ಸಂಜನಾಗೆ ಅಪಾರ್ಟ್​ಮೆಂಟ್ ಮತ್ತು BMW ಕಾರ್ ಕೊಡಿಸಿದ್ಯಾರು? ಯಾರದು ವೈದ್ಯ?

  • Updated On - 11:33 am, Tue, 8 September 20
ಸಂಜನಾಗೆ ಅಪಾರ್ಟ್​ಮೆಂಟ್ ಮತ್ತು BMW ಕಾರ್ ಕೊಡಿಸಿದ್ಯಾರು? ಯಾರದು ವೈದ್ಯ?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಮಾಫಿಯಾ ಜಾಲದ ನಂಟು ಕೇಸ್​ಗೆ ಸಂಬಂಧಿಸಿ ಇಂದು ನಟಿ ಸಂಜನಾ ಮನೆಯ ಮೇಲೆ CCB ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ, ದಾಳಿ ಎದುರಿಸಲು ಸಂಜನಾ ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮೂರು ದಿನಗಳ ಹಿಂದೆಯೇ CCB ದಾಳಿ ಬಗ್ಗೆ ಊಹಿಸಿದ್ದ ನಟಿ ಸಂಜನಾ, ಅಕ್ಕಪಕ್ಕದ ನಿವಾಸಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ತಾವು ಕಿರಿಕ್ ಮಾಡಿದ್ದ ಅಕ್ಕಪಕ್ಕದ ಮನೆಯವರ ಜೊತೆ ಚರ್ಚೆ ನಡೆಸಿರುವ ನಟಿ, ನನ್ನ ಬಗ್ಗೆ ಯಾವುದೇ ಮಾಹಿತಿ ನೀಡಬೇಡಿ ಎಂದು ಕೇಳಿಕೊಂಡಿದ್ದಾರಂತೆ.

ಇನ್ನು, ತನ್ನ ಮನೆಯಲ್ಲಿದ್ದಂಥ ವಿಮಾನ ಪ್ರಯಾಣದ ಟಿಕೆಟ್, ಗಿಫ್ಟ್‌ಗಳು ಹಾಗೂ ದಾಖಲಾತಿ ಸೇರಿ ಎಲ್ಲವನ್ನು ನಾಶಪಡಿಸಿದ್ದಾರೆ ಎಂದೂ ತಿಳಿದುಬಂದಿದೆ. ಜೊತೆಗೆ, ಪಾರ್ಟಿಗಳ ವಿಡಿಯೋ, ಫೋಟೋಗಳು ಸಹ ಡಿಲೀಟ್ ಮಾಡಿದ್ದಾರಂತೆ.

ವೈದ್ಯನೊಟ್ಟಿಗೆ ಸಂಜನಾ
ಲಿವ್-ಇನ್ ರಿಲೇಷನ್​ಶಿಪ್?

ಈ ನಡುವೆ ನಟಿ ಸಂಜನಾ ಗಲ್ರಾನಿ ಜೊತೆ ವೈದ್ಯನೊಬ್ಬ ವಾಸವಾಗಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ, ಡ್ರಗ್ಸ್ ವಿಚಾರ ಶುರುವಾದಾಗಿಂದ ಆ ಡಾಕ್ಟರ್ ಪತ್ತೇನೇ ಇಲ್ಲ ಅಂತಾನೂ ಹೇಳ್ತಿದ್ದಾರೆ. ಇತ್ತೀಚೆಗೆ, ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ರಾಹುಲ್ ತಂದೆ ಸಂಜನಾ ಪತಿಯೇ ನನಗೆ ಚಿಕಿತ್ಸೆ ನೀಡಿದ್ದು ಅಂತಾ ಹೇಳಿದ್ದರು.

ಆದರೆ, ಸಂಜನಾ ಇತ್ತೀಚೆಗೆ ನನಗಿನ್ನೂ ಮದ್ವೇನೆ ಆಗಿಲ್ಲ ಅಂತಾ ಹೇಳಿದ್ದರಂತೆ. ಹೀಗಾಗಿ, ಸಂಜನಾ ಆ ವೈದ್ಯನೊಟ್ಟಿಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದಾರಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ನಟಿಯೊಟ್ಟಗೆ ವಾಸವಿದ್ದ ವೈದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ, ಸಂಜನಾ ಮನೆಯಲ್ಲಿ ರಾತ್ರಿ ಪಾರ್ಟಿ ಮಾಡಿ ತೊಂದರೆ ಕೊಡ್ತಾರೆ ಅಂತಾ ಈ ಹಿಂದೆ ಆರೋಪಿಸಿದ್ದ ಸ್ಥಳೀಯರು ಈ ಡಾಕ್ಟರ್​ ಆಕೆಯ ಪಾರ್ಟಿಗಳಲ್ಲಿ‌ ಮಿಸ್ಸೇ ಆಗ್ತಿರ್ಲಿಲ್ಲ.

ಆ ಡಾಕ್ಟರ್ ಸಂಜನಾ ಮನೆಗೆ ಕಂಟಿನ್ಯೂಸ್ ಆಗಿ ಬರ್ತಿದ್ದ ಎಂದು ಸಹ ಹೇಳಿದ್ದಾರೆ. ಇದಲ್ಲದೆ, ಸಂಜನಾ ಇರೋ ಅಪಾರ್ಟ್​ಮೆಂಟ್ ಹಾಗೂ ಚಲಾಯಿಸುವ BMW ಕಾರ್ ಕೂಡ ಈ ವೈದ್ಯನೇ ಕೊಡಿಸಿರುವುದು ಅನ್ನೋ ಗುಮಾನಿ ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಇದು ಸಂಜನಾ ಗಲ್ರಾನಿ ಕಿರಿಕ್ ಕಹಾನಿ.. ವೀಕೆಂಡಲ್ಲಿ ಮನೆಯೇ ಪಬ್, ನೈಟ್ ಫುಲ್ ಪಾರ್ಟಿ!

Click on your DTH Provider to Add TV9 Kannada