‘ಕಾಂತಾರ’ ಕಲೆಕ್ಷನ್: ನಂಬರ್ 1 ಆಗಲು ಇಡಬೇಕಿರುವುದು ಕೆಲವೇ ಹೆಜ್ಜೆ

Kantara Chapter 1: ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಕೇವಲ 15 ದಿನಗಳಲ್ಲಿ ಸುಮಾರು 700 ಕೋಟಿ ಕಲೆಕ್ಷನ್ ಮಾಡಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಂಬರ್ 1 ಆಗಲು ಕೆಲವೇ ಹೆಜ್ಜೆಗಳನ್ನಷ್ಟೆ ಇಡಬೇಕಿದೆ. ಇಲ್ಲಿದೆ ಈ ಬಗ್ಗೆ ಪೂರ್ಣ ಮಾಹಿತಿ...

‘ಕಾಂತಾರ’ ಕಲೆಕ್ಷನ್: ನಂಬರ್ 1 ಆಗಲು ಇಡಬೇಕಿರುವುದು ಕೆಲವೇ ಹೆಜ್ಜೆ
Kantara Chapter 1

Updated on: Oct 17, 2025 | 7:26 AM

ಕಾಂತಾರ: ಚಾಪ್ಟರ್ 1’ (Kanatara Chapter 1) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆ ಆಗಿ ಕೇವಲ 15 ದಿನಗಳಾಗಿದ್ದು ಈಗಾಗಲೇ ವಿಶ್ವ ಬಾಕ್ಸ್ ಆಫೀಸ್​​​ನಲ್ಲಿ ಸುಮಾರು 700 ಕೋಟಿ ಕಲೆಕ್ಷನ್ ಮಾಡಿ ಮುಗಿಸಿದೆ. ಸಿನಿಮಾ ಬಿಡುಗಡೆ ಆಗಿ 15 ದಿನಗಳಾಗಿದ್ದರೂ ಸಹ ಪ್ರತಿ ದಿನ ಎರಡಂಕಿಯಲ್ಲಿಯೇ ಕಲೆಕ್ಷನ್ ಮಾಡುತ್ತಿದ್ದು, ಇದೀಗ ಮತ್ತೊಂದು ವೀಕೆಂಡ್ ಸಹ ಬಂದಿರುವುದು ಸಿನಿಮಾದ ಗಳಿಕೆ ಮತ್ತೆ ಏರಿಕೆ ಆಗುವ ನಿರೀಕ್ಷೆ ಇದೆ. ಅಂದಹಾಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಂಬರ್ 1 ಆಗಲಿದೆ.

ಈ ವರ್ಷ ಬಿಡುಗಡೆ ಆದ ಸಿನಿಮಾಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಳ್ಳಲಿದೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ. ಈ ವರ್ಷದ ಆರಂಭದಲ್ಲಿ ಬಿಡುಗಡೆ ಆಗಿದ್ದ ಹಿಂದಿಯ ‘ಛಾವಾ’ ಸಿನಿಮಾ ಸುಮಾರು 90 ದಿನಗಳಲ್ಲಿ 830 ಕೋಟಿ ರೂಪಾಯಿ ವರ್ಲ್ಡ್​​ವೈಡ್ ಕಲೆಕ್ಷನ್ ಮಾಡಿತ್ತು. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದ ಆ ಸಿನಿಮಾನಲ್ಲಿ ಛತ್ರಪತಿ ಶಿವಾಜಿಯ ಪುತ್ರ ಸಂಬಾಜಿಯ ಕತೆಯನ್ನು ಹೇಳಲಾಗಿತ್ತು. ಆದರೆ ಇದೀಗ ರಿಷಬ್ ಅವರ ಸಿನಿಮಾ ‘ಛಾವಾ’ ಸಿನಿಮಾದ ದಾಖಲೆಯನ್ನು ಮುರಿದು ನಂಬರ್ 1 ಆಗುವತ್ತ ದಾಪುಗಾಲಿಟ್ಟಿದೆ.

ಇದನ್ನೂ ಓದಿ:ಕಾಂತಾರ ಚಾಪ್ಟರ್ 1: ರಿಷಬ್ ಶೆಟ್ಟಿ ಕಂಡು ರೊಚ್ಚಿಗೆದ್ದ ಮೈಸೂರಿನ ಅಭಿಮಾನಿಗಳು

‘ಛಾವಾ’ ಸಿನಿಮಾ 90 ದಿನಗಳಲ್ಲಿ 830 ಕೋಟಿ ಗಳಿಕೆ ಮಾಡಿತ್ತು. ಆದರೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೇವಲ ಎರಡು ವಾರಗಳಲ್ಲಿ ಸುಮಾರು 700 ಕೋಟಿ ಹಣವನ್ನು ವಿಶ್ವದಾದ್ಯಂತ ಗಳಿಕೆ ಮಾಡಿದೆ. ಈ ದೀಪಾವಳಿ ಮುಗಿಯುವ ವೇಳೆಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈ ವರ್ಷ ಬಿಡುಗಡೆ ಆಗಿ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಸಿನಿಮಾ ಎನಿಸಿಕೊಳ್ಳಲಿದೆ. ಅದು ಮಾತ್ರವೇ ಅಲ್ಲದೆ, 1000 ಕೋಟಿ ಗಳಿಕೆಯ ಮೈಲಿಗಲ್ಲಿನತ್ತ ಗುರಿ ನೆಡಲಿದೆ. ಈ ವರ್ಷ ಬಿಡುಗಡೆ ಆದ ಯಾವ ಸಿನಿಮಾ ಸಹ ಸಾವಿರ ಕೋಟಿ ರೂಪಾಯಿ ಹಣ ಕಲೆಕ್ಷನ್ ಮಾಡಿಲ್ಲ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲೆಕ್ಷನ್ ಸ್ಪೀಡ್ ನೋಡಿದರೆ 1000 ಕೋಟಿ ಗಳಿಕೆ ಮಾಡುವ ನಿರೀಕ್ಷೆ ಇದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಕರ್ನಾಟಕದಲ್ಲಿ ಮಾತ್ರವೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಪ್ರಾಂತ್ಯಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕಲೆಕ್ಷನ್ 150 ಕೋಟಿ ರೂಪಾಯಿ ದಾಟಿದ್ದು, ಬಲು ವೇಗವಾಗಿ 200 ಕೋಟಿಯತ್ತ ನುಗ್ಗುತ್ತಿದೆ. ತಮಿಳುನಾಡಿನಲ್ಲಿ 50 ಕೋಟಿ ಕಲೆಕ್ಷನ್ ಅನ್ನು ದಾಟಿ ಕೆಲ ದಿನಗಳೇ ಆಗಿವೆ. ಇನ್ನು ಆಂಧ್ರ ಮತ್ತು ತೆಲಂಗಾಣಗಳಲ್ಲಿ ಈಗಾಗಲೇ ಸಿನಿಮಾ 100 ಕೋಟಿ ಕಲೆಕ್ಷನ್ ಮಾಡಿ ಆಗಿದೆ. ಕೇರಳದಲ್ಲಿಯೂ ಸಹ ಕಲೆಕ್ಷನ್ ಉತ್ತಮವಾಗಿಯೇ ಇದೆ. ಈಗ ವೀಕೆಂಡ್ ಮತ್ತು ದೀಪಾವಳಿ ರಜೆ ಬಂದಿರುವ ಕಾರಣ ‘ಕಾಂತಾರ: ಚಾಪ್ಟರ್ 1’ ಕಲೆಕ್ಷನ್ ಇನ್ನಷ್ಟು ಉತ್ತಮಗೊಳ್ಳುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ