋ ಪಾರ್ಟಿಯಲ್ಲಿ ಡ್ರಗ್ ಹಂಚಿಕೆ ಆಗಿತ್ತಾ? ಪೃಥ್ವಿ ಶೆಟ್ಟಿ ಬಗ್ಗೆ ಏನು ಗೊತ್ತು? ಹೇಗೆ ಪರಿಚಯವಾಯ್ತು ಅಂತಾ ಕೇಳಿದ CCB ಅಧಿಕಾರಿಗಳು ನೀವು ಡ್ರಗ್ಸ್ ಸೇವನೆ ಮಾಡಿದ್ದಿರಾ? ಎಂದು ಸಹ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.

Click on your DTH Provider to Add TV9 Kannada