
ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ ಅದಕ್ಕೂ ಹೆಚ್ಚಾಗಿ ಪ್ರೀತಿ ಇದೆ. ಇದಕ್ಕೆ ತಕ್ಕಂತೆ ಚಿತ್ರದ ಹಾಡುಗಳೂ ಗಮನ ಸೆಳೆಯುತ್ತಿವೆ.

ಇಂದು (ಮಾ.11) ‘ಜೇಮ್ಸ್’ ಚಿತ್ರದ ‘ಸಲಾಮ್ ಸೋಲ್ಜರ್’ ಹಾಡನ್ನು ರಿಲೀಸ್ ಮಾಡಲಾಗಿದೆ.

ವಿಶೇಷವೆಂದರೆ ಹಾಡನ್ನು ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡಿದ್ದು ಪುನೀತ್ ಬಹುಕಾಲದ ಸ್ನೇಹಿತ ಕಿಚ್ಚ ಸುದೀಪ್.

ಹಾಡನ್ನು ನೋಡಿ ಇಷ್ಟಪಟ್ಟಿರುವ ಕಿಚ್ಚ ಚಿತ್ರತಂಡಕ್ಕೆ ಶುಭಾಶಯ ಹೇಳಿದ್ದಾರೆ.

‘ಪುನೀತ್ಗೆ ಸರಿಸಾಟಿ ಯಾರೂ ಇಲ್ಲ’ ಎಂದು ಹೇಳಿರುವ ಸುದೀಪ್, ಅವರ ನಟನೆಯನ್ನು ಕಣ್ತುಂಬಿಕೊಳ್ಳಬೇಕು ಎಂದು ನುಡಿದಿದ್ದಾರೆ.

ಇದಲ್ಲದೇ ಅಪ್ಪು ಅಭಿಮಾನಿಗಳಿಗೆ ಪ್ರೀತಿಯ ಮಾತುಗಳನ್ನೂ ಸುದೀಪ್ ಆಡಿದ್ದಾರೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಹಾಡು ವೈರಲ್ ಆಗುತ್ತಿರುವಂತೆಯೇ ಕಿಚ್ಚ ಹಾಗೂ ಅಪ್ಪು ಜತೆಗಿರುವ ಫೋಟೋಗಳನ್ನೂ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ಹಲವು ಭಾಷೆಗಳಲ್ಲಿ ತೆರೆ ಕಾಣಲಿದೆ. ಇದನ್ನು ಹಬ್ಬದ ರೀತಿ ಸಂಭ್ರಮಿಸಲು ಅಪ್ಪು ಅಭಿಮಾನಿಗಳು ತಯಾರಿ ನಡೆಸುತ್ತಿದ್ದಾರೆ.
Published On - 4:47 pm, Fri, 11 March 22