‘ಕಾಂತಾರ: ಚಾಪ್ಟರ್ 1’ ಸಿನಿಮಾ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿ

Kantara Chapter 1: ಕಾಂತಾರ: ಚಾಪ್ಟರ್ 1 ಸಿನಿಮಾದ ಟ್ರೈಲರ್ ಬಿಡುಗಡೆ ಆಗಿಲ್ಲ, ಸಿನಿಮಾದ ಬಗ್ಗೆ ಯಾವುದೇ ಸುದ್ದಿಗೋಷ್ಠಿ, ಪ್ರೀ ರಿಲೀಸ್ ಕಾರ್ಯಕ್ರಮದ ಘೋಷಣೆ ಆಗಿಲ್ಲ. ಹಾಡುಗಳು ಬಿಡುಗಡೆ ಆಗಿಲ್ಲ ಎಂಬ ದೂರುಗಳು ವ್ಯಕ್ತವಾಗಿದ್ದವು. ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಪ್ರಕಟಿಸಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿ
Kantara Chapter 1

Updated on: Sep 19, 2025 | 1:11 PM

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಗೆ ಕೆಲವು ದಿನಗಳಷ್ಟೆ ಬಾಕಿ ಇದೆ. ಆದರೆ ಸಿನಿಮಾದ ಪ್ರಚಾರ ಕಾರ್ಯ ವೇಗ ಪಡೆದುಕೊಂಡಿಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದ್ದವು. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿಲ್ಲ, ಸಿನಿಮಾದ ಬಗ್ಗೆ ಯಾವುದೇ ಸುದ್ದಿಗೋಷ್ಠಿ, ಪ್ರೀ ರಿಲೀಸ್ ಕಾರ್ಯಕ್ರಮದ ಘೋಷಣೆ ಆಗಿಲ್ಲ. ಹಾಡುಗಳು ಬಿಡುಗಡೆ ಆಗಿಲ್ಲ ಎಂಬ ದೂರುಗಳು ವ್ಯಕ್ತವಾಗಿದ್ದವು. ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಪ್ರಕಟಿಸಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೈಲರ್ ಇದೇ ತಿಂಗಳು 22 ನೇ ತಾರೀಖಿನಂದು, ಮಧ್ಯಾಹ್ನ 12:45ಕ್ಕೆ ಬಿಡುಗಡೆ ಆಗಲಿದೆ. ಹೊಂಬಾಳೆಯ ಅಧಿಕೃತ ಯೂಟ್ಯೂಬ್ ಚಾನೆಲ್​​​ನಲ್ಲಿ ಟ್ರೈಲರ್ ಬಿಡುಗಡೆ ಆಗಲಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಟ್ರೈಲರ್ ಅನ್ನು ವೀಕ್ಷಿಸಬಹುದಾಗಿದೆ.

ಸಿನಿಮಾದ ಮೇಕಿಂಗ್ ವಿಡಿಯೋ ಒಂದನ್ನು ಕೆಲ ವಾರಗಳ ಹಿಂದಷ್ಟೆ ಚಿತ್ರತಂಡ ಬಿಡುಗಡೆ ಮಾಡಿತ್ತು. ಸಿನಿಮಾದ ಸೆಟ್, ಮೇಕಿಂಗ್, ಕಲಾವಿದರು, ತಂತ್ರಜ್ಞರ ಶ್ರಮವನ್ನು ಆ ವಿಡಿಯೋನಲ್ಲಿ ತೋರಿಸಲಾಗಿತ್ತು. ಜೊತೆಗೆ ಸಿನಿಮಾದ ಸೆಟ್​​ಗಳು ಎಷ್ಟು ಬೃಹತ್ ಆಗಿವೆ, ಭಿನ್ನವಾಗಿದೆ. ಅದಕ್ಕಾಗಿ ಎಷ್ಟು ಶ್ರಮಪಡಲಾಗಿದೆ ಎಂಬುದನ್ನು ವಿಡಿಯೋ ಸಾರಿ ಹೇಳುತ್ತಿತ್ತು. ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಈಗ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ಟ್ರೈಲರ್ ಮೇಲೆ ಭಾರಿ ನಿರೀಕ್ಷೆ ಅಭಿಮಾನಿಗಳಿಗೆ ಇದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಚಿತ್ರೀಕರಣ, ಕತೆ ಇನ್ನಿತರೆ ವಿಚಾರಗಳನ್ನು ಬಹಳ ಗುಟ್ಟಾಗಿ ರಿಷಬ್ ಶೆಟ್ಟಿ ಇರಿಸಿದ್ದರು. ಎರಡು ವರ್ಷಗಳ ಕಾಲ ಚಿತ್ರೀಕರಣ ಮಾಡಿದರೂ ಸಹ ಈ ವರೆಗೆ ಎರಡು ಪೋಸ್ಟರ್ ಹಾಗೂ ಒಂದು ಮೇಕಿಂಗ್ ವಿಡಿಯೋ ಅನ್ನಷ್ಟೆ ರಿಷಬ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಟ್ರೈಲರ್ ಮೂಲಕ ಇದೇ ಮೊದಲ ಬಾರಿಗೆ ಪ್ರೇಕ್ಷಕರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಿರು ದರ್ಶನ ಮಾಡಲಿದ್ದಾರೆ.

‘ಕೆಜಿಎಫ್ 2’ ಸಿನಿಮಾದ ಟ್ರೈಲರ್ ಪ್ಯಾನ್ ಇಂಡಿಯಾ ಲೆವೆಲ್​​​ನಲ್ಲಿ ಅತ್ಯಂತ ವೀಕ್ಷಣೆ ಪಡೆದ ದಾಖಲೆಯನ್ನು ಆಗ ಮಾಡಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೈಲರ್ ಈ ಹಿಂದಿನ ಹಲವು ದಾಖಲೆಗಳನ್ನು ಕೆಡವಿ ಹಾಕಿ ಹೊಸ ದಾಖಲೆಯನ್ನು ಬರೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Fri, 19 September 25