ಕೆಜಿಎಫ್ ಚಾಪ್ಟರ್-1 ಚಿತ್ರಕ್ಕೆ ಪೈರಸಿ ಕಂಟಕ ಎದುರಾಗಿತ್ತು. ಈಗ ಕೆಜಿಎಫ್-2 ಸಿನಿಮಾದ ಟೀಸರ್ಗೂ ಪೈರಸಿ ಕಾಟ ಕಂಟಕವಾಗಿದೆ. ಯಶ್ ಅಭಿನಯದ ಕೆಜಿಎಫ್-2 ಟೀಸರ್ ಒಂದು ದಿನ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ ಎನ್ನಲಾಗುತ್ತಿದೆ.
ಹೌದು, ಯಶ್ ಜನ್ಮದಿನದ ಅಂಗವಾಗಿ ನಾಳೆ (ಡಿ.8) ಕೆಜಿಎಫ್-2 ಸಿನಿಮಾ ಟೀಸರ್ ರಿಲೀಸ್ ಆಗಬೇಕಿತ್ತು. ಇದಕ್ಕಾಗಿ ಭಾರೀ ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ. ಆದರೆ, ಈಗ ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಒಂದು ಹರಿದಾಡುತ್ತಿದ್ದು, ಇದು ಕೆಜಿಎಫ್-2ನದ್ದೇ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಅಂದಹಾಗೆ, ಈ ಟೀಸರ್ ರಿಲೀಸ್ ಆಗಿದ್ದು ಹೇಗೆ? ರಿಲೀಸ್ ಆದ ಟೀಸರ್ ಕೆಜಿಎಫ್-2ನದ್ದೇನಾ ಎನ್ನುವ ಪ್ರಶ್ನೆಗೆ ಚಿತ್ರತಂಡದಿಂದ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಇನ್ನು ಹೊಂಬಾಳೆ ಫಿಲ್ಮ್ಸ್ನ ಕಾರ್ಯಕಾರಿ ನಿರ್ಮಾಪಕ ಕೂಡ ಟೀಸರ್ ಲೀಕ್ ಆದ ವಿಚಾರವನ್ನು ಖಚಿತಪಡಿಸಿದ್ದಾರೆ. ನೀವು ಹ್ಯಾಕ್ ಮಾಡಬಹುದು. ನೀವು ಲೀಕ್ ಮಾಡಬಹುದು. ನೀವು ಮೊದಲೇ ಟಾರ್ಗೆಟ್ ತಲುಪಬಹುದು. ಆದರೆ, ಪ್ರಾಮಾಣಿಕ ವ್ಯಕ್ತಿಯೇ ಯಾವಾಗಲೂ ದೊಡ್ಡ ಆಟವನ್ನು ಗೆಲ್ಲೋದು. ರಾಕಿ ಬಾಯ್ ಯಾವಾಗಲೂ ಗೆಲ್ಲುತ್ತಾರೆ. KGFChapter ಇಂದು 9.29ಕ್ಕೇ ಪ್ರೀಮಿಯರ್ ಆಗಲಿದೆ ಎಂದಿದ್ದಾರೆ.
U may hack, u may leak
U may reach the target early but the honest men wins the big game always.#RockyBhai wins always#KGFChapter2 teaser premiered today at 929pm— Karthik Gowda (@Karthik1423) January 7, 2021
Published On - 9:05 pm, Thu, 7 January 21