
ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ (Vikrant Rona Movie) ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡದಿಂದ ಈಗ ರಿಲೀಸ್ ದಿನಾಂಕ (Vikrant Rona Release Date) ಕೂಡ ಘೋಷಣೆ ಆಗಿದೆ. 2022ರ ಫೆ.24ರಂದು ವಿಶ್ವಾದ್ಯಂತ ‘ವಿಕ್ರಾಂತ್ ರೋಣ’ ತೆರೆಕಾಣಲಿದೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಕಿಚ್ಚ ಸುದೀಪ್ ಮತ್ತು ಚಿತ್ರತಂಡದವರು ಬಹಿರಂಗಪಡಿಸಿದ್ದಾರೆ. ‘ರಂಗಿತರಂಗ’ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ( Anup Bhandari) ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ಜಾಕ್ ಮಂಜುನಾಥ್ ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟೀಸರ್ ಮೂಲಕ ‘ವಿಕ್ರಾಂತ್ ರೋಣ’ ಭರ್ಜರಿ ಸೌಂಡ್ ಮಾಡಿದೆ. ಕಿಚ್ಚನ ಗೆಟಪ್ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ವಿಶೇಷ ಏನೆಂದರೆ, 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ರಿಲೀಸ್ ಡೇಟ್ ಅನೌನ್ಸ್ ಮಾಡಲು ‘ವಿಕ್ರಾಂತ್ ರೋಣ’ ತಂಡ ಒಂದು ಟೀಸರ್ ಬಿಡುಗಡೆ ಮಾಡಿದೆ. ಕಿಚ್ಚ ಸುದೀಪ್ ಅವರು ಬೈಕ್ ಏರಿ ಖಡಕ್ ಪೋಸ್ ನೀಡಿದ್ದಾರೆ. ದಟ್ಟ ಕಾನನದ ಹಿನ್ನೆಲೆಯಲ್ಲಿ ಈ ಕಥೆ ಸಾಗಲಿದೆ ಎಂಬುದನ್ನು ಈ ಟೀಸರ್ ಸಾರಿ ಹೇಳುತ್ತಿದೆ. ‘2022ರ ಫೆ.24ರಂದು ಈ ಜಗತ್ತಿಗೆ ಹೊಸ ಹೀರೋ ಸಿಗಲಿದ್ದಾನೆ’ ಎಂಬ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ.
ಹಲವು ಕಾರಣಗಳಿಂದಾಗಿ ಈ ಸಿನಿಮಾ ಕೌತುಕ ಮೂಡಿಸಿದೆ. ಕಾಡಿನ ಸೆಟ್ ಹಾಕಿ ಬಹುತೇಕ ದೃಶ್ಯಗಳನ್ನು ಶೂಟ್ ಮಾಡಲಾಗಿದೆ. 3ಡಿ ಅವತರಣಿಕೆಯಲ್ಲಿ ‘ವಿಕ್ರಾಂತ್ ರೋಣ’ ರಿಲೀಸ್ ಆಗಲಿರುವುದು ಕೂಡ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ ಕೂಡ ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ನಟಿ ನೀತಾ ಅಶೋಕ್ ಅವರು ಪಾತ್ರವೂ ಗಮನ ಸೆಳೆಯಲಿದೆ. ವಿಶೇಷ ಎಂದರೆ, ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಒಂದು ಸ್ಪೆಷಲ್ ಸಾಂಗ್ನಲ್ಲೂ ಅವರು ಡ್ಯಾನ್ಸ್ ಮಾಡಿದ್ದಾರೆ. ಅವರ ಪಾತ್ರಕ್ಕೆ ಗಡಂಗ್ ರಕ್ಕಮ್ಮ ಎಂದು ಹೆಸರು ಇಡಲಾಗಿದೆ. ಹೀಗೆ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿವೆ.
ಇದನ್ನೂ ಓದಿ:
ಸುದೀಪ್ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್ ರಾಜ್ಕುಮಾರ್ ಭಾವಚಿತ್ರ
ಕ್ರಿಕೆಟ್, ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್; ‘83’ ಟೀಮ್ ಜತೆ ಸೇರಿಕೊಂಡ ಕಿಚ್ಚ ಸುದೀಪ್
Published On - 1:26 pm, Tue, 7 December 21