
ಕಿಚ್ಚ ಸುದೀಪ್ (Kichcha Sudeep) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ವಿಕ್ರಾಂತ್ ರೋಣ’ ಸಿನಿಮಾದಿಂದ ಬಾಲಿವುಡ್ನಲ್ಲಿ ಅವರಿಗೆ ಅಭಿಮಾನಿಗಳು ಹೆಚ್ಚಿದ್ದಾರೆ. ಈಗ ಸುದೀಪ್ ಜನ್ಮದಿನಕ್ಕೆ ಕೌಂಟ್ಡೌನ್ ಶುರುವಾಗಿದೆ. ಸೆಪ್ಟೆಂಬರ್ 2ರಂದು ಸುದೀಪ್ 49ನೇ ವರ್ಷದ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈಗ ಶಿವರಾಜ್ಕುಮಾರ್ (Shivarajkumar) ಅವರು ಕಾಮನ್ ಡಿಪಿ ಅನಾವರಣ ಮಾಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಕಿಚ್ಚ ಸುದೀಪ್ ಅವರಿಗೆ ಬರ್ತ್ಡೇ ವಿಶೇಷವಾಗಿರಲಿದೆ. ಇದಕ್ಕೆ ಕಾರಣ ‘ವಿಕ್ರಾಂತ್’ ರೋಣ ಸಿನಿಮಾದ ಯಶಸ್ಸು. ಜುಲೈ 29ರಂದು ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಸುದೀಪ್ ಹಾಗೂ ಅವರ ಫ್ಯಾನ್ಸ್ ಖುಷಿಯನ್ನು ಹೆಚ್ಚಿಸಿದೆ. ಈ ಕಾರಣಕ್ಕೆ ಕಿಚ್ಚನಿಗೆ ಈ ಬಾರಿಯ ಬರ್ತ್ಡೇ ವಿಶೇಷವಾಗಿರಲಿದೆ.
ಆದರೆ, ಈ ಬಾರಿ ಸುದೀಪ್ ಬರ್ತ್ಡೇ ಆಚರಿಸಿಕೊಳ್ಳುವುದು ಅನುಮಾನವೇ. ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿ ಒಂದು ವರ್ಷ ಕಳೆದಿಲ್ಲ. ಅವರಿಲ್ಲ ಎಂಬ ನೋವು ಈಗಲೂ ಫ್ಯಾನ್ಸ್ಗೆ ಕಾಡುತ್ತಿದೆ. ಸುದೀಪ್ ಅವರಿಗೂ ಪುನೀತ್ಗೂ ಒಳ್ಳೆಯ ಬಾಂಧವ್ಯ ಇತ್ತು. ಆದರೆ, ಅವರಿಲ್ಲ ಎಂಬ ನೋವು ಸುದೀಪ್ಗೆ ಅತಿಯಾಗಿ ಕಾಡುತ್ತಿದೆ. ಈ ಕಾರಣದಿಂದ ಅವರು ಈ ಬಾರಿ ಜನ್ಮದಿನ ಆಚರಿಸಿಕೊಳ್ಳುವುದು ಅನುಮಾನವೇ. ಈ ಬಗ್ಗೆ ಅವರ ಕಡೆಯಿಂದ ಶೀಘ್ರವೇ ಘೋಷಣೆ ಆಗಬೇಕಿದೆ.
ಸುದೀಪ್ ಅವರ ಬರ್ತ್ಡೇಗೂ ಮೊದಲು ಕಾಮನ್ ಡಿಪಿ ಬಿಡುಗಡೆ ಮಾಡಲಾಗಿದೆ. ಶಿವಣ್ಣ ಅವರು ಕಾಮನ್ ಡಿಪಿಯನ್ನು ಅನಾವರಣ ಮಾಡಿದ್ದಾರೆ. ಇದು ಸಾಕಷ್ಟು ಗಮನ ಸೆಳೆಯುತ್ತಿದೆ. ಸುದೀಪ್ ಅವರು ಕುಳಿತಿದ್ದಾರೆ. ಅವರ ಹೆಗಲಮೇಲೆ, ಕೈ ಮೇಲೆ, ನೆಲದಮೇಲೆ ಫ್ಯಾನ್ಸ್ ಕುಳಿತಿದ್ದಾರೆ. ಹಿಂಭಾಗದಲ್ಲಿ ‘ಬಾದ್ಶಾ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ನಡೆಸಿಕೊಡಲೇ ಇಲ್ಲ ಸಾನ್ಯಾ ಅಯ್ಯರ್
ಕಿಚ್ಚ ಸುದೀಪ್ ಬರ್ತ್ಡೇಗೆ ಒಂದು ವಿಶೇಷ ಗಿಫ್ಟ್ ಸಿಗುತ್ತಿದೆ. ‘ವಿಕ್ರಾಂತ್ ರೋಣ’ ಸಿನಿಮಾ ಸೆಪ್ಟೆಂಬರ್ 2ರಂದು ಜೀ5 ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆಗುತ್ತಿದೆ. ಇದು ಸುದೀಪ್ ಫ್ಯಾನ್ಸ್ಗೆ ಖುಷಿ ನೀಡಿದೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಈ ಚಿತ್ರವನ್ನು ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು. ಅದು ಸುದೀಪ್ ಬರ್ತ್ಡೇ ದಿನವೇ ಅನ್ನೋದು ವಿಶೇಷ.