‘ರಾಬರ್ಟ್​’ ಗಾಯಕಿ ಮಂಗ್ಲಿ ಹಾಡಿಗೆ ಕುಣಿದು ಕುಪ್ಪಳಿಸಿದ ಸದ್ಗುರು! ‘ಕಣ್ಣೇ ಅದಿರಿಂದಿ’ ಬಳಿಕ ಮತ್ತೊಮ್ಮೆ ಮೋಡಿ

ಶಿವರಾತ್ರಿ ವೇದಿಕೆಯಲ್ಲಿ ಮಂಗ್ಲಿ ಗಾನ ಸುಧೆ ಹರಿಸಿದ್ದಾರೆ. ಕಂಚಿನ ಕಂಠದಲ್ಲಿ ಅವರು ಹಾಡಿದ ಸಾಧು ಜಂಗಮ ‘ಆದಿ ದೇವುಡ...’ ಗೀತೆಗೆ ಎಲ್ಲರೂ ತಲೆ ದೂಗಿದ್ದಾರೆ.

‘ರಾಬರ್ಟ್​’ ಗಾಯಕಿ ಮಂಗ್ಲಿ ಹಾಡಿಗೆ ಕುಣಿದು ಕುಪ್ಪಳಿಸಿದ ಸದ್ಗುರು! ‘ಕಣ್ಣೇ ಅದಿರಿಂದಿ’ ಬಳಿಕ ಮತ್ತೊಮ್ಮೆ ಮೋಡಿ
ಮಂಗ್ಲಿ - ಸದ್ಗುರು

Updated on: Mar 12, 2021 | 3:10 PM

ತೆಲುಗು ಗಾಯಕಿ ಮಂಗ್ಲಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಾನಪದ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಅವರು ಈಗ ಸಿನಿಮಾ ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. ಕೋಟ್ಯಂತರ ಮಂದಿಯ ಹೃದಯ ಗೆದ್ದಿದ್ದಾರೆ. ‘ರಾಬರ್ಟ್​’ ಚಿತ್ರದ ‘ಕಣ್ಣೇ ಅದಿರಿಂದಿ..’ ಹಾಡಿನ ರೀತಿಯೇ ಅವರ ಮತ್ತೊಂದು ಹಾಡು ಈಗ ಭರ್ಜರಿ ಸೌಂಡು ಮಾಡುತ್ತಿದೆ.

ದೇಶದೆಲ್ಲೆಡೆ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಸದ್ಗುರು ಜಗ್ಗಿ ವಾಸುದೇವ್​ ಅವರ ಈಶಾ ಫೌಂಡೇಶನ್​ನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಲಕ್ಷಾಂತರ ಜನರ ಎದುರಿನಲ್ಲಿ ಜಾಗರಣೆ ಮಾಡಲಾಗಿದೆ. ಹಾಡು, ನೃತ್ಯ, ಭಜನೆ ನಡುವೆ ಶಿವಭಕ್ತರು ಸಂಭ್ರಮಿಸಿದ್ದಾರೆ. ಇದೇ ವೇದಿಕೆಯಲ್ಲಿ ಮಂಗ್ಲಿ ಗಾನ ಸುಧೆ ಹರಿಸಿದ್ದಾರೆ. ಕಂಚಿನ ಕಂಠದಲ್ಲಿ ಮಂಗ್ಲಿ ಹಾಡಿದ ‘ಸಾಧು ಜಂಗಮ ಆದಿ ದೇವುಡ…’ ಗೀತೆಗೆ ಎಲ್ಲರೂ ತಲೆ ದೂಗಿದ್ದಾರೆ.

ಅಭಿಮಾನಿಗಳು ಮಾತ್ರವಲ್ಲದೆ, ಸದ್ಗುರು ಕೂಡ ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದು ಮಂಗ್ಲಿ ಅವರ ಜನಪ್ರಿಯ ಗೀತೆ. ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಮಾ.8ರಂದು ಅಪ್​ಲೋಡ್​ ಆದ ಈ ಸಾಂಗ್​ 13 ಲಕ್ಷಕ್ಕಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಅದೇ ಗೀತೆಯನ್ನು ಈಶಾ ಫೌಂಡೇಶನ್​ನ ಶಿವರಾತ್ರಿ ಸಂಭ್ರಮದಲ್ಲಿ ಮಂಗ್ಲಿ ಹಾಡಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಕೂಡ ಭಾಗವಹಿಸಿದ್ದರು. ಸಮಂತಾ ಅಕ್ಕಿನೇನಿ, ರಾಕುಲ್​ ಪ್ರೀತ್​ ಸಿಂಗ್​, ಲಕ್ಷ್ಮೀ ಮಂಚು ಮುಂತಾದವರು ಹಾಜರಿದ್ದರು. ಎಲ್ಲರ ಎದುರಿನಲ್ಲಿ ಮಂಗ್ಲಿ ಮತ್ತೆ ಮಿಂಚಿದ್ದಾರೆ. ತಮಗೆ ಸಿಕ್ಕ ವೇದಿಕೆಯನ್ನು ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಕಳೆದ ವರ್ಷ ಶಿವರಾತ್ರಿಯಲ್ಲಿ ಕನ್ನಡದ ಗಾಯಕಿ ಅನನ್ಯಾ ಭಟ್​ ಹಾಡಿದ್ದ ‘ಸೋಜಿಗಾದ ಸೂಚು ಮಲ್ಲಿಗೆ…’ ಹಾಡು ಕೂಡ ಇದೇ ರೀತಿ ವೈರಲ್​ ಆಗಿತ್ತು. ಈ ವರ್ಷ ಮಂಗ್ಲಿ ಮೋಡಿ ಮಾಡುತ್ತಿದ್ದಾರೆ.

‘ರಾಬರ್ಟ್​’ ಸಿನಿಮಾದ ‘ಕಣ್ಣೇ ಅದಿರಿಂದ..’ ಹಾಡು ಫೇಮಸ್​ ಆಗುವವರೆಗೂ ಮಂಗ್ಲಿ ಬಗ್ಗೆ ಕನ್ನಡದ ಸಿನಿಪ್ರಿಯರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಹೈದರಾಬಾದ್​ನಲ್ಲಿ ನಡೆದ ರಾಬರ್ಟ್​ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಮಂಗ್ಲಿ ಹಾಡಿದ ‘ಕಣ್ಣೇ ಅದಿರಿಂದ…’ ಗೀತೆ ರಾತ್ರಿ ಬೆಳಗಾಗುವುದರೊಳಗೆ ಸಿಕ್ಕಾಪಟ್ಟೆ ವೈರಲ್​ ಆಯಿತು. 19 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ಈ ಹಾಡು ವೀಕ್ಷಣೆ ಕಂಡಿದೆ. ‘ಆನಂದ್​ ಆಡಿಯೋ’ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಮಾಡಿದ್ದ ಒರಿಜಿನಲ್​ ಹಾಡಿಗಿಂತಲೂ ಪ್ರಿ-ರಿಲೀಸ್​ ವೇದಿಕೆಯಲ್ಲಿ ಮಂಗ್ಲಿ ಹಾಡಿದ್ದೇ ಹೆಚ್ಚು ವ್ಯೂಸ್​ ಪಡೆದುಕೊಂಡಿದೆ. ಇಂದು ಮಂಗ್ಲಿ ಮ್ಯಾಜಿಕ್​ಗೆ ಹಿಡಿದ ಕನ್ನಡಿ.

ಇದನ್ನೂ ಓದಿ: Roberrt Telugu Collection: ತೆಲುಗು ನೆಲದಲ್ಲಿ ತೊಡೆತಟ್ಟಿದ ‘ರಾಬರ್ಟ್​’! ಆಂಧ್ರ-ತೆಲಂಗಾಣದಲ್ಲಿ ಎಷ್ಟು ಕೋಟಿ ಕಲೆಕ್ಷನ್​?

Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us