Kichcha Sudeep: ಕಿಚ್ಚ ಸುದೀಪ್ ಆರೋಗ್ಯಕ್ಕಾಗಿ ವಿಡಿಯೋ ಮಾಡಿ ಪ್ರಾರ್ಥಿಸಿದ ಜಪಾನ್​ ಮಹಿಳೆ

ನಟ ಸುದೀಪ್​ ಅವರು ಜಪಾನ್​ನಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ಅದಕ್ಕೆ ಒಂದು ವಿಡಿಯೋ ಸಾಕ್ಷಿ ಒದಗಿಸುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ಆ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

Kichcha Sudeep: ಕಿಚ್ಚ ಸುದೀಪ್ ಆರೋಗ್ಯಕ್ಕಾಗಿ ವಿಡಿಯೋ ಮಾಡಿ ಪ್ರಾರ್ಥಿಸಿದ ಜಪಾನ್​ ಮಹಿಳೆ
ಜಪಾನ್​ನಲ್ಲಿರುವ ಸುದೀಪ್​ ಅಭಿಮಾನಿ
Edited By:

Updated on: Apr 26, 2021 | 5:12 PM

ಕಿಚ್ಚ ಸುದೀಪ್​ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಅವರ ಸಿನಿಮಾಗಳನ್ನು ನೋಡಿ ಸಿನಿಪ್ರಿಯರು ಎಂಜಾಯ್​ ಮಾಡುತ್ತಾರೆ. ಅಷ್ಟೇ ಅಲ್ಲ, ಜಪಾನ್​ನಲ್ಲಿಯೂ ಸುದೀಪ್​ ಅಭಿಮಾನಿಗಳನ್ನು ಹೊಂದಿದ್ದಾರೆ. ಅದಕ್ಕೆ ಒಂದು ವಿಡಿಯೋ ಸಾಕ್ಷಿ ಒದಗಿಸುತ್ತಿದೆ. ಜಪಾನಿನ ಮಹಿಳೆಯೊಬ್ಬರು ಸುದೀಪ್​ಗಾಗಿ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಅದು ಈಗ ಎಲ್ಲ ಕಡೆ ವೈರಲ್​ ಆಗುತ್ತಿದೆ.

ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್​ ಅವರ ಆರೋಗ್ಯದಲ್ಲಿ ವ್ಯತ್ಯಯ ಆಗಿದೆ. ಶೂಟಿಂಗ್​ ಚಟುವಟಿಕೆಗಳಿಗೆ ಸಂಪೂರ್ಣ ಬ್ರೇಕ್​ ಹಾಕಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಚಿಕಿತ್ಸೆ ಮುಂದುವರಿಯುತ್ತಿದೆ. ಆದರೂ ಅವರು ಪೂರ್ತಿ ಗುಣಮುಖರಾಗಿಲ್ಲ. ಈ ಸಂದರ್ಭದಲ್ಲಿ ಅವರ ಆರೋಗ್ಯಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅದರಲ್ಲಿ ಜಪಾನಿನ ಮಹಿಳೆ ಕೂಡ ಇದ್ದಾರೆ. ಕಿಚ್ಚ ಬೇಗ ಗುಣಮುಖರಾಗಲಿ ಎಂದು ಆ ಮಹಿಳೆ ಹಾರೈಸಿದ್ದಾರೆ.

‘ನಮಸ್ಕಾರ ಸುದೀಪ್​ ಸರ್​. ಈಗ ಹೇಗಿದ್ದೀರಿ? ನೀವು ಬೇಗ ಗುಣಮುಖರಾಗಿ ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ. ನನ್ನ ಹೃದಯದಾಳದಿಂದ ಈ ಮಾತು ಹೇಳುತ್ತಿದ್ದೇನೆ. ದಯವಿಟ್ಟು ನಿಮ್ಮ ಕಾಳಜಿ ವಹಿಸಿ. ಜಪಾನ್​ನಿಂದ ನಿಮಗಿದು ಪ್ರೀತಿಯ ಸಂದೇಶ’ ಎಂದು ಆ​ ಮಹಿಳೆ ವಿಡಿಯೋದಲ್ಲಿ ಮಾತನಾಡಿದ್ದಾರೆ. ಇದನ್ನು ಕಿಚ್ಚನ ಅಭಿಮಾನಿಗಳು ತಮ್ಮ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಅನಾರೋಗ್ಯದ ಕಾರಣದಿಂದ ಸುದೀಪ್​ ಅವರು ಬಿಗ್​ ಬಾಸ್​ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಅವರು ಇಲ್ಲದ ಕಾರಣ ವಾರದ ಕಥೆ ಕಿಚ್ಚನ ಜೊತೆ ಮತ್ತು ಸೂಪರ್​ ಸಂಡೇ ವಿತ್​ ಸುದೀಪ ಎಪಿಸೋಡ್​ಗಳನ್ನು ರದ್ದು ಮಾಡಲಾಗಿದೆ. ಸ್ಪರ್ಧಿಗಳಿಗೆ ಎಂದಿನಂತೆ ಟಾಸ್ಕ್​ಗಳನ್ನು ನೀಡುವ ಮೂಲಕ ಶನಿವಾರವನ್ನು ಎಂಗೇಜ್​ ಮಾಡಲಾಗುತ್ತಿದೆ. ಭಾನುವಾರ ಸುದೀಪ್​ ಇಲ್ಲದೆಯೂ ಎಲಿಮಿನೇಷನ್​ ನಡೆದಿದೆ. ಕಳೆದ ಎರಡು ವಾರದ ವೀಕೆಂಡ್​ ಇದೇ ರೀತಿ ಮುಂದುವರಿದುಕೊಂಡು ಬಂದಿದೆ.

ಸುದೀಪ್​ಗೆ ಅನಾರೋಗ್ಯ ಎಂಬ ವಿಷಯ ಗೊತ್ತಾಗುತ್ತಿದ್ದಂತೆಯೇ ಬಿಗ್ ಬಾಸ್​ ಸ್ಪರ್ಧಿಗಳಿಗೆ ತುಂಬ ಬೇಸರವಾಗಿತ್ತು. ಅವರೆಲ್ಲರೂ ಪ್ರೀತಿಯಿಂದ ಸುದೀಪ್​ಗೆ ಪತ್ರ ಬರೆದು, ಅಡುಗೆ ಮಾಡಿ ಕಳಿಸಿದ್ದರು. ಅದಕ್ಕೆ ​ಪ್ರತಿಕ್ರಿಯಿಸಿದ ಸುದೀಪ್​ ಅವರು ಆದಷ್ಟು ಬೇಗ ಗುಣಮುಖವಾಗಿ ಬರುತ್ತೇನೆ ಎಂದು ಭರವಸೆ ನೀಡಿದ್ದರು. ಮುಂದಿನ ವಾರವಾದರೂ ವೀಕೆಂಡ್​ ಎಪಿಸೋಡ್​ಗಳನ್ನು ಕಿಚ್ಚ ನಡೆಸಿಕೊಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ, ಅನೇಕ ಸೆಲೆಬ್ರಿಟಿಗಳು ಕೂಡ ಸುದೀಪ್​ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!

Kichcha Sudeep: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​ಪ್ರೈಸ್​; ಮನೆಯಲ್ಲಿ ಕೊನೆಗೂ ಕೇಳ್ತು ಸುದೀಪ್​ ಧ್ವನಿ!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us