Vikrant Rona: 3ಡಿ ರೂಪದಲ್ಲಿ ತೆರೆಗಪ್ಪಳಿಸಲಿದೆ ಆರಡಿ ಕಟೌಟ್ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ

| Updated By: ಆಯೇಷಾ ಬಾನು

Updated on: Apr 15, 2021 | 12:31 PM

Vikrant Rona 3D Version: ದುಬೈನ ಬುರ್ಜ್​ ಖಲೀಫಾ (Burj Khalifa) ಕಟ್ಟಡದಲ್ಲಿ ನಿಂತು ಚಿತ್ರದ ಟೀಸರ್​ ಬಿಡುಗಡೆ ಮಾಡುವ ಮೂಲಕ ಹುಬ್ಬೇರುವಂತೆ ಮಾಡಿದ್ದ ವಿಕ್ರಾಂತ್ ರೋಣ ಚಿತ್ರತಂಡ ಇದೀಗ ಮತ್ತೊಂದು ಘೋಷಣೆ ಮಾಡಿದ್ದು, ಚಿತ್ರವನ್ನು 3ಡಿ ವರ್ಷನ್​ನಲ್ಲಿ (3D Version) ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.

Vikrant Rona: 3ಡಿ ರೂಪದಲ್ಲಿ ತೆರೆಗಪ್ಪಳಿಸಲಿದೆ ಆರಡಿ ಕಟೌಟ್ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ
ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್​ ರೋಣ ಸಿನಿಮಾ 3ಡಿ ರೂಪದಲ್ಲಿ ತೆರೆಕಾಣಲಿದೆ ಎಂಬ ಸುದ್ದಿ ಹೊಸ ಸಂಚಲನ ಮೂಡಿಸಿದೆ.
Follow us on

ಬೆಂಗಳೂರು: ಕಿಚ್ಚ ಸುದೀಪ್​ (Kichcha Sudeepa) ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್​ ರೋಣ (Vikrant Rona) ಈಗಾಗಲೇ ಎಲ್ಲರ ಗಮನ ಸೆಳೆದಿದೆ. ದುಬೈನ ಬುರ್ಜ್​ ಖಲೀಫಾ (Burj Khalifa) ಕಟ್ಟಡದಲ್ಲಿ ನಿಂತು ಚಿತ್ರದ ಟೀಸರ್​ ಬಿಡುಗಡೆ ಮಾಡುವ ಮೂಲಕ ಹುಬ್ಬೇರುವಂತೆ ಮಾಡಿದ್ದ ಚಿತ್ರತಂಡ ಇದೀಗ ಮತ್ತೊಂದು ಘೋಷಣೆ ಮಾಡಿದ್ದು, ಚಿತ್ರವನ್ನು 3ಡಿ ವರ್ಷನ್​ನಲ್ಲಿ (3D Version) ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಈ ಬಗ್ಗೆ ಸುಳಿವು ನೀಡಿರುವ ಕಾರಣ ಚಿತ್ರದ ಬಗೆಗಿದ್ದ ನಿರೀಕ್ಷೆ ಮುಗಿಲೆತ್ತರಕ್ಕೆ ಹೋಗಿದೆ.

ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷ ಪೂರೈಸಿದ ಸಂಭ್ರಮವನ್ನು ದೆಹಲಿಯಲ್ಲಿ ಆಚರಿಸಿ ಬೆಂಗಳೂರಿಗೆ ಹಿಂತಿರುಗಿರುವ ಕಿಚ್ಚ ಸುದೀಪ್ ಈ ವಿಷಯವನ್ನು ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಬಹುಭಾಷೆಯಲ್ಲಿ ತೆರೆಕಾಣಲಿದೆ. ಅದರಲ್ಲಿಯೂ ಕೇವಲ ಭಾರತೀಯ ಭಾಷೆಗಳಿಗೆ ಸೀಮಿತವಾಗದೆ ದೇಶದ ಗಡಿ ದಾಟಿ ಹೋಗಲಿದೆ ಎಂಬ ಸುದ್ದಿ ಈಗಾಗಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು.

 3ಡಿ ವರ್ಷನ್.. ಬಿಸಿ ಹೋಳಿಗೆಯ ಮೇಲೆ ತುಪ್ಪ ಸುರಿದಂತಾಗಿದೆ
ಆ ಖುಷಿಯ ನಡುವೆಯೇ ಚಿತ್ರ 3ಡಿ ವರ್ಷನ್​ನಲ್ಲಿ ತೆರೆಕಾಣಲಿದೆ ಎನ್ನುವ ವಿಚಾರ ಬಿಸಿ ಹೋಳಿಗೆಯ ಮೇಲೆ ತುಪ್ಪ ಸುರಿದಂತಾಗಿದೆ. ಕನ್ನಡದಲ್ಲಿ 3ಡಿ ಚಿತ್ರಗಳು ತೆರೆಕಂಡಿರುವುದು ಬೆರಳೆಣಿಕೆಯಷ್ಟು ಮಾತ್ರ ಆಗಿರುವುದರಿಂದ ಇಲ್ಲಿನ ಪ್ರೇಕ್ಷಕರು ಸಹಜವಾಗಿಯೇ ವಿಕ್ರಾಂತ್​ ರೋಣ ಬಿಡುಗಡೆಯನ್ನು ಸಂಭ್ರಮಿಸಲಿದ್ದಾರೆ.

ಸದ್ಯಕ್ಕಿಲ್ಲವೇ ಬಿಡುಗಡೆ?
ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸದ್ದು ಮಾಡುತ್ತಿರುವ ವಿಕ್ರಾಂತ್ ರೋಣ ಯಾವಾಗ ತೆರೆಕಾಣಲಿದೆ ಎಂಬ ಪ್ರಶ್ನೆಗೆ ಮಾತ್ರ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕೆಲ ಮೂಲಗಳ ಪ್ರಕಾರ ಚಿತ್ರ ಆಗಸ್ಟ್ ನಂತರವೇ ತೆರೆಗೆ ಬರುವ ಸಾಧ್ಯತೆ ಇದೆ. ಒಂದುವೇಳೆ ಬೇಗ ಬರುವುದೇ ಹೌದಾದಲ್ಲಿ ಜೂನ್​ ತಿಂಗಳಲ್ಲಿ ಬಿಡುಗಡೆಯಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಅದೇನೇ ಆದರೂ ಈ ವರ್ಷದಲ್ಲಿ ಸುದೀಪ್ ಅಭಿಮಾನಿಗಳಿಗೆ ದೊಡ್ಡ ಹಬ್ಬವೊಂದನ್ನು ಆಚರಿಸುವ ಘಳಿಗೆ ಬರುವುದು ನಿಶ್ಚಿತ.

Kotigobba 3: ಕೋಟಿಗೊಬ್ಬ 3 ತಂಡದಿಂದ ಹೊರಬಿತ್ತು ಬಿಸಿಬಿಸಿ ಸುದ್ದಿ.. ಕಿಚ್ಚನ ಅಭಿಮಾನಿಗಳಿಗೆ ಸದ್ಯದಲ್ಲೇ ಸಿಹಿಯೂಟ

Published On - 5:48 pm, Tue, 9 February 21