ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯ ಟಿಕೆಟ್ ಮಾರಿದ ‘ಕಾಂತಾರ’

Kantara: Chapter 1 movie: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಡೀ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದ ಸಿನಿಮಾ ಆಗಿತ್ತು. ಸಿನಿಮಾ ಬಿಡುಗಡೆಗೆ ಮೊದಲೇ ದಾಖಲೆಗಳನ್ನು ಬರೆಯುವ ನಿರೀಕ್ಷೆ ಇತ್ತು. ಅದರಂತೆ ರಿಷಬ್ ಶೆಟ್ಟಿಯ ಸಿನಿಮಾ ದೊಡ್ಡ ಕಲೆಕ್ಷನ್ ಮಾಡಿದೆ. ಅಂದಹಾಗೆ ಮೊದಲ ದಿನವೇ ಬುಕ್​​ ಮೈ ಶೋನಲ್ಲಿ ಭಾರಿ ಸಂಖ್ಯೆಯ ಕಲೆಕ್ಷನ್ ಅನ್ನು ಮಾಡಿದೆ ಸಿನಿಮಾ. ಈ ವರ್ಷ ಕೇವಲ ಒಂದೇ ದಿನದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಎನಿಸಿಕೊಂಡಿದೆ.

ಒಂದೇ ದಿನದಲ್ಲಿ ದಾಖಲೆ ಸಂಖ್ಯೆಯ ಟಿಕೆಟ್ ಮಾರಿದ ‘ಕಾಂತಾರ’
Kantara Chapter 1

Updated on: Oct 03, 2025 | 3:45 PM

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿನ್ನೆ ಬಿಡುಗಡೆ ಆಗಿದೆ. ಬಾಕ್ಸ್ ಆಫೀಸ್​​ನಲ್ಲಿ ಮೊದಲ ದಿನ ದಾಖಲೆ ಮೊತ್ತದ ಗಳಿಕೆಯನ್ನು ಸಿನಿಮಾ ಮಾಡಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇಡೀ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದ ಸಿನಿಮಾ ಆಗಿತ್ತು. ಸಿನಿಮಾ ಬಿಡುಗಡೆಗೆ ಮೊದಲೇ ದಾಖಲೆಗಳನ್ನು ಬರೆಯುವ ನಿರೀಕ್ಷೆ ಇತ್ತು. ಅದರಂತೆ ರಿಷಬ್ ಶೆಟ್ಟಿಯ ಸಿನಿಮಾ ದೊಡ್ಡ ಕಲೆಕ್ಷನ್ ಮಾಡಿದೆ. ಅಂದಹಾಗೆ ಮೊದಲ ದಿನವೇ ಬುಕ್​​ ಮೈ ಶೋನಲ್ಲಿ ಭಾರಿ ಸಂಖ್ಯೆಯ ಕಲೆಕ್ಷನ್ ಅನ್ನು ಮಾಡಿದೆ ಸಿನಿಮಾ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೊದಲ ದಿನ ಅಂದರೆ ನಿನ್ನೆ ಒಂದೇ ದಿನದಲ್ಲಿ ಬುಕ್​ ಮೈ ಶೋ ಆಪ್ ಒಂದರಲ್ಲೇ 1.28 ಮಿಲಿಯನ್ ಟಿಕೆಟ್​​ಗಳನ್ನು ಮಾರಾಟ ಮಾಡಿದೆ. ಕೇವಲ 24 ಗಂಟೆಯಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ 12,80,000 ಟಿಕೆಟ್​​ಗಳು ಮಾರಾಟವಾಗಿವೆ. 2025 ರಲ್ಲಿ ಈವರೆಗೆ ಬಿಡುಗಡೆ ಆದ ಯಾವ ಭಾಷೆಯ ಸಿನಿಮಾ ಸಹ ಒಂದೇ ದಿನದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್​​ಗಳನ್ನು ಇಷ್ಟು ಕಡಿಮೆ ಅವಧಿಯಲ್ಲಿ ಮಾರಾಟ ಮಾಡಿಲ್ಲ.

ನೆನಪಿರಲಿ, 12,80,000 ಟಿಕೆಟ್​​ಗಳು ಮಾರಾಟ ಆಗಿರುವುದು ಕೇವಲ ಬುಕ್ ಮೈ ಶೋನಲ್ಲಿ ಮಾತ್ರ. ಪೇಟಿಂ, ಪಿವಿಆರ್, ಐನಾಕ್ಸ್​​ಗಳ ಅಧಿಕೃತ ವೆಬ್​ ಸೈಟ್, ಇತರೆ ಟಿಕೆಟ್ ಬುಕಿಂಗ್ ಆಪ್​​ಗಳು, ಚಿತ್ರಮಂದಿರಗಳ ಅಧಿಕೃತ ವೆಬ್​​ಸೈಟ್, ಚಿತ್ರಮಂದಿರಗಳ ಬಳಿಯೇ ಹೋಗಿ ಖರೀದಿ ಮಾಡಿರುವ ಟಿಕೆಟ್​​ಗಳ ಲೆಕ್ಕ ಇದರಲ್ಲಿ ಸೇರಿಲ್ಲ. ಕೇವಲ 24 ಗಂಟೆಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್ ಮಾರಾಟ ಮಾಡಿರುವ ಕೆಲವೇ ಕೆಲವು ಸಿನಿಮಾಗಳ ಪಟ್ಟಿಗೆ ಇದೀಗ ‘ಕಾಂತಾರ: ಚಾಪ್ಟರ್ 1’ ಸಹ ಸೇರಿಕೊಂಡಿದೆ.

ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’: ವೀಕ್ಷಕರಲ್ಲಿ ಹೊಂಬಾಳೆ ಫಿಲಮ್ಸ್ ಮನವಿ

ಕಳೆದ ವರ್ಷ ಬಿಡುಗಡೆ ಆಗಿದ್ದ ‘ಪುಷ್ಪ 2’ ಸಿನಿಮಾ ಕೇವಲ ಒಂದು ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿತ್ತು. 24 ಗಂಟೆಗಳಲ್ಲಿ ಸುಮಾರು 16 ಲಕ್ಷ ಟಿಕೆಟ್​ಗಳು ಬಿಕರಿ ಆಗಿದ್ದವು. ‘ಪುಷ್ಪ 2’ ಸಿನಿಮಾ ಮೊದಲ ದಿನ ಸುಮಾರು 81 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೊದಲ ದಿನ 60 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 1000 ಕೋಟಿ ರೂಪಾಯಿಯನ್ನೂ ದಾಟಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ